ಕಾಂಗ್ರೆಸ್ 130 ಸೀಟುಗಳಿಗಿಂತ ಹೆಚ್ಚು ಸ್ಥಾನ ಗೆಲ್ಲುತ್ತದೆ: ಎಂಬಿ ಪಾಟೀಲ್

ತಾವು 60 ಸೀಟು ದಾಟುವುದಿಲ್ಲ ಎಂದು ಬಿಜೆಪಿಗೆ ಗೊತ್ತಿದೆ. ಸದ್ಯಕ್ಕೆ ಕಾಂಗ್ರೆಸ್ 130-140 ಸೀಟುಗಳನ್ನು ಗೆಲ್ಲಲಿದೆ. 130ಕ್ಕಿಂತ ಕಡಿಮೆಯಾಗುವುದಿಲ್ಲ ಎಂದು ಪಾಟೀಲ್‌ ಹೇಳಿದ್ದಾರೆ.

ಬೆಂಗಳೂರು, ಫೆಬ್ರವರಿ 1: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು 130 ಸ್ಥಾನಗಳಿಗಿಂತಲೂ ಅಧಿಕ ಕ್ಷೇತ್ರಗಳನ್ನು ಗೆಲ್ಲುತ್ತದೆ ಎಂದು ಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಹೇಳಿದ್ದಾರೆ.

ತಾವು 60 ಸೀಟು ದಾಟುವುದಿಲ್ಲ ಎಂದು ಬಿಜೆಪಿಗೆ ಗೊತ್ತಿದೆ. ಸದ್ಯಕ್ಕೆ ಕಾಂಗ್ರೆಸ್ 130-140 ಸೀಟುಗಳನ್ನು ಗೆಲ್ಲಲಿದೆ. 130ಕ್ಕಿಂತ ಕಡಿಮೆಯಾಗುವುದಿಲ್ಲ. ಪಂಚಮಸಾಲಿ ಲಿಂಗಾಯತರಲ್ಲಿನ ಹತಾಶೆಯನ್ನು ಕಾಂಗ್ರೆಸ್ ಬಂಡವಾಳವನ್ನಾಗಿ ಮಾಡಿಕೊಂಡಿಲ್ಲ. ಜನಸಂಖ್ಯೆ ಮತ್ತು ಗೆಲುವಿನ ಆಧಾರದ ಮೇಲೆ ಪಕ್ಷ ನಿರ್ಧರಿಸುತ್ತದೆ. ಪಂಚಮಸಾಲಿಗಳಷ್ಟೇ ಅಲ್ಲ, ದಲಿತರು, ಹಿಂದುಳಿದವರು ಮತ್ತು ಬ್ರಾಹ್ಮಣರನ್ನು ಅವರ ಜನಸಂಖ್ಯೆ ಮತ್ತು ಗೆಲುವಿನ ಆಧಾರದ ಮೇಲೆ ನಿರ್ಧರಿಸುತ್ತೇವೆ ಎಂದು ಅವರು ಹೇಳಿದರು.

ಜನರು ಬಿಜೆಪಿಗೆ ಮತ ಹಾಕಲು ನಿರ್ಧರಿಸಿಲ್ಲ. ಪ್ರಧಾನಿ ಮೋದಿ ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಯಾವುದೇ ಬದಲಾವಣೆ ತರುವುದಿಲ್ಲ. ರಾಜ್ಯದಲ್ಲಿ ನಾಯಕತ್ವವಿದ್ದರೆ, ಬಿಜೆಪಿ ಅವರು ಗೆಲ್ಲಲು ಮೋದಿ ಅಥವಾ ಶಾ ಅವರನ್ನು ಏಕೆ ಅವಲಂಬಿಸಿದ್ದಾರೆ?" ಎಂದು ಪ್ರಶ್ನಿಸಿದರು.

Congress will win more than 130 seats: MB Patil

ಇನ್ನು ಕಾಂಗ್ರೆಸ್ ಮುಳುಗುವ ಹಡಗು ಎಂಬ ಬಿಜೆಪಿ ಹೇಳಿಕೆಗೆ, ಮುಳುಗುತ್ತಿರುವ ಹಡಗಿನಲ್ಲಿ ಯಾರೂ ಇಳಿಯುವುದಿಲ್ಲ. ಹಲವು ಜೆಡಿಎಸ್ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಇನ್ನೂ ಹೆಚ್ಚಿನವರು ಬರುತ್ತಾರೆ. ಬಿಜೆಪಿಯ ಶಾಸಕರು ಮತ್ತು ಇತರರು ಕೂಡ ಬಗೆರುತ್ತಾರೆ ಎಂದು ಅವರು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆ ಕೊಡುವನಷ್ಟು ದೊಡ್ಡವ ನಾನಲ್ಲ. ಅವರು ಯಾವ ಕ್ಷೇತ್ರದಲ್ಲಾದರೂ ನಿಲ್ಲಬಹುದು. ಅವರು ಯಾವ ಕ್ಷೇತ್ರದಲ್ಲಿ ನಿಂತರೂ ಗೆಲ್ಲುತ್ತಾರೆ. ಹಾಗಾಗಿ ಅವರು ಎಲ್ಲಿ ನಿಲ್ಲಬೇಕು ಎಂದು ಹೈಕಮಾಂಡ್‌ ನಿರ್ಧರಿಸುತ್ತೆ. ಅದರ ಬಗ್ಗೆ ನಾನು ನಿರ್ಧರಿಸಲಾಗಲ್ಲ. 2018ರ ಚುನಾವಣೆಯೇ ಬೇರೆ ಈಗಿನ ಚುನಾವಣೆಯೇ ಬೇರೆ. ಸಿದ್ದರಾಮಯ್ಯ ಅವರ ಜನಪರ ಕಾರ್ಯಗಳನ್ನು ಜನರು ಮರೆತಿಲ್ಲ ಎಂದರು.

Congress will win more than 130 seats: MB Patil

ಬೆಂಗಳೂರಿನಲ್ಲೂ ಕಾಂಗ್ರೆಸ್‌ ಗೆಲ್ಲುತ್ತದೆ. ರಾಜ್ಯದಲ್ಲೂ ಗೆದ್ದೇ ಗೆಲ್ಲುತ್ತದೆ. 130ರಿಂದ 140 ಸೀಟು ನಮಗೆ ಖಚಿತ. ರಮೇಶ್‌ ಜಾರಕಿಹೊಳಿ ಬಗ್ಗೆ ನಾನು ಮಾತನಾಡಲ್ಲ. ಅವರು ಆರೋಪ ಮಾಡಿರುವುದು ಅಧ್ಯಕ್ಷರಾದ ಡಿಕೆ ಶಿವಕುಮಾರ್‌ ಬಗ್ಗೆ ಅವರಿಗೆ ಅವರೇ ಉತ್ತರ ಕೊಡುತ್ತಾರೆ. ಇಲ್ಲಿ ಜನರ ನಿರ್ಧಾರವೇ ಅಂತಿಮವಾಗಿದ್ದು ಕಾಂಗ್ರೆಸ್ ಬಗ್ಗೆ ಜನರಿಗೆ ಗೊತ್ತಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+