ಶಾಲಾ ಮಕ್ಕಳು ಯಾಕೆ ಓದಬೇಕು ಸಿದ್ದು ರಾಜಕೀಯ ಜೀವನ?

Written By:
Subscribe to Oneindia Kannada

ಬೆಂಗಳೂರು, ಜೂನ್, 29: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಕುರಿತು ಬೆಂಗಳೂರಿನ ಪ್ರಕಾಶನವೊಂದು ಹೊರತಂದಿರುವ "ಇಟ್ಟ ಗುರಿ, ದಿಟ್ಟ ಹೆಜ್ಜೆ' ಸಮಾನತೆಯ ಸಾಧಕನ ಸಂಕಲ್ಪ ಹಾದಿ ಎಂಬ ಪುಸ್ತಕ ಕಡ್ಡಾಯ ಖರೀದಿ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿರುವುದು ವಿವಾದ ಹುಟ್ಟುಹಾಕಿದೆ.

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಸರ್ಕಾರದ ಸುತ್ತೋಲೆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದಿದ್ದಾರೆ. ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.['ಹಾಳಾಗಿ ಹೋಗ್ತೀಯಾ' ಸಿಎಂಗೆ ಕೊಳ್ಳೇಗಾಲದ ವ್ಯಕ್ತಿಯಿಂದ ಶಾಪ]

karnataka

ಮಹಾಪುರುಷರ, ಇತಿಹಾಸ ಪ್ರಸಿದ್ಧ ವ್ಯಕ್ತಿಗಳ, ರಾಜ, ಮಹಾರಾಜರ ಕುರಿತ ಜೀವನ ಚರಿತ್ರೆಯ ಪುಸ್ತಕ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ನಿಜ. ಆದರೆ ಸಿಎಂ ಸಿದ್ದರಾಮಯ್ಯನವರ ರಾಜಕೀಯ ಜೀವನವನ್ನು ವಿದ್ಯಾರ್ಥಿಗಳು ಯಾಕೆ ಓದಬೇಕು ಎಂಬ ಪ್ರಶ್ನೆ ಜನರಿಂದ ಕೇಳಿ ಬರುತ್ತಿದೆ.[ಸಿಎಂ ಕಾರಿನ ಮೇಲೆ ಕುಳಿತ ಕಾಗೆಗೆ ಮಾಧ್ಯಮಗಳ ರೆಕ್ಕೆ ಪುಕ್ಕ!]

ತುಮಕೂರು ಮಹಾದೇವಯ್ಯ ಪ್ರಧಾನ ಸಂಪಾದಕತ್ವ ಹಾಗೂ ಜಿಜಿ ನಾಗರಾಜು ಅವರ ಸಂಪಾದಕತ್ವದಲ್ಲಿ ಹೊರ ತಂದಿರುವ ಇಟ್ಟ ಗುರಿ ದಿಟ್ಟ ಹೆಜ್ಜೆ ಸಮಾನತೆಯ ಸಂಕಲ್ಪದ ಹಾದಿ ಎಂಬ ಪುಸ್ತಕವನ್ನು ರಾಜ್ಯದ ಸರ್ಕಾರಿ ಶಾಲೆಗಳಿಗೆ ಮಾರಾಟ ಮಾಡಲಾಗುತ್ತಿದೆ.[ಸಿದ್ದರಾಮಯ್ಯ ವಾಚ್ ವಿವಾದದ ಕತೆ ಏನು?]

342 ಪುಟಗಳ ಪುಸ್ತಕ:
342 ಪುಟಗಳ ಈ ಪುಸ್ತಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಟ್ಟಿನಿಂದ ರಾಜಕೀಯವಾಗಿ ಬೆಳೆದು ಬಂದ ಹಾದಿ, ಆಡಳಿತದ ಚಿತ್ರಣ ಹಾಗೂ ವಿವಿಧ ವಲಯದ ಗಣ್ಯರು ಸಿಎಂ ಬಗ್ಗೆ ಬರೆದಿರುವ ಲೇಖನಗಳ ಸಂಗ್ರಹ ಇದೆ. ಈ ಪುಸ್ತಕವೊಂದಕ್ಕೆ 300 ರು. ನಿಗದಿ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
All government and government-aided school libraries in Karnataka have been directed to keep at least two copies of a book named 'Itta Guri, Ditta Hejje' which lists the achievements of Chief Minister Siddaramaiah. This notification of education department now turns to Controversy.
Please Wait while comments are loading...