ಬಿಜೆಪಿ ರಾಜ್ಯ ಕಚೇರಿ ಸ್ಪೋಟಕ್ಕೆ ಯತ್ನ: ವಿಜಯೇಂದ್ರ ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 10: ಬ್ರೂಕ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ್ದ ಶಂಕಿತ ಉಗ್ರರು ಮಲ್ಲೇಶ್ವರ ದಲ್ಲಿರುವ ಬಿಜೆಪಿ ರಾಜ್ಯ ಘಟಕದ ಕಚೇರಿಯನ್ನು ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ದಿನವೇ ಸ್ಫೋಟಿಸಲು ವಿಫಲ ಯತ್ನ ನಡೆಸಿದ್ದರು ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹೇಳಿದೆ.
ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಟ್ವೀಟ್ ಮಾಡಿದ್ದು, ಭಯೋತ್ಪಾದಕರ ಗುರಿ ಯಾರತ್ತ ಇರುತ್ತದೆ ಎಂಬುದನ್ನು ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣದ ತನಿಖೆ ಬಹಿರಂಗಗೊಳಿಸಿದೆ. ರಾಷ್ಟ್ರೀಯ ಹಿತಾಸಕ್ತಿ ತನ್ನ ಪರಮ ಆದ್ಯತೆಯನ್ನಾಗಿಸಿಕೊಂಡಿರುವ ಬಿಜೆಪಿ ಹಾಗೂ ರಾಷ್ಟ್ರ ಭಕ್ತ ಸಂಘಟನೆಗಳ ಮೇಲೆ ದಾಳಿ ನಡೆಸುವುದು ದೇಶ ಕಂಟಕ ಉಗ್ರಸಂಘಟನೆಗಳ ಮುಂಚೂಣಿ ಯೋಜನೆಯಾಗಿರುತ್ತದೆ ಎಂಬುದನ್ನು ಅನೇಕ ಘಟನೆಗಳು ತೋರಿಸಿಕೊಟ್ಟಿವೆ.

ಇಂಥಾ ಉಗ್ರಬೆದರಿಕೆಗಳನ್ನು ಮೆಟ್ಟಿನಿಂತು ನಾವು ಮುನ್ನಡೆಯುತ್ತಿದ್ದೇವೆ, ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಅಜೆಂಡಾ, ಅಧಿಕಾರಕ್ಕಾಗಿ ಮತಬ್ಯಾಂಕ್ ರಾಜಕಾರಣವಾದರೆ ಬಿಜೆಪಿ ಮಿತ್ರ ಪಕ್ಷಗಳ ಕಾರ್ಯಸೂಚಿ ರಾಷ್ಟ್ರ ರಕ್ಷಣೆ ಹಾಗೂ ಅಭಿವೃದ್ಧಿಯ ಚಿಂತನೆಯಾಗಿದೆ.
ಕಾಂಗ್ರೆಸ್ ಆಡಳಿತದ ರಾಜ್ಯಗಳು ಭಯೋತ್ಪಾದಕ ಚಟುವಟಿಕೆಗಳಿಗೆ ತಾಣವಾಗುತ್ತದೆ, ಅಪರಾಧಗಳು ತಲೆ ಎತ್ತಲು ಮುಕ್ತವಾಗಿರುತ್ತದೆ ಎಂಬ ಆರೋಪಗಳಲ್ಲಿ ಹುರುಳಿರುವುದನ್ನು ಸಂಭವಿಸುವ ಘಟನೆಗಳು ಸಾಕ್ಷಿ ಹೇಳುತ್ತವೆ.
ಭಯೋತ್ಪಾದಕರ ಗುರಿ ಯಾರತ್ತ ಇರುತ್ತದೆ ಎಂಬುದನ್ನು ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣದ ತನಿಖೆ ಬಹಿರಂಗಗೊಳಿಸಿದೆ. ರಾಷ್ಟ್ರೀಯ ಹಿತಾಸಕ್ತಿ ತನ್ನ ಪರಮ ಆದ್ಯತೆಯನ್ನಾಗಿಸಿಕೊಂಡಿರುವ @BJP4Karnataka ಹಾಗೂ ರಾಷ್ಟ್ರ ಭಕ್ತ ಸಂಘಟನೆಗಳ ಮೇಲೆ ದಾಳಿ ನಡೆಸುವುದು ದೇಶ ಕಂಟಕ ಉಗ್ರಸಂಘಟನೆಗಳ ಮುಂಚೂಣಿ ಯೋಜನೆಯಾಗಿರುತ್ತದೆ ಎಂಬುದನ್ನು ಅನೇಕ ಘಟನೆಗಳು… pic.twitter.com/XxVggPXedq
— Vijayendra Yediyurappa (@BYVijayendra) September 10, 2024
ಕಳೆದ ಒಂದೂವರೆ ವರುಷದ ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಳಿತಪ್ಪಿರುವುದಕ್ಕೆ ಸಾಕ್ಷಿಯಾಗಿ ಸಂಭವಿಸಿರುವ ಅನೇಕ ದುರ್ಘಟನೆಗಳು ನಮ್ಮ ಮುಂದಿವೆ, ಅಭಿವೃದ್ಧಿಯತ್ತ ಒಂದೇ ಒಂದು ಹೆಜ್ಜೆ ಇಡದ ಭ್ರಷ್ಟ ಹಗರಣಗಳ ಸರಮಾಲೆ ಹೊತ್ತ ರಾಜ್ಯ ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆಯ ವಿಷಯದಲ್ಲಾದರೂ ಜನರಿಗೆ ನೆಮ್ಮದಿ ಕೊಡುವ ಪ್ರಮಾಣಿಕ ಪ್ರಯತ್ನ ಮಾಡಲಿ ಎಂದು ಬಿ ವೈ ವಿಜಯೇಂದ್ರ ಅವರು ಹೇಳಿದರು.












Click it and Unblock the Notifications