Coronavirus; ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸುತ್ತೋಲೆ

ಬೆಂಗಳೂರು, ಡಿಸೆಂಬರ್ 19; ಕೆಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕೊರೊನಾ ಹೊಸ ರೂಪಾಂತರಿ ಜೆಎನ್.1 ಪತ್ತೆಯಾದ ಬಳಿಕ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಕರ್ನಾಟಕದ ಆರೋಗ್ಯ ಇಲಾಖೆ ಮಂಗಳವಾರ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್-19ರ ಪೂರ್ವಸಿದ್ಧತಾ ಸಭೆಯ ಬಳಿಕ ಸುತ್ತೋಲೆಯೊಂದನ್ನು ಹೊರಡಿಸಿದೆ.

Coronavirus Karnataka Health Department Circular For Hospitals

ಈ ಸುತ್ತೋಲೆಯು ಸಾರ್ವಜನಿಕ ಆಸ್ಪತ್ರೆಗಳನ್ನು ಸನ್ನದ್ಧವಾಗಿಡುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ. ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದೆ.

ಸುತ್ತೋಲೆಯ ವಿವರಗಳು; ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳ ಐಸಿಯು ಘಟಕಗಳ ಉಪಕರಣಗಳನ್ನು ಮತ್ತು ಆಕ್ಸಿಜನ್ ಸಿಲಿಂಡರ್, PSA ಆಕ್ಸಿಜನ್ ಪ್ಲಾಂಟ್, ಲಿಕ್ವಿಡ್ ಆಕ್ಸಿಜನ್ ಘಟಕಗಳ ವಾಸ್ತವ ವರದಿಯನ್ನು ವಿಭಾಗೀಯ ಜಂಟಿ ನಿರ್ದೇಶಕರು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ವರದಿಯನ್ನು [email protected]ಗೆ ಸಲ್ಲಿಸಲು ಸೂಚನೆ ನೀಡಲಾಗಿದೆ.

* PSA ಪ್ಲಾಂಟ್‌ಗಳ ಕಾರ್ಯವೈಖರಿ ಬಗ್ಗೆ ವರದಿ ನೀಡುವುದು.
* Liquid Medical Oxygen tank ಗಳ ಬಗ್ಗೆ ವರದಿ ಸಲ್ಲಿಸುವುದು.
* ಮುಖ್ಯವಾಗಿ ಐ.ಸಿ.ಯು ಉಪಕರಣಗಳು ವೆಂಟಿಲೇಟರ್‌ಗಳನ್ನು ಸ್ವತಃ ಪರಿಶೀಲಿಸಿ ಕಾರ್ಯನಿರ್ವಹಣೆ
ಬಗ್ಗೆ ವರದಿ ನೀಡುವುದು.
* ಎಲ್ಲಾ Oxygen cylinder ಗಳನ್ನು ತುಂಬಿಸುವ ಬಗ್ಗೆ ಕ್ರಮ ಕೈಗೊಂಡು ವರದಿ ಸಲ್ಲಿಸುವುದು.
* Oxygen concentrator ಬಗ್ಗೆ ತಪಾಸಣೆ ಕೈಗೊಂಡು ವರದಿ ಸಲ್ಲಿಸುವುದು.
* Medical Gas Pipeline ಬಗ್ಗೆ ತಪಾಸಣೆ ಕೈಗೊಂಡು ವರದಿ ಸಲ್ಲಿಸುವುದು.
* ICU ನಲ್ಲಿ ಇರುವ ಎಲ್ಲಾ ಯಂತ್ರೋಪಕರಣಗಳ ಬಗ್ಗೆ ತಪಾಸಣೆ ಮತ್ತು ಔಷಧಗಳ ಲಭ್ಯತೆ ಬಗ್ಗೆ ಕ್ರಮಕೈಗೊಳ್ಳುವುದು.

ಮುಖ್ಯವಾಗಿ ಐಸಿಯು ಘಟಕಗಳ ಉಪಕರಣಗಳನ್ನು ಮತ್ತು PSA ಆಕ್ಸಿಜನ್ ಪ್ಲಾಂಟ್, ಲಿಕ್ವಿಡ್ ಆಕ್ಸಿಜನ್ ಘಟಕಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲು ಮುನ್ನೆಚ್ಚರಿಕೆ ವಹಿಸುವುದರ ಕುರಿತು ಬಯೋ ಮೆಡಿಕಲ್ ಇಂಜಿನಿಯರ್‌ಗಳು ನಿಯೋಜಿಸಿರುವ ಜಿಲ್ಲೆಗಳ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಕ್ರಮವಹಿಸುವುದು ಎಂದು ತಿಳಿಸಲಾಗಿದೆ.

ಸದರಿ ಪ್ರಯಾಣಕ್ಕೆ ತಗಲುವ ವೆಚ್ಚವನ್ನು ನಿಯಮಾನುಸಾರ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ Program Management Cost ಅಡಿಯಲ್ಲಿ ಭರಿಸುವುದು. ಐ.ಸಿ.ಯು ಘಟಕಗಳ ಉಪಕರಣಗಳನ್ನು ಮತ್ತು PSA ಆಕ್ಸಿಜನ್ ಪ್ಲಾಂಟ್, ಲಿಕ್ವಿಡ್ ಆಕ್ಸಿಜನ್ ಘಟಕಗಳ ಉಪಕರಣಗಳ ರಿಪೇರಿಯನ್ನು KTPP ನಿಯಮಾನುಸಾರ ಲಭ್ಯವಿರುವ ARS/AB-ArK/Untied funds ಅನುದಾನವನ್ನು ಬಳಸಿ ಯಂತ್ರೋಪಕರಣಗಳನ್ನು ರಿಪೇರಿ ಕೈಗೊಂಡು ಸುಸ್ಥಿತಿಯಲ್ಲಿಡಲು ಈ ಮೂಲಕ ಸೂಚಿಸಿದೆ.

ರಾಜ್ಯದ ಕೋವಿಡ್ ಪ್ರಕರಣಗಳು; ಕೊರೊನಾ ರೂಪಾಂತರ ತಳಿಯ ಆತಂಕದ ನಡುವೆಯೇ ಕರ್ನಾಟಕದಲ್ಲಿ ಒಂದೇ ದಿನ 44 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಇದರರೊಂದಿಗೆ ರಾಜ್ಯದಲ್ಲಿನ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 79ಕ್ಕೆ ಏರಿಕೆಯಾಗಿದೆ.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪತ್ತೆಯಾದ ಕೋವಿಡ್ ಪ್ರಕರಣಗಳು 44, ಆಸ್ಪತ್ರೆಯಿಂದ ಡಿಸ್ಜಾರ್ಜ್​ ಆದವರು 35. ಒಟ್ಟು ಸಕ್ರಿಯ ಪ್ರಕರಣಗಳು 79. ರಾಜ್ಯದ ಪಾಸಿಟಿವಿಟಿ ಪ್ರಮಾಣ ಶೇ.6.09ರಷ್ಟು.

ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, "ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸುತ್ತೇವೆ. ಶನಿವಾರದ ತನಕ 5 ಸಾವಿರ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ" ಎಂದು ಹೇಳಿದರು.

"ಅಂತರರಾಜ್ಯದ ಎಲ್ಲಾ ಗಡಿಗಳನ್ನು ಬಂದ್ ಮಾಡಲು ಸಾಧ್ಯವಿಲ್ಲ. ಇದಕ್ಕೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಅಗತ್ಯ. ಬುಧವಾರ ಬೆಳಗ್ಗೆ 10 ಗಂಟೆಗೆ ಕೇಂದ್ರ ಆರೋಗ್ಯ ಸಚಿವರ ಜೊತೆ ಸಭೆ ಇದೆ. ಬಳಿಕ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+