India
 • search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಲಾಕ್‌ಡೌನ್ ವಿಸ್ತರಣೆ: ತಾಂತ್ರಿಕ ಸಲಹಾ ಸಮಿತಿ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಜೂನ್ 01: ಕರ್ನಾಟಕ ಲಾಕ್‌ಡೌನ್ ವಿಸ್ತರಣೆ ಕುರಿತು ತಾಂತ್ರಿಕ ಸಲಹಾ ಸಮಿತಿ ಹಲವು ಸಲಹೆಗಳನ್ನು ನೀಡಿದೆ. ಈಗಿರುವ ಪರಿಸ್ಥಿತಿ ಗಮನಿಸುವುದಾದರೆ ಜೂನ್ 7ರ ಬಳಿಕವೂ ಕಟ್ಟು ನಿಟ್ಟಿನ ಲಾಕ್‌ಡೌನ್ ಮುಂದುವರೆಯಬೇಕು ಎಂದು ಸಲಹೆ ನೀಡಿದೆ.

ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಸುಮಾರು ಶೇ.15ರಷ್ಟಿದೆ, ಸಾವಿನ ಪ್ರಮಾಣ ಶೇ.1.87ರಷ್ಟಿದೆ. ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಜೂನ್ ಅಂತ್ಯದವರೆಗೂ ಲಾಕ್‌ಡೌನ್ ವಿಸ್ತರಿಸಲು ಸೂಚನೆ ನೀಡಿದ್ದಾರೆ.

ಲಸಿಕೆ ಕೊರತೆ ನೀಗಿಸಲು ಕೇಂದ್ರ ಸರ್ಕಾರದ ಮಾಸ್ಟರ್‌ ಪ್ಲ್ಯಾನ್ಲಸಿಕೆ ಕೊರತೆ ನೀಗಿಸಲು ಕೇಂದ್ರ ಸರ್ಕಾರದ ಮಾಸ್ಟರ್‌ ಪ್ಲ್ಯಾನ್

ಈ ವರದಿಯಲ್ಲಿ ಲಾಕ್‌ಡೌನ್ ಹಿಂಪಡೆಯಲು ಕೊರೊನಾ ಪ್ರಕರಣಗಳಿಗೆ ಸಂಬಂಧಿಸಿದ ನಿರ್ದಿಷ್ಟ ಸಂಖ್ಯೆ ಗುರಿ ನೀಡಲಾಗಿದೆ. ಈ ಗುರಿ ಸಾಧನೆಗೆ ಮುನ್ನ ಲಾಕ್‌ಡೌನ್ ಹಿಂಪಡೆದರೆ ಇದುವರೆಗೂ ಲಾಕ್‌ಡೌನ್ ಮಾಡಿರುವುದು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಸಮಿತಿ ಅಧ್ಯಕ್ಷ ಡಾ. ಎಂಕೆ ಸುದರ್ಶನ್ ಹೇಳಿದ್ದಾರೆ.

 ಸೋಂಕಿನ ಪ್ರಮಾಣ 5 ಸಾವಿರದೊಳಗೆ ಬರಬೇಕು

ಸೋಂಕಿನ ಪ್ರಮಾಣ 5 ಸಾವಿರದೊಳಗೆ ಬರಬೇಕು

ದಿನನಿತ್ಯದ ಸೋಮಕಿನ ಪ್ರಮಾಣ 5 ಸಾವಿರದೊಳಗೆ ಬರಬೇಕಿ, ಪಾಸಿಟಿವಿಟಿ ದರ ಶೇ.5 ಮತ್ತು ಸಾವಿನ ದರ ಶೇ.1ರ ಮಿತಿಯೊಳಗಿರಬೇಕು. ಇಷ್ಟಾಗುವವರೆಗೂ ರಾಜ್ಯದಲ್ಲಿ ಲಾಕ್‌ಡೌನ್ ಮುಂದುವರೆಯಬೇಕು ಎಂದು ಹೇಳಲಾಗಿದೆ.

 ತಜ್ಞರು ನೀಡಿರುವ ವರದಿಯಲ್ಲಿ ಏನಿದೆ?

ತಜ್ಞರು ನೀಡಿರುವ ವರದಿಯಲ್ಲಿ ಏನಿದೆ?

-ನಿತ್ಯದ ಸೋಂಕಿನ ಪ್ರಮಾಣ 5 ಸಾವಿರದೊಳಗೆ ಬರಬೇಕು
-ಪಾಸಿಟಿವಿಟಿ ದರ ಶೇ.5, ಸಾವಿನ ಪ್ರಮಾಣ ಶೇ.1ಕ್ಕೆ ಇಳಿಯಬೇಕು
-ಈಗಿನ ಪರಿಸ್ಥಿತಿಯಲ್ಲಿ ಗುರಿ ಈಡೇರುವುದು ಸಾಧ್ಯವಿಲ್ಲ
-ಹೀಗಾಗಿ ಇನ್ನೂ ಒಂದು ವಾರಗಳ ಕಾಲ ಲಾಕ್‌ಡೌನ್ ವಿಸ್ತರಿಸಿ

ಕರ್ನಾಟಕದಲ್ಲಿರುವ ಬ್ಲ್ಯಾಕ್ ಫಂಗಸ್‌ ಪ್ರಕರಣಗಳೆಷ್ಟು, ಮೃತಪಟ್ಟವರೆಷ್ಟು?ಕರ್ನಾಟಕದಲ್ಲಿರುವ ಬ್ಲ್ಯಾಕ್ ಫಂಗಸ್‌ ಪ್ರಕರಣಗಳೆಷ್ಟು, ಮೃತಪಟ್ಟವರೆಷ್ಟು?

 ಸೋಂಕು ಹೆಚ್ಚಿರುವ ಕಡೆ ಕಠಿಣ ಕ್ರಮ

ಸೋಂಕು ಹೆಚ್ಚಿರುವ ಕಡೆ ಕಠಿಣ ಕ್ರಮ

ರಾಜ್ಯ ಹಾಗೂ ಜಿಲ್ಲಾವಾರು ಪ್ರಗತಿ ಪರಿಶೀಲನೆ ನಡೆಬೇಕು, ಸೋಂಕು ಪ್ರಕರಣ, ಸಾವು ಹಾಗೂ ಪಾಸಿಟಿವಿಟಿ ದರ ಹೆಚ್ಚಿರುವ ಹಾಸನ, ಮೈಸೂರು, ಚಿತ್ರದುರ್ಗ, ತುಮಕೂರು, ಉತ್ತರ ಕನ್ನಡ, ಉಡುಪಿಯಂತಹ ಜಿಲ್ಲೆಗಳಲ್ಲಿ ಇನ್ನೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ.

  ಪ್ರಪಂಚದಲ್ಲೇ ಮೊದಲ ಬಾರಿಗೆ ಮಾನವನ ದೇಹದಲ್ಲಿ ಕಾಣಿಸಿಕೊಂಡ H10N3 ವೈರಸ್ | Oneindia Kannada
   ರಾಜ್ಯದ ಪ್ರಸ್ತುತ ಸ್ಥಿತಿ

  ರಾಜ್ಯದ ಪ್ರಸ್ತುತ ಸ್ಥಿತಿ

  ರಾಜ್ಯದಲ್ಲಿ ಪ್ರಸ್ತುತ ಪಾಸಿಟಿವಿಟಿ ದರ ಸರಾಸರಿ ಶೇ.15ರಷ್ಟು ಹಾಗೂ ನಿತ್ಯದ ಪ್ರಕರಣ 15ಸಾವಿರಕ್ಕೂ ಹೆಚ್ಚಿದೆ. ಸಾವಿನ ದರ ಶೇ.2.50ರ ಆಸುಪಾಸಿನಲ್ಲಿದೆ. ಈ ಸ್ಥಿತಿಯಿಂದ ಜೂನ್ 7ರ ವೇಳೆಗೆ 5 ಸಾವಿರಕ್ಕಿಂತ ಕಡಿಮೆ ಪ್ರಕರಣ ಹಾಗೂ ಸಾವಿನ ದರ ಶೇ.1ಕ್ಕಿಂತ ಕಡಿಮೆಯಾಗುವ ಹಂತ ತಲುಪಲು ಸಾಧ್ಯವಿಲ್ಲ. ಹೀಗಾಗಿ ಜೂನ್ 7ರಂದು ಪ್ರಗತಿ ಪರಿಶೀಲನೆ ನಡೆಸಿ ಜೂನ್ 13ರವರೆಗೆ ಲಾಕ್‌ಡೌನ್ ಮುಂದುವರೆಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  English summary
  The Technical Advisory Committee (TAC) on Covid-19, after a detailed analysis of available data, has recommended to the government a “stricter” lockdown even after June 7.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X