ಮಂಡ್ಯ: ದಲಿತ ಕುಂದುಕೊರತೆ ಸಭೆಯಿಂದ ಪತ್ರಕರ್ತರು ಹೊರಕ್ಕೆ

ಮಂಡ್ಯ,ಜನವರಿ,18: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರತಿ ತಿಂಗಳು ನಡೆಯುವ ದಲಿತರ ಕುಂದುಕೊರತೆ ಆಲಿಸುವ 'ದಲಿತ ದಿನ' ಸಭೆಯಲ್ಲಿ ಮಾಧ್ಯಮದ ಪ್ರತಿನಿಧಿಗಳನ್ನು ಹೊರಗಿಟ್ಟು ನಡೆಸಿದ ಸಭೆಗೆ ಮಂಡ್ಯದ ಪಾಂಡವಪುರದಲ್ಲಿ ಭಾನುವಾರ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ರಾಜ್ಯ ಸರ್ಕಾರ ಆದೇಶದಂತೆ ಪ್ರತಿ ತಿಂಗಳು ದಲಿತರ ಸಮಸ್ಯೆಗಳನ್ನು ಪೊಲೀಸ್ ಠಾಣೆಯ ಅಧಿಕಾರಿಗಳು ಮಾಡಬೇಕು. ಇದರಂತೆ ಪ್ರತಿವರ್ಷ ಮಾಧ್ಯಮದ ಪ್ರತಿನಿಧಿಗಳನ್ನು ಆಹ್ವಾನಿಸಿ ಸಭೆ ನಡೆಸಲಾಗುತ್ತಿತ್ತು. ಆದರೆ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅಯ್ಯನಗೌಡ ಅವರು ಇಲ್ಲಿಗೆ ಬಂದ ನಂತರ ಮಾಧ್ಯಮದ ಪ್ರತಿನಿಧಿಗಳನ್ನು ಸಭೆಯಿಂದ ಹೊರಗಿಟ್ಟು ಸಭೆ ನಡೆಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ.[ಮಂಡ್ಯದಲ್ಲಿ ಬಾಯಿ ಚಪ್ಪರಿಸೋ ತಿನಿಸುಗಳು...]

 Mandya

ಭಾನುವಾರ ನಡೆದ ದಲಿತ ದಿನ ಸಭೆಗೆ ಹಾಜರಾದ ಮಾಧ್ಯಮದ ಪ್ರತಿನಿಧಿಗಳನ್ನು ಸಬ್‍ಇನ್ಸ್ ಪೆಕ್ಟರ್ ಅಯ್ಯನಗೌಡ ಅವರು ಸಭೆಯಿಂದ ಹೊರಗೆ ಕಳುಹಿಸಿದ್ದಾರೆ. ಇದು ದಲಿತರಿಗೆ ಮಾತ್ರ ಸೀಮಿತವಾಗಿರುವ ಸಭೆ. ಹೀಗಾಗಿ ಈ ಸಭೆಗೆ ಯಾವುದೇ ಮಾಧ್ಯಮ ಪ್ರತಿನಿಧಿಗಳು ಹಾಜರಾಗುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.

ಸಭೆಯಲ್ಲಿ ಹಾಜರಿದ್ದ ದಲಿತ ಮುಖಂಡ ವಕೀಲ ಗೌಡಗೆರೆ ಸುರೇಶ್ ಮಾತನಾಡಿ, 'ಮಾಧ್ಯಮದ ಪ್ರತಿನಿಧಿಗಳನ್ನು ನಾವುಗಳೇ ಸಭೆಗೆ ಹಾಜರಾಗುವಂತೆ ಆಹ್ವಾನಿಸಿದ್ದೇವೆ. ಆದರೆ ಸಬ್ ಇನ್ಸ್ ಪೆಕ್ಟರ್ ಅಯ್ಯನಗೌಡ ಅವರು ಸಭೆಗೆ ಆಗಮಿಸಿದ ಮಾಧ್ಯಮದ ಪ್ರತಿನಿಧಿಗಳನ್ನು ಸಭೆಯಿಂದ ಹೊರಗೆ ಹೋಗುವಂತೆ ಆದೇಶಿಸಿದ್ದು ಖಂಡನೀಯ' ಎಂದಿದ್ದಾರೆ.[ಕೆಆರ್.ಪೇಟೆ ಸರ್ಕಾರಿ ಶಾಲಾ ಮಕ್ಕಳಿಗೆ ಆಕಾಶವೇ ಸೂರು!]

ಸಬ್‍ಇನ್ಸ್ ಪೆಕ್ಟರ್ ಅಯ್ಯನಗೌಡ ಅವರು ಸಭೆಯಿಂದ ಹೊರ ಹೋಗಿ ಎಂದ ಕೂಡಲೇ ಎಲ್ಲಾ ಮಾಧ್ಯಮದ ಪ್ರತಿನಿಧಿಗಳು ಸಭೆಯಿಂದ ಹೊರಹೋಗಿದ್ದಾರೆ. ಇಷ್ಟಕ್ಕೂ ಮಾಧ್ಯಮ ಪ್ರತಿನಿಧಿಗಳನ್ನು ಹೊರಗಿಟ್ಟು ದಲಿತರ ಕುಂದು ಕೊರತೆ ಆಲಿಸುವ ಸಭೆ ನಡೆಸುವ ಔಚಿತ್ಯವಾದರೂ ಏನು ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+