ಬಿಜೆಪಿ rallyಯನ್ನು ಬುಡದಲ್ಲೇ ಹೊಸಕಿಹಾಕಿದ ಕಾಂಗ್ರೆಸ್
ಬೆಂಗಳೂರು, ಸೆಪ್ಟೆಂಬರ್ 05 : ಉಗ್ರ ಸಂಘಟನೆಗಳನ್ನು ನಿಷೇಧಿಸಬೇಕು, ಆರೆಸ್ಸೆಸ್ ಕಾರ್ಯರ್ತರ ಕೊಲೆ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು ಮತ್ತು ರಮಾನಾಥ್ ರೈ ಅವರಿಂದ ರಾಜೀನಾಮೆ ನೀಡಿಸಬೇಕು ಎಂಬ ಮೂರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಆರಂಭಿಸಿರುವ 'ಮಂಗಳೂರು ಚಲೋ' rallyಯನ್ನು ಕಾಂಗ್ರೆಸ್ ಬುಡದಲ್ಲೇ ಹೊಸಕಿಹಾಕಿದೆ.
In Pics : ಮಂಗಳೂರು ಚಲೋ rallyಯನ್ನು ಬುಡದಲ್ಲೇ ಹೊಸಕಿದ ಕಾಂಗ್ರೆಸ್
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಿಂದ ಮಂಗಳೂರಿಗೆ ಹೊರಟ ಬೈಕ್ ರ‍್ಯಾಲಿಗೆ ಪೊಲೀಸ್ ಇಲಾಖೆಯಿಂದ ಅನುಮತಿ ಸಿಗದಂತೆ ಮಾಡಿದ್ದು ಒಂದು ರೀತಿಯದಾದರೆ, ನಿಯಮವನ್ನು ಧಿಕ್ಕರಿಸಿ, ಹೆಲ್ಮೆಟ್ ಧರಿಸಿ ಮಂಗಳೂರಿಗೆ ಹೊರಟ ಬಿಜೆಪಿ ನಾಯಕರನ್ನು ಮತ್ತು ಸಹಸ್ಯ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಬಂಧಿಸಿದ್ದು ಮತ್ತೊಂದು.
ನಾಗರಿಕರ ಪ್ರತಿಭಟನಾ ಹಕ್ಕನ್ನು ಹತ್ತಿಕ್ಕಿ, ಕರ್ನಾಟಕದಲ್ಲಿ ಎಮರ್ಜೆನ್ಸಿಯಂತಹ ಪರಿಸ್ಥಿತಿಯನ್ನು ಕಾಂಗ್ರೆಸ್ ತಂದಿಟ್ಟಿದೆ ಎಂದು ಬಿಜೆಪಿ ನಾಯಕರು ಮೈಕ್ ಹಿಡಿದುಕೊಂಡು ಬೊಬ್ಬೆ ಹೊಡೆಯುತ್ತಿದ್ದಾರೆ. ಮಂಗಳೂರು ಚಲೋ ಯಾಕೆ ಮಾಡ್ತೀರಿ, ದೆಹಲಿ ಚಲೋ ಮಾಡಿ ಯಾರು ಬೇಡಂತಾರೆ. ಬೇಕಿದ್ದರೆ ನಿಮ್ಮ ಜೊತೆ ನಾವೂ ಬರ್ತೀವಿ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಕರ್ನಾಟಕಕ್ಕೆ ಅಮಿತ್ ಶಾ ಬಂದು ಹೋದ ನಂತರ, ಅಂಡು ಸುಟ್ಟ ಬೆಂಕಿನಂತಾಗಿರುವ ಕರ್ನಾಟಕದಲ್ಲಿನ ಬಿಜೆಪಿ ನಾಯಕರು, ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಲೇಬೇಕೆಂದು ಪಣತೊಟ್ಟು ಹೋರಾಟಕ್ಕಿಳಿದಿದ್ದಾರೆ. ಆದರೆ, ಈ ಹೋರಾಟವನ್ನು ಬೇರುಮಟ್ಟದಲ್ಲಿ ಕಿತ್ತೆಸೆದು ಸಿದ್ದರಾಮಯ್ಯನವರು ನಿಂತಲ್ಲಿಯೇ ಮೀಸೆ ತಿರುವುತ್ತಿದ್ದಾರೆ.

ಪೊಲೀಸ್ ಇಲಾಖೆ ಕೊಟ್ಟಿದ್ದ ಕಾರಣ
Rallyಯಲ್ಲಿ ಅಂದಾಜು 1000 ಬೈಕ್‌ಗಳು, ಸುಮಾರು 2 ಕಿ.ಮೀ ಉದ್ದ ವಿಸ್ತರಿಸುವುದರಿಂದ ಜಾಥಾ ಹಾದು ಹೋಗಲು ಕನಿಷ್ಟ 3-4 ಗಂಟೆಗಳು ಬೇಕಾಗುತ್ತದೆ. ಈ ಸಂದರ್ಭ ಬೆಂಗಳೂರು ನಗರದ ರಸ್ತೆಗಳ ಸಂಚಾರವು ಸ್ತಬ್ಧವಾಗುತ್ತದೆ, ಅಲ್ಲದೆ, ಅವಶ್ಯಕ ಮತ್ತು ತುರ್ತು ಸೇವೆ ವಾಹನಗಳಿಗೆ ಅಡ್ಡಿ ಉಂಟಾಗಿ ಸಾರ್ವಜನಿಕರಿಗೆ, ರೋಗಿಗಳಿಗೆ, ವೃದ್ಧರಿಗೆ, ಶಾಲಾಮಕ್ಕಳಿಗೆ ತೊಂದರೆ ಉಂಟಾಗುವ ಸಾಧ್ಯತೆಯಿರುತ್ತದೆ.

Rallyಗೆ ಪೊಲೀಸರಿಂದ ಅನುಮತಿ ಇಲ್ಲ
ಬೈಕ್ rally ನಡೆಸಿದಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗವುಂಟಾಗುವ ಸಾಧ್ಯತೆಯಿರುವದರಿಂದ ಈ ಸಂದರ್ಭದಲ್ಲಿ ಅಹಿತಕರ ಘಟನೆ ಉಂಟಾಗಿ, ಸಾರ್ವಜನಿಕ ಪ್ರಾಣ, ಆಸ್ತಿಪಾಸ್ತಿ ಹಾಗೂ ಭದ್ರತೆಗೆ ಹಾನಿಯುಂಟಾಗುವ ಸಾಧ್ಯತೆಯಿರುವುದರಿಂದ ಬೈಕ್ ಜಾಥಾಗೆ ಅನುಮತಿ ನೀಡಿರುವುದಿಲ್ಲ ಎಂದು ಗೃಹ ಇಲಾಖೆಯ ಅಣತಿಯಂತೆ ಬೆಂಗಳೂರು ಪೊಲೀಸ್ ಆಯುಕ್ತರು ಆಜ್ಞೆ ಹೊರಡಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ ನೇತೃತ್ವ
ಮಂಗಳೂರು ಚಲೋ rallyಯ ನೇತೃತ್ವವನ್ನು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ, ಮೈಸೂರು-ಮಡಿಕೇರಿ ಸಂಸದ ಪ್ರತಾಪ್ ಸಿಂಹ ಅವರು ವಹಿಸಿದ್ದರೆ, ಅವರ ಜೊತೆಗೆ ಫೈರ್ ಬ್ರಾಂಡ್ ರಾಜಕಾರಣಿ ಶೋಭಾ ಕರಂದ್ಲಾಜೆ, ಅಶೋಕ್, ಅರವಿಂದ್ ಲಿಂಬಾವಳಿ ಮುಂತಾದ ನಾಯಕರು ಸಹಸ್ರಾರು ಕಾರ್ಯಕರ್ತರೊಂದಿಗೆ ಫ್ರೀಡಂ ಪಾರ್ಕ್ ಬಳಿ ಜಮಾಯಿಸಿದ್ದರು.

ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ನಾಯಕರ ಬಂಧನ
ಪೊಲೀಸ್ ಇಲಾಖೆಯ ಆಜ್ಞೆಯನ್ನು ಮೀರಿ ಮಂಗಳೂರಿಗೆ ಹೊರಟ ಈ ಎಲ್ಲ ನಾಯಕರನ್ನು ರಟ್ಟೆ ಹಿಡಿದು ಎಳೆದುಕೊಂಡು ವ್ಯಾನ್ ಹತ್ತಿಸಿರುವ ಪೊಲೀಸರು ಸಾಂಕೇತಿಕವಾಗಿ ಬಂಧಿಸಿ, ಶಿರಸಿ ಸರ್ಕಲ್ ಬಳಿಯಿರುವ ಮೈದಾನಕ್ಕೆ ಕರೆದುಕೊಂಡು ಹೋಗಿದ್ದಾರೆ. ಸುಮಾರು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಮಂಗಳೂರು ಚಲೋ rally ಯಶಸ್ವಿಯಾಗದಂತೆ ಪೊಲೀಸರು ನೋಡಿಕೊಂಡಿದ್ದಾರೆ.

ಶೋಭಾರನ್ನು ಎಳೆದಾಡಿದ ಪುರುಷ ಪೊಲೀಸ್
ಶೋಭಾ ಕರಂದ್ಲಾಜೆ ಅವರನ್ನು ಬಂಧಿಸುವಾಗ, ಪಟ್ಟು ಹಿಡಿದು ನೆಲದ ಮೇಲೆ ಕುಳಿತಿದ್ದ ಉಡುಪಿ-ಚಿಕ್ಕಮಗಳೂರು ಸಂಸದೆಯನ್ನು ಪುರುಷ ಪೊಲೀಸರೇ ಬಲವಂತವಾಗಿ ಎಳೆದುಕೊಂಡು ಹೋಗಿರುವುದು ಅಕ್ಷಮ್ಯ ಅಪರಾಧ. ಏಕೆ ಅಲ್ಲಿ ಮಹಿಳಾ ಪೊಲೀಸರು ಇರಲಿಲ್ಲವೆ? ಅವರು ಮಹಿಳಾ ಪೊಲೀಸರ ಬಲಕ್ಕೆ ಶೋಭಾ ಅವರು ಬಗ್ಗುತ್ತಿರಲಿಲ್ಲವೆ? ತಮ್ಮನ್ನು ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳಲಾಯಿತು ಎಂದು ಶೋಭಾ ಬೊಬ್ಬೆ ಹಾಕುತ್ತಿದ್ದಾರೆ.

ಬಿಜೆಪಿ ನಾಯಕರು ಬಯಸಿದ್ದೂ ಅದನ್ನೇ?
ಬಿಜೆಪಿಗೆ ಬೇಕಾಗಿದ್ದೂ ಇದೇ. ಹೊತ್ತಿಲ್ಲದ ಹೊತ್ತಿನಲ್ಲಿ ಭಾರೀ ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಯಾವುದೇ ಸಿದ್ಧತೆಯಿಲ್ಲದೆ, ಬರೀ ತಲೆಗೆ ಹೆಲ್ಮೆಟ್ ಹಾಕಿಕೊಂಡು ಬೈಕ್ ಮೇಲೆ ಮಂಗಳೂರಿಗೆ ಹೋಗುವುದು ಬಿಜೆಪಿ ನಾಯಕರಿಂದ ಊಹಿಸಲೂ ಅಸಾಧ್ಯವಾದ ಮಾತು. ಇಲ್ಲೇ ಬಂಧನಕ್ಕೀಡಾದರೆ ಮಂಗಳೂರಿಗೆ ಹೋಗದಂತೆಯೂ ಆಯಿತು, ಕಾಂಗ್ರೆಸ್ ವಿರುದ್ಧ ಭಾರೀ ಪ್ರತಿಭಟನೆ ತೆೋರಿದಂತೆಯೂ ಆಯಿತು ಎನ್ನುವ ಲೆಕ್ಕಾಚಾರವಿದ್ದರೂ ಇದ್ದೀತು.












Click it and Unblock the Notifications