ರಾಜ್ಯದಲ್ಲಿ 418ಕ್ಕೆ ಏರಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ

ಬೆಂಗಳೂರು, ಏಪ್ರಿಲ್ 21: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 418ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯಾದ್ಯಂತ ಒಟ್ಟು 10 ಹೊಸ ಸೋಂಕಿನ ಪ್ರಕರಣಗಳು ದೃಢವಾಗಿದೆ.

ವಿಜಯಪುರ 3, ಕಲಬುರಗಿ 3, ಮೈಸೂರು ಜಿಲ್ಲೆ ನಂಜನಗೂಡು 2, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಹಾಗೂ ಬೆಳಗಾವಿಯಲ್ಲಿ ತಲಾ 1 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

ಇಂದು ಪತ್ತೆಯಾಗಿರುವ ಕೊರೊನಾ ಪ್ರಕರಣದಲ್ಲಿ ಐದು ಮಂದಿ ಗಂಡಸರು ಹಾಗೂ ಐದು ಹೆಂಗಸರು ಇದ್ದಾರೆ. ಬಂಟ್ವಾಳದ 67 ವರ್ಷದ ಮಹಿಳೆ, ವಿಜಯಪುರದ 18 ವರ್ಷದ ಯುವತಿ, 30 ವರ್ಷದ ವಿಜಯಪುರದ ಯುವತಿ, ಕಲಬುರಗಿಯ 29 ವರ್ಷದ ಯುವಕ, 61 ವರ್ಷದ ಕಲಬುರಗಿಯ ವ್ಯಕ್ತಿ, ವಿಜಯಪುರದ 18 ವರ್ಷದ ಯುವತಿ, 26 ವರ್ಷದ ನಂಜನಗೂಡಿನ ಇಬ್ಬರು ಯುವಕರು ಹಾಗೂ ಬೆಳಗಾವಿಯ 25 ವರ್ಷದ ಯುವತಿ

Coronavirus Positive Cases Reaches To 418 In Karnataka

ಕರ್ನಾಟಕದಲ್ಲಿ ಸೋಂಕಿತರಲ್ಲಿ ಈವರೆಗೆ 129 ಜನರು ಗುಣಮುಖರಾಗಿದ್ದಾರೆ. 17 ಜನರು ಸಾವನ್ನಪ್ಪಿದ್ದಾರೆ. ಉಳಿದ 272 ಸೋಂಕಿತರಲ್ಲಿ ಒಬ್ಬ ಗರ್ಭಿಣಿಯು ಸೇರಿದಂತೆ 267 ಜನರ ಆರೋಗ್ಯ ಸ್ಥಿರವಾಗಿದೆ. 5 ಜನರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+