ಬಿಜೆಪಿ ಚುನಾವಣಾಧಿಕಾರಿಯಾಗಿ ಶಾಸಕ ಸಿ.ಟಿ ರವಿ ನೇಮಕ

Recommended Video

      ಸಿ.ಟಿ.ರವಿಗೆ ಮಹತ್ವದ ಜವಾಬ್ದಾರಿ ವಹಿಸಿದ ಅಮಿತ್ ಶಾ | Oneindia Kannada

      ಬೆಂಗಳೂರು, ಜುಲೈ 19: ಬಿಜೆಪಿಯ ಮುಂಬರುವ ಪಕ್ಷದ ಆಂತರಿಕ ಚುನಾವಣೆಯ ಚುನಾವಣಾಧಿಕಾರಿಯನ್ನಾಗಿ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿಟಿ ರವಿ ಅವರನ್ನು ನೇಮಿಸಲಾಗಿದೆ.

      ಸಿಟಿ ರವಿ ಅವರು ಬಿಹಾರದ ಪೂರ್ವಿ ಚಂಪಾರಣ್ ಕ್ಷೇತ್ರದ ಸಂಸದ ಮತ್ತು ಮಾಜಿ ಸಚಿವ ರಾಧಾ ಮೋಹನ್ ಸಿಂಗ್, ಮಾಜಿ ಸಂಸದ ಹನ್ಸ್‌ರಾಜ್ ಅಹಿರ್ ಮತ್ತು ಉತ್ತರ ಪ್ರದೇಶದ ಕೌಶಾಂಬಿ ಸಂಸದ ವಿನೋದ್ ಕುಮಾರ್ ಸೋಂಕರ್ ಅವರೊಂದಿಗೆ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

      ಈ ನಾಲ್ವರು ಚುನಾವಣಾಧಿಕಾರಿಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನೇಮಿಸಿದ್ದಾರೆ.

      CT Ravi and other 3 leaders appointed by amit shah for BJP organization polls

      ಬಿಜೆಪಿಯ ಸಂಘಟನಾ ಚುನಾವಣೆಯು ಶೀಘ್ರದಲ್ಲಿಯೇ ನಡೆಯಲಿದ್ದು, ರಾಷ್ಟ್ರೀಯ ಅಧ್ಯಕ್ಷರ ಸ್ಥಾನದಲ್ಲಿ ಅಮಿತ್ ಶಾ ಅವರೇ ಮುಂದುವರಿಯಲಿದ್ದಾರೆಯೇ ಅಥವಾ ಮುಂದಿನ ಆರು ತಿಂಗಳಲ್ಲಿ ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. 2016ರ ಪಕ್ಷದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅಮಿತ್ ಶಾ ಅವರು ಇನ್ನೂ ಒಂದು ವರ್ಷದ ಅವಧಿಗೆ ಮುಂದುವರಿದಿದ್ದರು. ಬಿಜೆಪಿಯ ಇತರೆ ಪದಾಧಿಕಾರಿಗಳೂ ಹುದ್ದೆಯಲ್ಲಿ ಮುಂದುವರಿದಿದ್ದಾರೆ.

      ಸುಮಾರು 2,500 ರಾಷ್ಟ್ರೀಯ ಸಮಿತಿ ಸದಸ್ಯರು ಶಾ ಅವರ ಸ್ಥಾನಕ್ಕೆ ವ್ಯಕ್ತಿಯನ್ನು ಆಯ್ಕೆ ಮಾಡಲಿದ್ದಾರೆ. ಬಿಜೆಪಿಯ ನಿಯಮಾವಳಿಗಳ ಪ್ರಕಾರ ಒಬ್ಬನೇ ವ್ಯಕ್ತಿ ಎರಡು ಅವಧಿಯಲ್ಲಿ ಅಧಿಕಾರ ಹೊಂದುವುದಕ್ಕೆ ಅವಕಾಶವಿಲ್ಲ. ಮಂಡಲ ಅಧ್ಯಕ್ಷ, ಜಿಲ್ಲಾಧ್ಯಕ್ಷ, ರಾಜ್ಯಾಧ್ಯಕ್ಷ ಮತ್ತು ಕೊನೆಗೆ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಹಂತಹಂತವಾಗಿ ನಡೆಯಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+