13 ಜನರಿಂದ 328 ಮಂದಿಗೆ ಕೊರೊನಾ: ಬೆಚ್ಚಿಬೀಳಿಸುವ 'ಸೂಪರ್ ಸ್ಪ್ರೆಡರ್ಸ್' ಕಹಾನಿ!
ಬೆಂಗಳೂರು, ಮೇ 9: ಕರ್ನಾಟಕ ರಾಜ್ಯದಲ್ಲಿ ಇಲ್ಲಿಯವರೆಗೂ ಒಟ್ಟು 753 ಮಂದಿಗೆ ಡೆಡ್ಲಿ ಕೊರೊನಾ ವೈರಸ್ ಸೋಂಕು ತಗುಲಿದೆ. ಆ ಪೈಕಿ ಈಗಾಗಲೇ 30 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದರೆ, 376 ಜನ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ 346 ಕೋವಿಡ್-19 ಆಕ್ಟೀವ್ ಕೇಸ್ ಗಳಿವೆ.
Recommended Video
ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳು ಗಣನೀಯವಾಗಿ ಏರಿಕೆ ಕಾಣುತ್ತಿದೆ. ಹೀಗಿರುವಾಗಲೇ, ಒಂದು ಬೆಚ್ಚಿಬೀಳಿಸುವ ಅಂಶ ಬಟಾ ಬಯಲಾಗಿದೆ.
ಕರ್ನಾಟಕ ರಾಜ್ಯದ ಒಟ್ಟು ಕೊರೊನಾ ಪ್ರಕರಣಗಳ ಪೈಕಿ, ಅರ್ಧಕ್ಕಿಂತಲೂ ಹೆಚ್ಚು ಪಾಸಿಟಿವ್ ಕೇಸ್ ಗಳಿಗೆ ಕಾರಣವಾಗಿರುವುದು 'ಸೂಪರ್ ಸ್ಪ್ರೆಡರ್ಸ್'.! ಅಂದ್ರೆ, ಕೇವಲ 13 ಮಂದಿಯಿಂದ 328 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ.

ಸೂಪರ್ ಸ್ಪ್ರೆಡರ್ ಎಂದರೇನು.?
ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗಲು 'ಸೂಪರ್ ಸ್ಪ್ರೆಡರ್ಸ್' ಕಾರಣವಾಗಿದ್ದಾರೆ. ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ಮಂದಿಗೆ ಸೋಂಕು ಹರಡುವ ವ್ಯಕ್ತಿಯನ್ನು 'ಸೂಪರ್ ಸ್ಪ್ರೆಡರ್ಸ್' ಎಂದು ಪರಿಗಣಿಸಲಾಗುತ್ತದೆ. ಇಲ್ಲಿಯವರೆಗೆ ಕರ್ನಾಟಕದಲ್ಲಿ 13 ಪೇಶೆಂಟ್ ಗಳನ್ನು 'ಸೂಪರ್ ಸ್ಪ್ರೆಡರ್ಸ್' ಎಂದು ಗುರುತಿಸಲಾಗಿದೆ.

ಯಾರು ಆ ಹದಿಮೂರು ಮಂದಿ.?
* ಪೇಶೆಂಟ್ ನಂ. 52
* ಪೇಶೆಂಟ್ ನಂ. 221
* ಪೇಶೆಂಟ್ ನಂ. 128
* ಪೇಶೆಂಟ್ ನಂ. 419
* ಪೇಶೆಂಟ್ ನಂ. 205
* ಪೇಶೆಂಟ್ ನಂ. 533
* ಪೇಶೆಂಟ್ ನಂ. 134
* ಪೇಶೆಂಟ್ ನಂ. 556
* ಪೇಶೆಂಟ್ ನಂ. 167
* ಪೇಶೆಂಟ್ ನಂ. 125
* ಪೇಶೆಂಟ್ ನಂ. 607
* ಪೇಶೆಂಟ್ ನಂ. 247
* ಪೇಶೆಂಟ್ ನಂ. 390
- ಇವರುಗಳನ್ನು 'ಸೂಪರ್ ಸ್ಪ್ರೆಡರ್ಸ್' ಎಂದು ಗುರುತಿಸಲಾಗಿದೆ.

ಯಾರಿಂದ ಎಷ್ಟು ಮಂದಿಗೆ ಸೋಂಕು?
* ಪೇಶೆಂಟ್ ನಂ. 52 ರಿಂದ 76 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 221 ರಿಂದ 37 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 128 ರಿಂದ 36 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 419 ರಿಂದ 29 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 205 ರಿಂದ 27 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 533 ರಿಂದ 20 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 134 ರಿಂದ 19 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 556 ರಿಂದ 19 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 167 ರಿಂದ 17 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 125 ರಿಂದ 14 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 607 ರಿಂದ 12 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 247 ರಿಂದ 11 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 390 ರಿಂದ 11 ಜನರಿಗೆ ಸೋಂಕು ತಗುಲಿದೆ.

ಯಾರು ಸೂಪರ್ ಸ್ಪ್ರೆಡರ್ ಆಗುತ್ತಾರೆ.?
ದೈನಂದಿನ ಹೆಚ್ಚು ಜನರ ಸಂಪರ್ಕಕ್ಕೆ ಬರುವವರು 'ಸೂಪರ್ ಸ್ಪ್ರೆಡರ್'ಗಳಾಗುವ ಸಾಧ್ಯತೆ ಹೆಚ್ಚು. ತುಂಬು ಕುಟುಂಬದಲ್ಲಿ ಇರುವವರು, ತರಕಾರಿ ಅಥವಾ ಇತರೆ ಅವಶ್ಯ ವಸ್ತುಗಳ ಮಾರಾಟಗಾರರು, ಡೆಲಿವರಿ ಬಾಯ್ಸ್, ಕಚೇರಿಯಲ್ಲಿ ಕೆಲಸ ಮಾಡುವವರು 'ಸೂಪರ್ ಸ್ಪ್ರೆಡರ್' ವರ್ಗಕ್ಕೆ ಸೇರುತ್ತಾರೆ.












Click it and Unblock the Notifications