"ಬಾಂಬ್ ಸ್ಫೋಟಕ್ಕೆ ನಿರ್ದೇಶನ ನೀಡಲೆಂದು ಕರ್ನಾಟಕದ ಜೈಲಿನಲ್ಲಿ ಮೊಬೈಲ್ ಕೊಡಲಾಯಿತೇ?"
ಬೆಂಗಳೂರು, ನವೆಂಬರ್12: ದೇಶದ ಉದ್ದಗಲಕ್ಕೆ ಬಾಂಬ್ ಸ್ಫೋಟ ನಡೆಸಲು ನೆರವಾಗಲೆಂದು ಕರ್ನಾಟಕದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಕೊಟ್ಟಿದ್ದೀರಾ ಎಂದು ಕೇಳಿದರು. ಬಾಂಬ್ ಸ್ಫೋಟಕ್ಕೆ ನಿರ್ದೇಶನ ನೀಡಲೆಂದು ಮೊಬೈಲ್ ಕೊಡಲಾಯಿತೇ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಸಿ ಟಿ ರವಿ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದೇಶದ ಉದ್ದಗಲಕ್ಕೆ ಆರ್‌ಡಿಎಕ್ಸ್ ಪತ್ತೆಯಾಗಿದೆ. ಯಾವ ಶಾಂತಿದೂತರು ಅದನ್ನು ಕಳಿಸಿಕೊಟ್ಟರು? ಮುಖ್ಯಮಂತ್ರಿಗಳು ಬೇಹುಗಾರಿಕಾ ದಳದಿಂದ ಈ ಕುರಿತು ವರದಿ ತರಿಸಿಕೊಳ್ಳಲಿ ಎಂದು ಒತ್ತಾಯಿಸಿದರು. ಇನ್ನೊಬ್ಬ ಭಯೋತ್ಪಾದಕನಿಗೆ ಇಲ್ಲಿನ ಜೈಲಿನಲ್ಲಿ ಮೊಬೈಲ್ ಕೊಟ್ಟಿದ್ದೀರಲ್ಲವೇ? ಅವನ್ಯಾವ ಶಾಂತಿದೂತ? ಆರ್‌ಡಿಎಕ್ಸ್ ಸ್ಫೋಟಕ ಬಳಸುವವರು ಮತ್ತು ಅದನ್ನು ಸಂಗ್ರಹಿಸುವವರು ಯಾರು? ಅವರು ಯಾವ ಶಾಂತಿ ಧರ್ಮಕ್ಕೆ ಸೇರಿದವರೆಂದು ಮುಖ್ಯಮಂತ್ರಿಯವರು ತಿಳಿಸಬೇಕು ಎಂದು ಸಿ.ಟಿ. ರವಿ ಅವರು ಸವಾಲು ಹಾಕಿದ್ದಾರೆ.

ಮುಖ್ಯಮಂತ್ರಿಗಳು ಈಚೆಗೆ ಒಂದು ಸಭೆಯಲ್ಲಿ ಇಸ್ಲಾಂ ಎಂದರೆ ಶಾಂತಿ ಎಂದಿದ್ದರು. ಅದನ್ನು ಒಪ್ಪೋಣ. ಡಾ. ಅಹ್ಮದ್ ಮೊಹಿಯುದ್ದೀನ್ ಸಯೀದ್ ಪ್ರಾಣ ಉಳಿಸುವ ವೈದ್ಯನಲ್ಲ. ಸಾಮೂಹಿಕ ನರಮೇಧದ ತಯಾರಿ ಮಾಡುತ್ತಿದ್ದ ವ್ಯಕ್ತಿ. ಯಾವ ಶಾಂತಿ ಧರ್ಮಕ್ಕೆ ಸೇರಿದವನು ಎಂದು ಕೇಳಿದರು. ಇನ್ನೊಬ್ಬ ಸಯ್ಯದ್ ಮೊಹಮ್ಮದ್ ಸುಹೇಲ್ ಮತ್ತು ಆಜಾದ್ ಯಾವ ಶಾಂತಿ ಧರ್ಮಕ್ಕೆ ಸೇರಿದವರು ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆಯವರೇ, ಅಸಮರ್ಥರು ಎನ್ನುತ್ತೀರಲ್ಲವೇ? ಭಯೋತ್ಪಾದಕರಿಗೆ ಮೊಬೈಲ್ ಕೊಡುವ ಅಯೋಗ್ಯರನ್ನು ಅಸಮರ್ಥರು ಎನ್ನುತ್ತಾರೆ. ಅವರ ನೇತೃತ್ವ ವಹಿಸಿದ ಸರಕಾರವನ್ನು ಅಸಮರ್ಥ ಎನ್ನುತ್ತಾರೆ. ಸರ್ಜಿಕಲ್ ದಾಳಿ, ಆಪರೇಷನ್ ಸಿಂದೂರದ ಮೂಲಕ ಉತ್ತರ ಕೊಡುವವರು ಅಸಮರ್ಥರಲ್ಲ ಎಂದು ಸಿ.ಟಿ. ರವಿ ಅವರು ತಿಳಿಸಿದರು. ಬಿರಿಯಾನಿ ಕೊಡುವುದು ಇದೆಯಲ್ಲವೇ? ಯಾಸಿನ್ ಮಲಿಕ್ ಜೀ ಎನ್ನುವುದು ಇದೆಯಲ್ಲವೇ? ಹಾಗೇ ಪ್ರಧಾನಿ ಕಚೇರಿಗೆ ಕರೆದು ಚಹಾ ಕೊಟ್ಟು ಆಲಂಗಿಸಿಕೊಳ್ಳುವುದು ಅಸಮರ್ಥತೆ ಎಂದು ಟೀಕಿಸಿದರು.
ಮೋದಿಜೀ, ಅಮಿತ್ ಶಾ ಜೀ, ಈಗಿನ ಭಾರತ ಸರಕಾರದ ಮೇಲೆ ಜನರಿಗೆ ವಿಶ್ವಾಸ ಇದೆ. ಇವರು ಭಯೋತ್ಪಾದಕರ ಜೊತೆ ಸೇರಿ ಲಾಭ- ನಷ್ಟದ ಲೆಕ್ಕಾಚಾರ ಹಾಕುವುದಿಲ್ಲ. ಅವರನ್ನು ಬೇರು ಸಹಿತ ಕಿತ್ತು ಹಾಕುವ ಸರ್ವ ಪ್ರಯತ್ನವನ್ನೂ ಮಾಡುತ್ತಾರೆ, ಮಾಡಿದ್ದಾರೆ. ನೀವೇನು ಮಾಡಿದ್ದೀರಿ? ಸಂಸತ್ ಮೇಲೆ ದಾಳಿ ಮಾಡಿದ ಅಫ್ಜಲ್ ಗುರು ಪರ ವಕಾಲತ್ತು ವಹಿಸಿದ ವಕೀಲರ ಪಟ್ಟಿ ಕೊಡಲೇ? ಎಂದು ಕೇಳಿದರು. ನಿಮ್ಮ ಯಾವ್ಯಾವ ಕಾಂಗ್ರೆಸ್ ನಾಯಕರು ಅವನ ಪರ ಮಾತನಾಡಿದರೆಂದು ಲಿಸ್ಟ್ ಕೊಡಲೇ ಎಂದು ಪ್ರಶ್ನಿಸಿದರು.
ಈಚೆಗೆ ಗುಜರಾತ್, ಜಮ್ಮು-ಕಾಶ್ಮೀರ, ಉತ್ತರ ಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿ ಎನ್‍ಐಎ, ಎಟಿಎಸ್ ಹಲವು ಭಯೋತ್ಪಾದಕರನ್ನು ಬಂಧಿಸಿದ್ದವು. ಅವರು ಇಡೀ ದೇಶದಲ್ಲಿ ವಿಧ್ವಂಸಕ ಕೃತ್ಯ ಮಾಡಲು ಸಂಚು ನಡೆಸಿದ್ದು, ಅಪಾಯಕಾರಿ ರಿಸಿನ್‍ನಂಥ ವಿಷವನ್ನು ತಯಾರಿಸಿ ಸಾಮೂಹಿಕ ನರಮೇಧಕ್ಕೆ ಯೋಜನೆ ರೂಪಿಸಿದ್ದನ್ನು ಎನ್‍ಐಎ, ಎಟಿಎಸ್ ಮತ್ತು ಪೊಲೀಸ್ ಇಲಾಖೆ ವಿಫಲಗೊಳಿಸಿದೆ ಎಂದು ವಿವರಿಸಿದರು.
ಅಪಾರ ಪ್ರಮಾಣದಲ್ಲಿ ಆರ್‍ಡಿಎಕ್ಸ್ ಕೂಡ ವಶಕ್ಕೆ ಪಡೆದಿದೆ. ಯೋಜನಾಬದ್ಧವಾದ ಭಯೋತ್ಪಾದನೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದನ್ನು ಊಹಿಸಬಹುದು. ನಮ್ಮ ಬೇಹುಗಾರಿಕಾ ವ್ಯವಸ್ಥೆ ಎನ್‍ಐಎ ಸಾಕಷ್ಟು ಎಚ್ಚರ ವಹಿಸಿದ್ದರಿಂದ ದೊಡ್ಡ ಅಪಾಯ ತಪ್ಪಿದೆ ಎಂದು ವಿಶ್ಲೇಷಿಸಿದರು. ಇದರಿಂದ ಹತಾಶರಾದ ಭಯೋತ್ಪಾದಕರು ಕೆಂಪು ಕೋಟೆಯನ್ನು ಗುರಿಯಾಗಿ ಇಟ್ಟುಕೊಂಡು, ತಾವಿನ್ನೂ ಬದುಕಿದ್ದೇವೆ ಎಂಬುದನ್ನು ತಮ್ಮ ಭಯೋತ್ಪಾದಕ ಕೃತ್ಯದ ಮೂಲಕ ತೋರಿಸಿದ್ದಾರೆ ಎಂದು ತಿಳಿಸಿದರು.
-
ಸಕಲೇಶಪುರದಲ್ಲಿ ಫೋಟೋಗ್ರಾಫರ್ಗಳ ಮೇಲೆ ಹಲ್ಲೆ ಪ್ರಕರಣ: ದುಬಾರಿ ಕ್ಯಾಮೆರಾಗೆ ಹಾನಿ, ಆರೋಪಿಗಳ ಬಂಧನ -
ಹಿಂದಿ ಹೆಚ್ಚು ಜನ ಮಾತನಾಡುವ ಭಾಷೆ, ವಿದ್ಯಾರ್ಥಿಗಳು ಎಲ್ಲ ಭಾಷೆ ಕಲಿಯಬೇಕು: ಶ್ರೀರಾಮುಲು -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
12 ಕೋಟಿ ರೂ ಡ್ರಗ್ಸ್ ಜಪ್ತಿ: ಗಂಧದ ನಾಡು 'ಗಾಂಜಾ ಬೀಡು' ಮಾಡಿದ ಕಾಂಗ್ರೆಸ್ ಸರ್ಕಾರ; R ಅಶೋಕ -
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications