Darshan Case: ನಟ ದರ್ಶನ್ ನಾಯಿ ರೇಂಜಿಗಿಳಿದು ಕೊಲೆ ಮಾಡಬಾರದಿತ್ತು: ಖ್ಯಾತ ನಿರ್ದೇಶಕ

ಚಿತ್ರದುರ್ಗದ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಮತ್ತು ಗ್ಯಾಂಗ್​ ಇದೀಘ ಅಕ್ಷರಶಃ ವಿಲವಿಲ ಎನ್ನುವತ್ತಿದ್ದು, ಈ ಪ್ರಕರಣ ರಾಜ್ಯ ಮಟ್ಟದಲ್ಲಿ ಹೊರ ರಾಜ್ಯದಲ್ಲೂ ಸಾಕಷ್ಟು ಸದ್ದು ಮಾಡುತ್ತಿದೆ.

ರೇಣುಕಾ ಸ್ವಾಮಿ ಕೊಲೆ ಕೇಸ್​​ನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ ಅನೇಕರು ಅರೆಸ್ಟ್ ಆಗಿದ್ದಾರೆ. ಅವರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತದೆ. ದರ್ಶನ್ ಬಗ್ಗೆ ಅನೇಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ತೆಲುಗಿನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಮತ್ತೆ ದರ್ಶನ್ ವಿರುದ್ಧ ಧ್ವನಿ ಎತ್ತಿದ್ದಾರೆ.

Darshan attacking Renuka swamy is like a ELEPHANT attacking a DOG Ram Gopal Varma

ಈ ಕುರಿತು ಖಾಸಗಿ ಯ್ಯೂಟೂಬ್ ಸಂದರ್ಶವೊಂದರಲ್ಲಿ ಮಾತನಾಡಿದ ಅವರು, ನಟ ದರ್ಶನ್ ಒಬ್ಬ ಸ್ಟಾರ್ ಆಗಿದ್ದಾರೆ. ಆದರೆ, ಅವರ ಕೆಟ್ಟದಾಗಿ ಮೆಸೇಜ್ ಮಾಡಿದ್ದ ವ್ಯಕ್ತಿಯನ್ನು ಬಹುಷಃ ಕೊಲೆ ಮಾಡೊ ಪ್ಲ್ಯಾನ್ ಇರಲಿಲ್ಲ ಅನ್ನಿಸುತ್ತದೆ. ಆತನನ್ನು ಸ್ಥಳಕ್ಕೆ ಕರೆಸಿ ಹೊಡೆದು ಕಳೆಸೋ ಸಂಚು ಮಾಡಿದ್ದರು ಅನ್ನಿಸುತ್ತದೆ. ಆದರೆ, ಹೊಡೆತ ತಿಂದವನು ಸತ್ತು ಹೋಗಿದ್ದಾನೆ. ಎಲ್ಲ ನಿರ್ದೇಶಕರು ಸಾಮಾನ್ಯ ಸ್ಕ್ರಿಪ್ಟ್ ಮಾಡಿ ಒಂದು ಸಿನಿಮಾ ಮಾಡ್ತಾರೆ. ಆದರೆ, ಇಲ್ಲಿ ಮರ್ಡರ್​ನಿಂದಾನೆ ಕಥೆ ಶುರುವಾಗಿದೆ ಎಂದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದರು.

ಸಿನಿಮಾದಲ್ಲಿ ಒಬ್ಬ ಸ್ಟಾರ್ ನಟನಾಗಿ ದರ್ಶನ್ ಆನೆಯ ರೀತಿಯಲ್ಲಿ ಗಂಭೀರವಾಗಿ ಇರಬೇಕಿತ್ತು. ಸಾಮಾಜಿಕ ಜಾಲತಾಣದಲ್ಲಿ ಟ್ರೋಲರ್ಸ್‌ಗಳು ಕೆಟ್ಟದಾಗಿ ಮೆಸೇಜ್ ಮಾಡಿದ್ದರೂ ಇಗ್ನೋರ್ ಮಾಡಬೇಕಿತ್ತು. ಆದರೆ, ದರ್ಶನ್ ನಾಯಿ ರೇಂಜಿಗೆ ಕೆಳಮಟ್ಟಕ್ಕಿಳಿದು ಕೆಟ್ಟ ಮೆಸೇಜ್ ಕಳಿಸಿದ್ದ ರೇಣುಕಾಸ್ವಾಮಿಯನ್ನು ಕೊಲೆ ಮಾಡಬಾರದಿತ್ತು ಎಂದು ನಿರ್ದೇಶಕ ರಾಮ್ ಗೋಪಾಲ ವರ್ಮಾ ಹೇಳಿದ್ದಾರೆ.

'ದರ್ಶನ್ ಅವರು ರೇಣುಕಾ ಸ್ವಾಮಿಯ ಮೇಲೆ ದಾಳಿ ಮಾಡಿದ್ದು ಯಾವ ರೀತಿ ಇದೆ ಎಂದರೆ ಆನೆಯು ಶ್ವಾನದ ಮೇಲೆ ದಾಳಿ ಮಾಡಿದಂತೆ. ಶ್ವಾನ ಅನ್ನೋದು ಅವಹೇಳನಕಾರಿಯಾಗಿ ಅಲ್ಲ, ಗಾತ್ರದಲ್ಲಿ. ನಾಯಿ ಬೊಗಳಿತು ಎಂದು ಆನೆ ಹೋಗಿ ದಾಳಿ ಮಾಡಿದರೆ ಏನಾಗಬಹುದು? ಖಂಡಿತವಾಗಿಯೂ ಸಾವೇ ಎಂದು ರಾಮ್ ಗೋಪಾಲ್ ವರ್ಮಾ ಅವರು ತಿಳಿಸಿದ್ದಾರೆ.

ನಾಯಿ ಬೊಗಳಿದ್ರೂ, ಕಚ್ಚುವುದಕ್ಕೆ ಬಂದು ಬಾಯಿ ಹಾಕಿದರೂ ಆನೆ ಕೇರ್ ಮಾಡೊಲ್ಲ. ರೇಣುಕಾಸ್ವಾಮಿ ಎಂಬ ನಾಯಿಯ ಮೆಸೇಜ್ ಅನ್ನು ಕೂಡ ಕಡೆಗಣಿಸಿ ದರ್ಶನ್ ಆನೆಯಂತೆ ನಡೆದುಕೊಳ್ಳಬೇಕಿತ್ತು. ಅಂದರೆ, ರೇಣುಕಾಸ್ವಾಮಿಯ ಮೆಸೇಜ್‌ ಅನ್ನೂ ಅದೇ ರೀತಿ ಇಗ್ನೋರ್ ಮಾಡಬಹುದಾಗಿತ್ತು. ಆನೆ ನಾಯಿ ರೇಂಜಿಗಿಳಿದು ದಾಳಿ ಮಾಡೊಲ್ಲ. ಆದರೆ, ನಟ ದರ್ಶನ್ ನಾಯಿ ರೇಂಜಿಗೆ ಕೆಳಮಟ್ಟಕ್ಕಿಳಿದು ಸಾಯಿಸುವ ಅಗತ್ಯವಿರಲಿಲ್ಲ ಎಂದು ನಟ ದರ್ಶನ್‌ ವಿರುದ್ಧ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+