ಕರ್ನಾಟಕ ರಾಜ್ಯ ಕ್ರೈಂ ನ್ಯೂಸ್ ಕವರೇಜ್

ಬೆಂಗಳೂರು, ಸೆ.30: ನಗರದ ಹೊರವಲಯದ ಚಂದಾಪುರದಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಹಳೆ ಚಂದಾಪುರ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯೆ ಮಮತಾ ಅವರ ಪತಿ ಅಶೋಕ್ ರೆಡ್ಡಿ (42) ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಬೆಡ್ ರೂಮಿನಲ್ಲಿ ಬೆಂಕಿ ಹಚ್ಚಿಕೊಂಡಿದ್ದಾನೆ. ಪಕ್ಕದ ಮನೆಯವರು ಬರುವಷ್ಟರಲ್ಲಿ ಅಶೋಕ್ ಬಹುತೇಕ ಸುಟ್ಟು ಕರಕಲಾಗಿದ್ದ. ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗಿ ಸಾವನ್ನಪ್ಪಿದ ಎಂದು ಮೃತರ ಸಂಬಂಧಿಕರು ಹೇಳಿದ್ದಾರೆ.

ಬೆಂಗಳೂರು: ಖಾಸಗಿ ಕಂಪನಿ ಉದ್ಯೋಗಿಯನ್ನು ಗೀಸರ್ ವೈರ್ ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಾಡುಗೋಡಿಯ ಎಂವಿಜೆ ಕಾಲೇಜು ಎದುರು ಇರುವ ಶಾಹೀನಾ (26) ಕೊಲೆಯಾದವರು. ವೈಟ್ ಫೀಲ್ಡ್ ನ ಖಾಸಗಿ ಕಂಪನಿಯ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದರು. ಲಾರಿ ಚಾಲಕನಾಗಿರುವ ಪತಿ ಶಿಡ್ಲಘಟ್ಟದಲ್ಲಿ ನೆಲೆಸಿದ್ದು, ಪತ್ನಿಯ ನಡವಳಿಕೆಯಿಂದ ಬೇಸತ್ತು ಮನೆಗೆ ಬರುವುದನ್ನು ನಿಲ್ಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ದಿನದ ಹಿಂದೆ ಶಾಹೀನಾ ಅವರ ಕುತ್ತಿಗೆಗೆ ಗೀಸರ್ ವೈರ್‌ನಿಂದ ಬಿಗಿದು ಹತ್ಯೆ ಮಾಡಿರುವ ದುಷ್ಕರ್ಮಿಗಳು ಬಳಿಕ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ. ಮನೆಯಿಂದ ಕೊಳೆತ ವಾಸನೆ ದೇಹದ ವಾಸನೆಯಿಂದ ಅನುಮಾನಗೊಂಡ ಸ್ಥಳೀಯರು ಕಾಡುಗೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನಷ್ಟು ಕ್ರೈಂ ಸುದ್ದಿಗಳನ್ನು ಮುಂದೆ ಓದಿ...

ಅಪಹರಣ ಸುಖಾಂತ್ಯ: ನಾಲ್ವರ ಸೆರೆ

ಅಪಹರಣ ಸುಖಾಂತ್ಯ: ನಾಲ್ವರ ಸೆರೆ

ಸಿನಿಮಾ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿದ ಮಹದೇವಪುರ ಪೊಲೀಸರು ನಾಲ್ವರು ಅಪಹರಣಕಾರರನ್ನು ಬಂಧಿಸಿ ಅಪಹರಣಕ್ಕೆ ಒಳಗಾಗಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.

ಮಹದೇವಪುರ ನಿವಾಸಿ, ಸುಪ್ರಿಯಾ ಟ್ರಾವೆಲ್ಸ್ ಏಜೆನ್ಸಿಯ ಆನಂದ್ ಎಂಬುವವರನ್ನು ದುಷ್ಕರ್ಮಿಗಳು ಸಿನಿಮಾ ಶೈಲಿಯಲ್ಲಿ ಶುಕ್ರವಾರ ಅಪಹರಿಸಿದ್ದರು. ಈ ಕುರಿತು ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಅಪಹರಣ ಮಾಡಿದ ಆರೋಪಿಗಳ ಅಡಗುತಾಣದ ಮಾಹಿತಿ ಆಧರಿಸಿ ಪೂರ್ವ ವಿಭಾಗದ ಡಿಸಿಪಿ ಹರ್ಷ ನೇತೃತ್ವದಲ್ಲಿ ಮಹದೇವಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೈಕಿಗೆ ಬಸ್ ಡಿಕ್ಕಿ ಮೂರು ಸಾವು:

ಬೈಕಿಗೆ ಬಸ್ ಡಿಕ್ಕಿ ಮೂರು ಸಾವು:

ಸೆ.29ರಂದು ಮಧ್ಯಾಹ್ನ 3.30 ಹಾಸನ ತಾಲ್ಲೂಕ್ ಕಡದರವಳ್ಳಿಗ್ರಾಮದ ವಾಸಿ ದವನ್ ‍ಕುಮಾರ್ ಹಾಸನಕ್ಕೆ ಬಂದಿದ್ದು, ವಾಪಸ್ಸು ಹಾಸನ-ಹಳೇಬೀಡು ರಸ್ತೆಯ ಮಾವಿನಹಳ್ಳಿ ಕೆಇಬಿ ಸಬ್ ಸ್ಟೇಷನ್ ಕಂಟ್ರೋಲ್ ಹತ್ತಿರ ಹೋಗುತ್ತಿದ್ದಾಗ ಅವರ ಮುಂದೆ ಕಡದರವಳ್ಳಿಗ್ರಾಮದವರೇ ಆದ ವೀರೇಂದ್ರಕುಮಾರ್, ಪ್ರದೀಪ ಹಾಗೂ ಮಹೇಶ ರವರುಗಳು ವೀರೇಂದ್ರಕುಮಾರ ವರ ಬಾಬ್ತು ಕೆಎ-13-ವಿ-3984 ರ ಬಜಾಜ್ ಡಿಸ್ಕವರಿ ಬೈಕ್ ನಲ್ಲಿ 3 ಜನರು ಕುಳಿತುಕೊಂಡು ಹಾಸನ ಕಡೆಯಿಂದ ಬರುತ್ತಿದ್ದರು.

ಅದೇ ಸಮಯಕ್ಕೆ ಹಳೇಬೀಡು ಕಡೆಯಿಂದ ಹಾಸನ ಕಡೆಗೆ ಬರುತ್ತಿದ್ದ ಕೆಎ-13-ಎಫ್-1820 ರ ಕೆಎಸ್ ಆರ್ ಟಿಸಿ ಬಸ್ ಚಾಲಕ ಬಸ್ ಅನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ವೀರೇಂದ್ರಕುಮಾರ್ ಬಿನ್ ಅನಂತರಾಜಯ್ಯ, 38ವರ್ಷ, ಪ್ರದೀಪ ಬಿನ್ ನಾಗರಾಜಯ್ಯ, 39ವರ್ಷ, ಮಹೇಶ ಬಿನ್ ಸಿದ್ದಲಿಂಗಪ್ಪ, 24ವರ್ಷ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದರ್ಶಿ ದವನ್ ಕುಮಾರ್ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ದೊಂಬಿ ಮತ್ತು ಹಲ್ಲೆ ಪ್ರಕರಣ

ದೊಂಬಿ ಮತ್ತು ಹಲ್ಲೆ ಪ್ರಕರಣ

ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೊಂಬಿ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲ್ಲೂಕು, ಟೇಕಲ್ ಹೋಬಳಿ, ಗುಂಡ್ಲಹಳ್ಳಿ ಗ್ರಾಮದಲ್ಲಿ ಸಂಭವಿಸುರುತ್ತದೆ.

ಸಂಜೀವಪ್ಪ ಮತ್ತು ಅವರ ಕುಟುಂಬದವರನ್ನ ಅದೇ ಗ್ರಾಮದ ಈರಪ್ಪ ಮತ್ತು ಅವರ ಕುಟುಂಬದವರು ಅಕ್ರಮ ಗುಂಪುಕಟ್ಟಿಕೊಂಡು ಬಂದು ದೊಣ್ಣೆ, ಇಟ್ಟಿಗೆ, ಕಲ್ಲುಗಳಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಈ ಒಂದು ಘಟನೆ ಮನೆ ಕಟ್ಟುವ ವಿಚಾರದಲ್ಲಿ ಸಂಭವಿಸಿರುತ್ತದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08152-243066 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

ಕೊಲೆ ಪ್ರಕರಣ

ಕೊಲೆ ಪ್ರಕರಣ

ಬನ್ನೂರು ಗ್ರಾಮದಲ್ಲಿ ಪಿರ್ಯಾದಿ ಸುಬ್ಬೇಗೌಡ ಇವರ ತಮ್ಮ ಚಿನ್ನೇಗೌಡನು ಉಮೇಶ್ ನೊಂದಿಗೆ ಪಿರ್ಯಾದಿ ಮನೆಗೆ ಬಂದು ಮಾತನಾಡಿ ಹೋಗಿದ್ದು, ಪಿರ್ಯಾದಿಯು ರಸ್ತೆಯಲ್ಲಿ ಹೋಗುತ್ತಿರುವಾಗ ನಾಗರಾಜ್ ರವರು ನಿನ್ನ ತಮ್ಮ ಚಿನ್ನೇಗೌಡನನ್ನು ಯಾರೋ ಪಂಪ್ ಹೌಸ್‌ ಹತ್ತಿರ ಕೊಲೆ ಮಾಡಿದ್ದಾರೆ, ಎಂದು ಕರೆದ ಮೇರೆಗೆ ಹೋಗಿ ನೋಡಲಾಗಿ ನಾಗೇಶ್ ಕಾಮತ್ ರವರ ತೋಟದ ಗೇಟ್ ಬಳಿ ಚಿನ್ನೇಗೌಡರ ಶವ ಬಿದ್ದಿದ್ದು ಆತನ ಎಡಕೈ, ಕುತ್ತಿಗೆ ಹಿಂಭಾಗದಲ್ಲಿ ಯಾವುದೋ ಹರಿತವಾದ ಆಯುಧದಿಂದ ಕಡಿದು ಕೊಲೆ ಮಾಡಿದ್ದು ಕಂಡು ಬಂದಿರುತ್ತೆ. ಉಮೇಶ್ ಎಂಬುವನು ಯಾವುದೋ ಉದ್ದೇಶದಿಂದ ಕೊಲೆ ಮಾಡಿರಬಹುದೆಂದು ಅನುಮಾನವಿರುತ್ತೆ.

ಬಸವಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್ ನಂ: 32/2013, ಕಲಂ: 174 ಸಿ.ಆರ್.ಪಿ.ಸಿ.

ಬಸವಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್ ನಂ: 32/2013, ಕಲಂ: 174 ಸಿ.ಆರ್.ಪಿ.ಸಿ.

ಚನ್ನಗಿರಿ ತಾಲ್ಲೂಕ್, ಕದರನಹಳ್ಳಿ ಗ್ರಾಮದ ವಾಸಿ ಶ್ರೀಮತಿ ಸಾವಿತ್ರಮ್ಮ ಇವರು ಠಾಣೆಗೆ ಹಾಜರಾಗಿ ಕೊಟ್ಟ ಲಿಖಿತ ದೂರು:

ನನ್ನ ಮಗ ಪರಮೇಶ್ವರಪ್ಪ, 34ವರ್ಷ ಈತನು ಈ ಹಿಂದೆ ಆಟೋ ಓಡಿಸಿಕೊಂಡಿದ್ದು, ಆಟೋ ತೆಗೆದುಕೊಳ್ಳಲು ಅಲ್ಲಿ-ಇಲ್ಲಿ ಕೈಗಡವಾಗಿ ಸಾಲ ಮಾಡಿಕೊಂಡಿದ್ದು, ಅಲ್ಲದೆ ಪ್ರತಿ ದಿನ ಮದ್ಯಪಾನ ಮಾಡುತ್ತಿದ್ದನು.

ಆಟೋ ಸಹ ಮಾರಿಕೊಂಡು ಕೈಗಡವಾಗಿ ಸಾಲವನ್ನು ಮಾಡಿದ್ದನ್ನು ತೀರಿಸಲಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ರಾತ್ರಿ ಊಟ ಮಾಡಿಕೊಂಡು ನಾನು ನನ್ನ ಮಗ ಮನೆಯಲ್ಲಿ ಮಲಗಿದ್ದು, ತಾನು ಮಾಡಿಕೊಂಡ ಸಾಲವನ್ನು ಹೇಗೆ ತೀರಿಸಬೇಕೆಂದು ಮತ್ತು ಕುಡಿತದ ಚಟಕ್ಕೆ ಬಿದ್ದವನು ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಮೂಲಕ ತಾನೆ ಮನೆಯ ಟೀರ್ಗೆ ಸೀರೆ ಕಟ್ಟಿಕೊಂಡು ಕುತ್ತಿಗೆಗೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ.

ಮೃತನ ಸಾವಿನ ಬಗ್ಗೆ ಯಾವುದೇ ರೀತಿ ಅನುಮಾನ ಇರುವುದಿಲ್ಲ. ಮುಂದಿನ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಮೇಲ್ಕಂಡಂತೆ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಶಿರಾ: ಗುಂಪು ಘರ್ಷಣೆ

ಶಿರಾ: ಗುಂಪು ಘರ್ಷಣೆ

ಶಿರಾ ಪಟ್ಟಣದಲ್ಲಿ ಭಾನುವಾರ ರಾತ್ರಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ಕೋಮಗಳ ನಡುವೆ ನಡೆದ ಗಲಾಟೆ ದಿಢೀರನೆ ತಾರಕಕ್ಕೇರಿದ ಪರಿಣಾಮ, ಎರಡು ಓಮ್ನಿ, ಒಂದು ಬಸ್, ನಾಲ್ಕು ಬೈಕ್; ಎರಡು ಕಾರುಗಳನ್ನ ಘಾಸಿಗೊಳಿಸಲಾಗಿದೆ. ಹಲವಾರು ಮನೆಗಳ ಕಿಟಕಿ ಗಾಜಗಳನ್ನು ಪುಡಿ ಪುಡಿ ಮಾಡಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ ಗುಪ್ತಾ ಮತ್ತು ಜಿಲ್ಲಾಧಿಕಾರಿ ಎಸ್.ಸತ್ಯಮೂರ್ತಿ ಮೊಕ್ಕಾಂ ಹೂಡಿದ್ದಾರೆ. ಸೋಮವಾರ ಶಿರಾ ಪಟ್ಟಣದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+