ಕೋವಿಡ್ ಪ್ರಕರಣಗಳಲ್ಲಿ ಏರಿಕೆ: ಚುನಾವಣೆ ಹಿನ್ನೆಲೆ ಮಾಸ್ಕ್ ಕೂಡ ಕಡ್ಡಾಯ ಮಾಡದ ಸರ್ಕಾರ
ಬೆಂಗಳೂರು, ಏಪ್ರಿಲ್. 13: ದೇಶದಲ್ಲಿ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿರುವ ಕಾರಣ ಈಗಾಗಲೇ ದೆಹಲಿ, ಹರಿಯಾಣ, ಪುದುಚೇರಿ, ರಾಜಸ್ಥಾನ, ಕೇರಳ, ಮುಂಬೈ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲು ಮತ್ತು ಮತ್ತೆ ಮಾಸ್ಕ್‌ಗಳನ್ನು ಕಡ್ಡಾಯಗೊಳಿಸಲು ಕ್ರಮ ತೆಗೆದುಕೊಳ್ಳುತ್ತಿವೆ.
ಆದರೆ, ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದರೂ ಕೂಡ ಕರ್ನಾಟಕ ಆರೋಗ್ಯ ಇಲಾಖೆಯು ಯಾವುದೇ ಕ್ರಮಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಜಾರಿ ಮಾಡುವ ಯೋಜನೆಯನ್ನು ಹೊಂದಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (ಎಚ್‌ಎಫ್‌ಡಬ್ಲ್ಯೂಡಿ) ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಟಿಕೆ, ಮಾಸ್ಕ್ ಬಳಕೆಯನ್ನು ಜಾರಿಗೊಳಿಸುವ ಕುರಿತು ರಾಜ್ಯದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಅತಂಕಕಾರಿ ಮಾಹಿರಿ ನೀಡಿದ್ದಾರೆ.

ಕೋವಿಡ್ ಪರಿಸ್ಥಿತಿಯು ಅತ್ಯಂತ ಅಸ್ಥಿರವಾಗಿರುವುದರಿಂದ, ವಿಶೇಷವಾಗಿ ರಾಜ್ಯದ ನೆರೆಯ ರಾಜ್ಯ ಕೇರಳದಲ್ಲಿಯೇ ದೇಶಾದ್ಯಂತ ಅತಿ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳನ್ನು ದಾಖಲಿಸುತ್ತಿರುವುದರಿಂದ, ಅಗತ್ಯವಿದ್ದಲ್ಲಿ ರಾಜ್ಯವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾವುದೇ ಕ್ರಮ ಜರುಗಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ.
ಇತರ ರಾಜ್ಯಗಳಿಗೆ ಹೋಲಿಸಿದರೆ, ಏಪ್ರಿಲ್ 12 ರವರೆಗೆ ದಾಖಲಾದ ಸಕ್ರಿಯ ಕೋವಿಡ್ ಪ್ರಕರಣಗಳಲ್ಲಿ ಕರ್ನಾಟಕವು ಒಂಬತ್ತನೇ ಸ್ಥಾನದಲ್ಲಿದೆ. ಕಳೆದ ಕೆಲವು ವಾರಗಳಲ್ಲಿ ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು ಕ್ರಮೇಣ ಏರಿಕೆ ಕಂಡಿದ್ದು, ಮಾರ್ಚ್ 31 ರಂದು 12 ರ ನಂತರ ಪ್ರಕರಣಗಳು 1,000 ಕ್ಕೆ ತಲುಪಿವೆ. ಇನ್‌ಫ್ಲುಯೆನ್ಸ ತರಹದ ಸೋಂಕುಗಳು (ILI) ಮತ್ತು ತೀವ್ರತರವಾದ ಉಸಿರಾಟದ ಸೋಂಕುಗಳು (SARI), ಮುಖ್ಯವಾಗಿ H1N1 (ಹಂದಿ ಜ್ವರ) ಮತ್ತು H3N2 ವೈರಸ್‌ಗಳ ಕ್ರಮೇಣ ಏರಿಕೆಯೊಂದಿಗೆ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗಿದೆ.
ಮಾರ್ಚ್‌ನಲ್ಲಿ ಕೋವಿಡ್‌ನಿಂದ ಕರ್ನಾಟಕದಲ್ಲಿ 12 ಸಾವುಗಳು ದಾಖಲಾಗಿವೆ. ರೋಗಿಗಳು ಇತರ ಕೊಮೊರ್ಬಿಡಿಟಿಗಳಿಂದ ಬಳಲುತ್ತಿರುವುದರಿಂದ ಹೆಚ್ಚಿನ ಪ್ರಕರಣಗಳು ಆಕಸ್ಮಿಕ ಸಾವುಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ. ಏಪ್ರಿಲ್ 1 ರಿಂದ ಅಂತಹ 9 ಸಾವುಗಳು ವರದಿಯಾಗಿವೆ. ಅಲ್ಲಿ ರೋಗಿಗಳು ಅತ್ಯಂತ ಚಿಕ್ಕವರು ಅಥವಾ ವಯಸ್ಸಾದವರು ಮತ್ತು ಉಸಿರಾಟದ ಸೋಂಕುಗಳು ಸಂಬಂಧಿತ ರೋಗಲಕ್ಷಣಗಳನ್ನು ಹೊಂದಿದ್ದರು ಎಂದು ಹೇಳಲಾಗಿದೆ.

ಎಕ್ಸ್‌ಬಿಬಿ 1.16 ರೂಪಾಂತರವು ಪ್ರಕರಣಗಳ ಹೆಚ್ಚಳಕ್ಕೆ ಕಾರಣವೆಂದು ತಜ್ಞರು ಹೇಳಿದ್ದಾರೆ. ಇದು ಸುಮಾರು 4 ರಿಂದ 5 ದಿನಗಳಲ್ಲಿ ವೇಗವಾಗಿ ಚೇತರಿಸಿಕೊಳ್ಳುವ ದರವನ್ನು ಹೊಂದಿದೆ. ಆಸ್ಪತ್ರೆಗೆ ದಾಖಲಾಗಬೇಕಾದ ಪ್ರಕರಣಗಳು ಹೆಚ್ಚಿದ್ದರೂ, ಐಸಿಯು ದಾಖಲಾತಿಗಳು ಹೆಚ್ಚಾಗಿಲ್ಲ ಎಂಬುದೇ ಸಮಾಧಾನದ ವಿಷಯವಾಗಿದೆ.
ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದರೆ ಕೋವಿಡ್ ಸೂಕ್ತವಾದ ಮಾರ್ಗಸೂಚಿಗಳನ್ನು ಅನುಸರಿಸದಿರುವುದು. ಅಂದರೆ ಜನಸಂದಣಿಯ ಸ್ಥಳಗಳಲ್ಲಿ ಮಾಸ್ಕ್‌ಗಳನ್ನು ಧರಿಸದಿರುವುದು. ಇದರ ಜೊತೆಗೆ ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆಯುವಲ್ಲಿ ಜನರಲ್ಲಿ ಅಂತಹ ಆಸಕ್ತಿಯಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಹೆಚ್ಚು ಪಾಸಿಟಿವ್ ಪ್ರಕರಣಗಳನ್ನು ಗುರುತಿಸಲು ದೈನಂದಿನ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲು ಈಗಾಗಲೇ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನದಂತೆ, ಪ್ರಕರಣಗಳ ಏರಿಕೆಯನ್ನು ನಿಭಾಯಿಸಲು, ಆಸ್ಪತ್ರೆಗಳಲ್ಲಿ ಎಲ್ಲಾ ಸೂಕ್ತ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಆಸ್ಪತ್ರೆಗಳಾದ್ಯಂತ ಕೋವಿಡ್ ಅಣಕು ಡ್ರಿಲ್‌ಗಳನ್ನು ಸಹ ನಡೆಸಲಾಗಿದೆ.












Click it and Unblock the Notifications