BREAKING: ರಾಜ್ಯದಲ್ಲಿ ಕೊರೊನಾ ಸೋಂಕಿಗೆ 35 ಬಲಿ, ಸೋಂಕಿತರ ಸಂಖ್ಯೆ 981!

ಬೆಂಗಳೂರು, ಮೇ 13: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಇಬ್ಬರು ಕೊರೊನ ವೈರಸ್ ಸೋಂಕಿಗೆ ಬಲಿಯಾಗುವುದರೊಂದಿಗೆ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಜೊತೆಗೆ ಕೋವಿಡ್ ಅಲ್ಲದ ಬೇರೆ ಕಾರಣದಿಂದ ಈಗಾಗಲೇ ಕೊರೊನಾ ವೈರಸ್ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ. ನಿನ್ನೆ ಸಂಜೆಯಿಂದ ಈ ತನಕ ಹೊಸದಾಗಿ ಮತ್ತೆ 22 ಜನರಿಗೆ ಮಾರಕ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಕೊಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿಗೆ ತಗುಲಿದವರ ಸಂಖ್ಯೆ 981ಕ್ಕೆ ಏರಿಕೆಯಾದಂತಾಗಿದೆ.

ಸೋಂಕಿತರ ಪೈಕಿ 9 ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಉಳಿದ 489 ಜನರ ಆರೋಗ್ಯ ಸ್ಥಿರವಾಗಿದ್ದು, ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ವೈರಸ್ ಸೋಂಕಿನಿಂದ ರಾಜ್ಯದಲ್ಲಿ 456 ಜನರು ಗುಣಮುಖರಾಗಿ, ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.

 Coronavirus infection has been confirmed in 22 new people in the state in the last 12 hours

ಬೀದರ್ ಜಿಲ್ಲೆಯಲ್ಲಿ 4, ಬೆಂಗಳೂರಿನಲ್ಲಿ 5, ಮಂಡ್ಯದಲ್ಲಿ 4, ಗದಗ್‌ನಲ್ಲಿ 4, ದಾವಣಗೆರೆ 3, ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ತಲಾ ಒಬ್ಬರಲ್ಲಿ ಹೊಸದಾಗಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಸೋಂಕಿತ 22 ವ್ಯಕ್ತಿಗಳಲ್ಲಿ 4 ಮಕ್ಕಳು ಸೇರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+