ಕರ್ನಾಟಕಕ್ಕೂ ತಟ್ಟಿದ ವಾರ್ಧಾ ಚಂಡಮಾರುತ ಭೀತಿ!

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 13: ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಅಬ್ಬರಿಸಿ ಬೊಬ್ಬರಿದ ನಂತರ ವಾರ್ಧಾ ಚಂಡಮಾರುತ ನಿಧಾನಗತಿಯಲ್ಲಿ ಕರ್ನಾಟಕದ ಕರಾವಳಿಗೆ ಮಂಗಳವಾರ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ.

ಗೋವಾದಲ್ಲಿರುವ ಹವಾಮಾನ ಇಲಾಖೆ ಈ ಮುನ್ನೆಚ್ಚರಿಕೆಯನ್ನು ನೀಡಿದ್ದು, ಡಿಸೆಂಬರ್ 14 ರಂದು ಗೋವಾದ ಕಡಲನ್ನು ಮುಟ್ಟಲಿದೆ.

Cyclone Vardah will reach Karnataka today according to the Indian Meteorological Department's observatory in Goa. The cyclone is expected to pass through Goa on December 14, the department also said.

ಹವಾಮಾನ ಇಲಾಖೆಯ ನಿರ್ದೇಶಕ ಎಂಎಲ್ ಸಾಹು ಅವರು ಮಾತನಾಡಿ, ದಕ್ಷಿಣ ಗೋವಾದ ತೀರ ಪ್ರದೇಶಕ್ಕೆ ಬುಧವಾರ (ಡಿಸೆಂಬರ್ 14) ರಂದು ವಾರ್ಧಾ ಚಂಡಮಾರುತ ಬಡಿಯಲಿದೆ. ಇದರ ಪರಿಣಾಮ ಹವಾಮಾನ ವೈಪರೀತ್ಯ, ಅಲ್ಪ ಪ್ರಮಾಣದ ಮಳೆ ಸಾಧ್ಯತೆಯಿದೆ ಎಂದಿದ್ದಾರೆ.

ಸೋಮವಾರದಂದು ಚೆನ್ನೈ ಸೇರಿದಂತೆ ಹಲವೆಡೆ ರುದ್ರ ನರ್ತನ ಮಾಡಿದ ವಾರ್ಧಾ, ಸಾವಿರಾರು ಮರಗಳು, ಲೈಟ್ ಕಂಬಗಳನ್ನು ನೆಲಕ್ಕುರಳಿಸಿತ್ತು. ಹಯಾತ್ ಹೋಟೆಲಿನ ಮುಂಭಾಗದ ಫೈನಲ್ ಪ್ಯಾನೆಲ್ ಚಿಂದಿಯಾಗಿತ್ತು. ಹತ್ತಾರು ಜನರನ್ನು ಬಲಿ ಪಡೆದ ವಾರ್ಧಾ ನಂತರ ಆಂಧ್ರ ಕರಾವಳಿಯನ್ನು ಪ್ರವೇಶಿಸಿತ್ತು.

ವಾರ್ಧಾ ಚಂಡಮಾರುತ ಸಾಗುವ ತೀರ ಪ್ರದೇಶಗಳತ್ತ ಸುಳಿಯದಂತೆ ಮೀನುಗಾರರು ಸೇರಿದಂತೆ ನಾಗರಿಕರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Cyclone Vardah will reach Karnataka today according to the Indian Meteorological Department's observatory in Goa. The cyclone is expected to pass through Goa on December 14, the department also said.
Please Wait while comments are loading...