"ದರ್ಶನ-ಪವಿತ್ರಾ" ಯಕ್ಷಗಾನಕ್ಕೂ ಎಂಟ್ರಿ: ವಿಡಿಯೋ ಭಾರೀ ವೈರಲ್
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡದುಕೊಳ್ಳುತ್ತಲೇ ಇದೆ. ಪ್ರಕರಣದ ಎ1 ಆರೋಪಿ ಪವಿತ್ರ ಗೌಡ ಆಗಿದ್ದು, ಎ2 ಆರೋಪಿ ನಟ ದರ್ಶನ್ ಆಗಿದ್ದಾರೆ. ಈಗಾಗಲೇ ಈ ಬಗ್ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವನ್ನೇ ಇಟ್ಟುಕೊಂಡು ರೀಲ್ಸ್ ಮಾಡಿರುವ ವಿಡಿಯೋಗಳು ಭಾರೀ ವೈರಲ್ ಆಗುತ್ತಿವೆ. ಹಾಗೆಯೇ ಇದೀಗ ದರ್ಶನ್, ಪವಿತ್ರಾ ಗೌಡ ವಿಚಾರ ಯಕ್ಷಗಾನಕ್ಕೂ ಎಂಟ್ರಿ ಕೊಟ್ಟಿದ್ದು, ಈ ವಿಡಿಯೋ ಸಹ ಸಖತ್ ಸದ್ದು ಮಾಡುತ್ತಿವೆ.
ಈ ಪ್ರಕರಣ ಬರೀ ರಾಜ್ಯ ಅಲ್ಲದೆ, ಇಡೀ ದೇಶಾದ್ಯಂತ ಹರಡಿಬಿಟ್ಟಿದೆ. ಸುದ್ದಿ ಮಾಧ್ಯಮ, ಟ್ರೋಲ್ ಪೇಜ್, ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿಯದ್ದೇ ಚರ್ಚೆಯಾಗುತ್ತಿದದೆ. ಅಷ್ಟೇ ಅಲ್ಲದೆ ಇದೀಗ ನಟ ದರ್ಶನ್ ಮತ್ತು ಪವಿತ್ರಾ ವಿಚಾರ ಯಕ್ಷಗಾನ ಪ್ರಸಂಗಕ್ಕೂ ಎಂಟ್ರಿ ಕೊಟ್ಟಿದ್ದು, ಈ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಹಾಗಾದರೆ ಈ ವಿಡಿಯೋದಲ್ಲೆ ಏನಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಯಕ್ಷಗಾನ ಅಂದರೆ ಅದರದ್ದೇ ಆದ ಪ್ರಮುಖ ಶೈಲಿಗಳಿವೆ ಅಲ್ಲದೆ ಇದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತದೆ. ಯಕ್ಷಗಾನ ಪ್ರಸಂಗದಲ್ಲಿ ಕೆಲವು ಬಾರಿ ಪ್ರಸಕ್ತ ವಿದ್ಯಮಾನಗಳ ಕುರಿತ ಹಾಸ್ಯಮಯ ಸಂಭಾಷಣೆಗಳನ್ನು ಕೂಡ ಮಾಡಲಾಗುತ್ತದೆ. ಈ ಸನ್ನಿವೇಶಗಳು ಪ್ರೇಕ್ಷಕರನ್ನು ರಂಜಿಸುತ್ತವೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಯಕ್ಷಗಾನ ಪ್ರಸಂಗವೊಂದರಲ್ಲಿ ಪ್ರಜ್ವಲ್ ರೇವಣ್ಣ ಹೆಸರು ಸಹ ಪ್ರಸ್ತಾಪ ಆಗಿತ್ತು. ಈ ವಿಡಿಯೋ ಭಾರೀ ಸದ್ದು ಮಾಡಿತ್ತು. ಇದೀಗ ತುಳು ಯಕ್ಷಗಾನ ಬಯಲಾಟವೊಂದರಲ್ಲಿ ರಂಗಸ್ಥಳದಲ್ಲಿ ಹಾಸ್ಯಕಲಾವಿದರ ನಡುವೆ ನಡೆದ ಸಂಭಾಷಣೆಯಲ್ಲಿ ದರ್ಶನ್-ಪವಿತ್ರಾ ಹೆಸರು ಪ್ರಸ್ತಾಪ ಆಗಿದ್ದು, ಈ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಇನ್ನು ಈ ವಿಡಿಯೋವನ್ನು ಸ್ವಸ್ತಿಕ್ ಕನ್ಯಾಡಿ (@swasthik_kanyadi) ಎಂಬವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, "ಯಕ್ಷಗಾನದಲ್ಲಿ ದರ್ಶನ್-ಪವಿತ್ರ ಮ್ಯಾಟರ್" ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಇನ್ನು ಈ ಯಕ್ಷಗಾನ ಬಯಲಾಟದ ವಿಡಿಯೋದಲ್ಲಿ ಹಾಸ್ಯಕಲಾವಿದರು ದರ್ಶನ್ ಮತ್ತು ಪವಿತ್ರ ಹೆಸರನ್ನು ಹೇಳಿದ ದೃಶ್ಯವನ್ನು ಕಾಣಬಹುದು. ಅದರಲ್ಲಿ ಒಬ್ಬ ಕಲಾವಿದ ಶನಿವಾರ ದರ್ಶನ್ ಬೇಕೇ ಬೇಕು ಎಂದು ಹೇಳುತ್ತಾರೆ. ಆ ವೇಳೆ ದರ್ಶನ್ ಬೇಡ, ದರ್ಶನದ ವ್ಯವಸ್ಥೆ ಮಾಡಿದರೆ, ನಾವು ಸಹ ಒಳಗೆ ಇರಬೇಕಾಗುತ್ತದೆ. ದರ್ಶನವೂ ಬೇಡ.. ಪವಿತ್ರವೂ ಬೇಡ ಅಂತಾ ಹೇಳುವ ಹಾಸ್ಯ ದೃಶ್ಯವನ್ನು ಇಲ್ಲಿ ಕಾಣಬಹುದಾಗಿದೆ.












Click it and Unblock the Notifications