• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಐಸಿಸಿ ಪುನಾರಚನೆ: ಪ್ರಮುಖ ಹುದ್ದೆಗೆ ಕೃಷ್ಣ ಭೈರೇಗೌಡ ನಿಯೋಜನೆ!

|

ಬೆಂಗಳೂರು, ಸೆ. 12: ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಸಚಿವ ಕೃಷ್ಣ ಭೈರೇಗೌಡ ಅವರನ್ನು ರಾಷ್ಟ್ರರಾಜಕಾರಣಕ್ಕೆ ಆಹ್ವಾನಿಸಿದೆ. ಎಐಸಿಸಿ ಪುನಾರಚನೆಯಲ್ಲಿ ಕೃಷ್ಣ ಭೈರೇಗೌಡ ಅವರಿಗೆ ಮಹತ್ವದ ಜವಾಬ್ದಾರಿಯನ್ನು ಕಾಂಗ್ರೆಸ್ ಹೈಕಮಾಂಡ್ ವಹಿಸಿದೆ. ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರ ಸ್ಥಾನಕ್ಕೆ ಕೃಷ್ಣ ಭೈರೇಗೌಡ ಅವರನ್ನು ನೇಮಕ ಮಾಡಲಾಗಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದ ವೀರಪ್ಪ ಮೋಯಿಲಿ ಅವರನ್ನು ಎಐಸಿಸಿ ಚುನಾವಣಾ ಸಮಿತಿಯಿಂದ ಕೈಬಿಡಲಾಗಿದ್ದು, ಕೃಷ್ಣ ಭೈರೇಗೌಡ ಅವರನ್ನು ನೇಮಕ ಮಾಡಲಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ದೃಷ್ಟಿಯಿಂದ ಮಹತ್ವದ ಜವಾಬ್ದಾರಿಯನ್ನು ಮಾಜಿ ಸಚಿವ ಕೃಷ್ಣ ಭೈರೇಗೌಡ ಅವರಿಗೆ ವಹಿಸಲಾಗಿದೆ. ಎಐಸಿಸಿ ಚುನಾವಣಾ ಸಮಿತಿ ಸದಸ್ಯರನ್ನಾಗಿ ಕೃಷ್ಣ ಭೈರೇಗೌಡ ಅವರನ್ನು ನೇಮಕ ಮಾಡಲಾಗಿದೆ. ಅಧ್ಯಕ್ಷರೂ ಸೇರಿದಂತೆ ಐವರು ಸದಸ್ಯರ ಎಐಸಿಸಿ ಚುನಾವಣಾ ಸಮಿತಿ ರಾಜ್ಯ ವಿಧಾನಸಭೆ ಸೇರಿದಂತೆ ಪಕ್ಷದ ಎಲ್ಲ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಹೀಗಾಗಿ ಈ ಬಾರಿಯ ಎಐಸಿಸಿ ಪುನಾರಚನೆಯಲ್ಲಿ ಕೃಷ್ಣ ಭೈರೇಗೌಡ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ತೆಗೆದುಕೊಳ್ಳುವ ಮೂಲಕ ಮಹತ್ವದ ತೀರ್ಮಾನವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಿದೆ.

ಎಐಸಿಸಿ ಪುನಾರಚನೆ: ಮಲ್ಲಿಕಾರ್ಜುನ್ ಖರ್ಗೆರಿಗೆ ನಿಜವಾಗಿಯೂ ಹಿನ್ನಡೆ ಆಯ್ತಾ?

ಮಾಜಿ ಸಚಿವ ಕೃಷ್ಣ ಭೈರೇಗೌಡ ಅವರು ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಚಿವರಾಗಿ ಕಾನೂನು ಇಲಾಖೆ ನಿರ್ವಹಿಸಿದ ಅನುಭವವಿದೆ. ಜೊತೆಗೆ ಅವರು ಮೂಲ ಕಾಂಗ್ರೆಸ್ಸಿಗರೂ ಹೌದು. ಹಿಂದೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಮಧುಸೂದನ್ ಮಿಸ್ತ್ರಿ ಅವರು ಎಐಸಿಸಿ ಚುನಾವಣಾ ಸಮಿತಿ ಅಧ್ಯಕ್ಷರಾಗಿದ್ದಾರೆ. ಅವರೊಂದಿಗೆ ರಾಜೇಶ್ ಮಿಶ್ರಾ, ಎಸ್. ಜ್ಯೋತಿಮಣಿ, ಅರವಿಂದರ್ ಸಿಂಗ್ ಲೌಲಿ ಹಾಗು ಕೃಷ್ಣ ಭೈರೇಗೌಡ ಅವರು ಸಮಿತಿ ಸದಸ್ಯರಾಗಿದ್ದಾರೆ.

   HD kumaraswamy : ನಾವು ಬೇರೆಯವರ ತರ ಕದ್ದು ಮುಚ್ಚಿ ಕೊಲಂಬೊ ಹೋಗಿರ್ಲಿಲ್ಲ | Oneindia Kannada

   ಹಿಂದೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಬಲ ಸಂಘಟನಕಾರ ದಿ. ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಗೆ ಸಂಸತ್ ಚುನಾವಣೆಯಲ್ಲಿ ತೀವ್ರ ಪೈಪೋಟಿಯನ್ನು ಕೊಟ್ಟಿದ್ದರು. ಕೃಷ್ಣ ಭೈರೇಗೌಡ ಅವರು ನಿರ್ಧಾಕ್ಷಿಣ್ಯ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಹಿಂದುಮುಂದೆ ನೋಡುವುದಿಲ್ಲ. ವಿದೇಶದಲ್ಲಿ ಓದಿರುವುದರಿಂದ ಇಂಗ್ಲೀಷ್ ಭಾಷೆ ಮೇಲೆ ಹಿಡಿತವಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಪ್ರಮುಖ ಜವಾಬ್ದಾರಿ ಹುದ್ದೆಯನ್ನು ಕೃಷ್ಣ ಭೈರೇಗೌಡ ಅವರಿಗೆ ವಹಿಸಿದೆ.

   English summary
   Krishna Bhairaygowda has been appointed to the position of former Union Minister Veerappa Moily. Krishna Bhairaygowda has been appointed as a member of the AICC Election Committee.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X