ಕರ್ನಾಟಕದಲ್ಲಿ ಕೊರೊನಾ; ಶುಕ್ರವಾರದ ಹೆಲ್ತ್ ಬುಲಿಟಿನ್ ಇಲ್ಲಿದೆ

ಬೆಂಗಳೂರು, ಮಾರ್ಚ್ 13: ಕೊರೊನಾ ವೈರಸ್‌ ಸೋಂಕಿಗೆ ಸಂಬಂಧಪಟ್ಟಂತೆ ಕರ್ನಾಟಕ ಆರೋಗ್ಯ ಇಲಾಖೆ ತನ್ನ ದೈನಂದಿನ 'ಹೆಲ್ತ್ ಬುಲಿಟಿನ್' ಬಿಡುಗಡೆ ಮಾಡಿದೆ.

ಶುಕ್ರವಾರದ ಹೆಲ್ತ್ ಬುಲೆಟಿನ್ ಪ್ರಕಾರ, ಕೊರೊನಾಕ್ಕೆ ಕಲಬುರಗಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನೂ ಸೇರಿದಂತೆ ಕರ್ನಾಟಕದಲ್ಲಿ ಆರು ಜನರಿಗೆ ಸೋಂಕು ಇರುವುದು ದೃಢವಾಗಿದೆ.

ಒಟ್ಟು 1345 ಜನರನ್ನು ಕೊರೊನಾ ಶಂಕೆಯ ಮೇಲೆ ತಪಾಸಣೆ ಮಾಡಲಾಗಿದೆ. 302 ಜನರು 28 ದಿನದ ತಪಾಸಣೆ ಬಳಿಕ ಮನೆಗೆ ಮರಳಿದ್ದಾರೆ. 1012 ಜನರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿಯೇ ಇರಿಸಲಾಗಿದೆ. ಆಸ್ಪತ್ರೆಯಲ್ಲಿ 32 ಜನರನ್ನು ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 4 ಜನ ಚೀನಾಕ್ಕೆ ಹಿಂದುರಿಗಿದ್ದಾರೆ. 639 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ. 639 ರಲ್ಲಿ 340 ಜನಕ್ಕೆ ಕೊರೊನಾ ನೆಗಟಿವ್ ಎಂದು ಪರಿಗಣಿಸಲ್ಪಟ್ಟಿದೆ. ಐವರಿಗೆ ಮಾತ್ರ ಕೋವಿಡ್ 19 ವೈರಸ್ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ.

Coronavirus In Karnataka: Friday Health Bulletin From Karnataka Health Department

ಬೆಂಗಳೂರು, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಬಳ್ಳಾರಿ, ಚಿಕ್ಕಮಗಳೂರು, ಕಲಬುರುಗಿ, ಕೊಡಗು, ಉಡುಪಿಯ ಆಸ್ಪತ್ರೆಗಳಲ್ಲಿ ಐಸೋಲೇಷನ್ ಘಟಕದಲ್ಲಿ ಒಟ್ಟು 32 ಜನರು ಕೊರೊನಾ ಶಂಕೆಯ ಆಧಾರದ ಮೇಲೆ ದಾಖಲಾಗಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.

ಕರ್ನಾಟಕದಲ್ಲಿ ಇದುವರೆಗೆ 1,05,292 ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಲಾಗಿದೆ. ಕೊರೊನಾಕ್ಕೆ ಆರಂಭಿಸಿರುವ 104 ಸಹಾಯವಾಣಿಗೆ 19,146 ಕರೆಗಳಿಗೆ ಉತ್ತರಿಸಲಾಗಿದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+