• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂದಿನ 4ದಿನ, ರಾಜ್ಯ ಸರಕಾರಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡುವ ಅತ್ಯಂತ ಸವಾಲಿನ ದಿನ

|

ಲಾಕ್ ಡೌನ್ (ಮೊದಲ ಹಂತ?) ಕೊನೆಯಾಗಲು ಇನ್ನೇನು ನಾಲ್ಕೈದು ದಿನಗಳು ಉಳಿದಿವೆ. ಸಾರ್ವಜನಿಕರನ್ನು ಬೀದಿಗಿಳಿಯದಂತೆ ನೋಡಿಕೊಳ್ಳಲು ದಿನದಿಂದ ದಿನಕ್ಕೆ ವಿಫಲವಾಗುತ್ತಿರುವ ರಾಜ್ಯ ಸರಕಾರ, ಪೊಲೀಸ್ ಇಲಾಖೆಗೆ ಮತ್ತೆ ಸೂಪರ್ ಪವರ್ ನೀಡಿದೆ.

ಒಂದು ರೀತಿಯ ಮೆಡಿಕಲ್ ಎಮರ್ಜೆನ್ಸಿ ಎನ್ನಬಹುದಾದ ಈ ಕಾಲಘಟ್ಟದಲ್ಲಿ ಧಾರ್ಮಿಕ ಕೇಂದ್ರಗಳು ಸೇರಿದಂತೆ ಎಲ್ಲವೂ ಬಂದ್ ಆಗಿದೆ. ಎಲ್ಲರೂ ತಮ್ಮತಮ್ಮ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿ ಎಂದು ಸರಕಾರ ಫರ್ಮಾನು ಹೊರಡಿಸಿದೆ.

Breaking: 24 ಗಂಟೆಯಲ್ಲಿ 540 ಕೊರೊನಾ ಸೋಂಕು, 17 ಸಾವು

ಕೊರೊನಾ ಹರಡದಂತೆ ನೋಡಿಕೊಳ್ಳಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾದದ್ದು. ಆದರೆ, ಎಷ್ಟೋ ಬಾರಿ ಸಾರ್ವಜನಿಕರು ಇದಕ್ಕೆ ಬೆಲೆಕೊಡುತ್ತಿಲ್ಲ ಎನ್ನುವುದು ಅತ್ಯಂತ ಸ್ಪಷ್ಟ.

ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ 6ನೇ ಸಾವು

ರಾಜ್ಯ ಸರಕಾರಕ್ಕೆ ಮುಂದಿನ ನಾಲ್ಕು ದಿನಗಳು ಜನ ಗುಂಪು ಸೇರದಂತೆ ನೋಡಿಕೊಳ್ಳುವ ವಿಚಾರದಲ್ಲಿ ಅತ್ಯಂತ ಸವಾಲಿನ ದಿನವಾಗಲಿದೆ. ಯಾಕೆಂದರೆ ವರ್ಷಕ್ಕೊಮ್ಮೆ ಬರುವ ಈ ಪುಣ್ಯ ದಿನಗಳನ್ನು ತಮ್ಮ ಧಾರ್ಮಿಕ ನಂಬಿಕೆಗಳನ್ನು ಬದಿಗೊತ್ತಿ ಸಮುದಾಯದವರು ನಿಲ್ಲುತ್ತಾರಾ ಎನ್ನುವುದು ಪ್ರಶ್ನೆ.

ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್ ವಾರ್ನಿಂಗ್

ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್ ವಾರ್ನಿಂಗ್

ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಘಟನೆಯ ನಂತರ, ಒಂದು ಸಮುದಾಯವನ್ನು ಗುರಿ ಮಾಡುವ ಕೆಲಸ ಸಾಮಾಜಿಕ ತಾಣದಲ್ಲಿ ನಡೆಯುತ್ತಲೇ ಬರುತ್ತಿದೆ. "ಯಾರೋ ನಾಲ್ಕು ಜನ ಧಾರ್ಮಿಕ ಮತಾಂಧರು ಮಾಡುವ ಕೆಲಸಕ್ಕೆ ಇಡೀ ಸಮುದಾಯವನ್ನೇ ಗುರಿ ಮಾಡಬೇಡಿ" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಮನವೊಲಿಕೆ

ಮನವೊಲಿಕೆ

ಸರಕಾರದ ಎಚ್ಚರಿಕೆ, ಮನವಿಯನ್ನು ಮೀರಿ, ಅಲ್ಲಲ್ಲಿ, ಕಾನೂನು ಉಲ್ಲಂಘಿಸಿ, ಪ್ರಾರ್ಥನೆಗಳು ನಡೆದ ಉದಾಹರಣೆಗಳು ರಾಜ್ಯದಲ್ಲಿ ನಡೆದಿವೆ. ಮನವೊಲಿಕೆ ಮಾಡಲು ಬಂದ ಪೊಲೀಸರ ಮೇಲೇಯೇ ದಾಳಿ ಮಾಡಿದ ಉದಾಹರಣೆಗಳೂ ಇವೆ. ಆಯಾಯ ಸ್ಥಳದ ಧಾರ್ಮಿಕ ಮುಖಂಡರು, ಇಂತವರಿಗೆ ಬುದ್ದಿ ಹೇಳುವ ಕೆಲಸವನ್ನು ಇನ್ನೂ ಮಾಡದಿದ್ದರೆ, ಇನ್ನಾದರೂ ಮಾಡಲಿ.

ಶಬ್-ಬೇರಾತ್, ಶುಕ್ರವಾರ (ಏ 10) ಕ್ರಿಶ್ಚಿಯನರ ಗುಡ್ ಫ್ರೈಡೇ

ಶಬ್-ಬೇರಾತ್, ಶುಕ್ರವಾರ (ಏ 10) ಕ್ರಿಶ್ಚಿಯನರ ಗುಡ್ ಫ್ರೈಡೇ

ಗುರುವಾರ (ಏ 9) ಮುಸ್ಲಿಂರ ಶಬ್-ಬೇರಾತ್, ಶುಕ್ರವಾರ (ಏ 10) ಕ್ರಿಶ್ಚಿಯನರ ಗುಡ್ ಫ್ರೈಡೇ ಮತ್ತು ಭಾನುವಾರ (ಏ 12) ಈಸ್ಟರ್ ಹಬ್ಬವಿರಲಿದೆ. ಈಗಾಗಲೇ, ಮುಖ್ಯಮಂತ್ರಿಗಳು ಸಮುದಾಯದ ಮುಖಂಡರನ್ನು ಕರೆಸಿ, ಪ್ರಾರ್ಥನಾ ಮಂದಿರಕ್ಕೆ ತೆರಳದಂತೆ ಸೂಚಿಸಿದ್ದಾರೆ. ಇದಕ್ಕೆ, ಸಮುದಾಯದ ಪ್ರಮುಖರೂ ಒಪ್ಪಿಗೆಯನ್ನು ಸೂಚಿಸಿದ್ದಾರೆ.

ದಂಡಂ ದಶಗುಣಂ ದಾರಿ ಮಾತ್ರ

ದಂಡಂ ದಶಗುಣಂ ದಾರಿ ಮಾತ್ರ

ಆದರೂ, ತಮ್ಮ ಧಾರ್ಮಿಕ ನಂಬಿಕೆಗಳಿಗೆ ತೊಂದರೆಯಾಗುತ್ತದೆ ಎಂದು ಧಾರ್ಮಿಕ ಕೇಂದ್ರಗಳಿಗೆ ತೆರಳುವವರು ಇಲ್ಲದೇ ಇರುವುದಿಲ್ಲ. ಈ ರೀತಿ ಹೋಗುವವರನ್ನು ಸಮುದಾಯದ ಪ್ರಮುಖರು ಕರೆಸಿ, ಮನೆಯೇ ಮಂತ್ರಾಲಯ ಎಂದು ತಿಳಿಹೇಳಬೇಕಿದೆ. ಆದರೆ, ಇದೆಲ್ಲದರ ಹೊರತಾಗಿ ಮನೆಯಿಂದ ಹೊರಬಂದರೆ, ಸರಕಾರಕ್ಕೆ ಉಳಿಯುವುದು ದಂಡಂ ದಶಗುಣಂ ದಾರಿ ಮಾತ್ರ. ಎಲ್ಲಾ ಧರ್ಮದವರು ಇದನ್ನು ಅರ್ಥ ಮಾಡಿಕೊಂಡು, ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಿದೆ, ಜೊತೆಗೆ ಇತರರನ್ನೂ ಕೂಡಾ.

English summary
Controlling Law And Order Challenge For Karnataka Government Next Four Days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X