ಬಿಜೆಪಿ ನಾಯಕರು ಕನ್ನಡಿಗರು ಕೊಟ್ಟಿರುವ ತಪರಾಕಿಗೆ ಚಿಕಿತ್ಸೆ ಪಡೆದು ರೆಸ್ಟ್ ಮಾಡಲಿ: ಕಾಂಗ್ರೆಸ್ ಟ್ವೀಟ್
ಚುನಾವಣೆಗೆ ಮುನ್ನ ಕಾಂಗ್ರೆಸ್ ಘೋಷಣೆ ಮಾಡಿದ್ದ ಗ್ಯಾರಂಟಿಗಳನ್ನು ತಕ್ಷಣದಿಂದಲೇ ಜಾರಿ ಮಾಡಬೇಕು ಎಂದು ವಿರೋಧ ಪಕ್ಷಗಳು ಈಗಾಗಲೇ ಒತ್ತಾಯ ಮಾಡಲು ಆರಂಭಿಸಿವೆ. ಕರ್ನಾಟಕ ಬಿಜೆಪಿ ಕೂಡ ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರನ್ನು ಒತ್ತಾಯ ಮಾಡಿದೆ. ಇದಕ್ಕೆ ಕಾಂಗ್ರೆಸ್ ಕೂಡ ತಿರುಗೇಟು ನೀಡಿದೆ.
ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಟ್ವೀಟ್ ಮಾಡಿದ್ದ ಕರ್ನಾಟಕ ಬಿಜೆಪಿ, "ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳು ರಾಜ್ಯದ ವಾತಾವರಣವನ್ನು ಹಾಳುಮಾಡುತ್ತಿದೆ. ಜನರು ಗ್ಯಾರಂಟಿಗಳಿಗೆ ಕಾಯುತ್ತಿದ್ದರೆ, ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ದೆಹಲಿ ಸುತ್ತುತ್ತಿದ್ದಾರೆ. ರಾಜ್ಯದಲ್ಲಿ ನಿತ್ಯ ನಿರಂತರ ಜರುಗುತ್ತಿರುವ ಇಂತಹ ಹಲವಾರು ಘಟನೆಗಳಿಗೆ ಸಿದ್ದರಾಮಯ್ಯ ಅವರ ನೇತೃತ್ವದ ಎಟಿಎಂ ಸರ್ಕಾರವೇ ನೇರ ಹೊಣೆ!" ಎಂದು ಹೇಳಿತ್ತು.

ಇದಕ್ಕೆ ಪ್ರತ್ಯುತ್ತರ ನೀಡಿರುವ ಕರ್ನಾಟಕ ಕಾಂಗ್ರೆಸ್ ಬಿಜೆಪಿ ನಾಯಕರ ಕಾಲೆಳದಿದೆ. " ನಾವು ಘೋಷಿಸಿದ 5 ಗ್ಯಾರಂಟಿಗಳನ್ನು ಜಾರಿಗೊಳಿಸುವುದು ಗ್ಯಾರಂಟಿ. ನಾವು ನಮ್ಮ ಜನರ ಹಿತ ಕಾಪಾಡುವ ಬದ್ಧತೆ ಹೊಂದಿದ್ದೇವೆ. ಕರ್ನಾಟಕದ ಬಿಜೆಪಿ ನಾಯಕರು ಕನ್ನಡಿಗರು ನೀಡಿದ ತಪರಾಕಿಗೆ ಚಿಕಿತ್ಸೆ ಪಡೆದು ರೆಸ್ಟ್ ಮಾಡಲಿ, ಹಾಗೆಯೇ 'ವಿರೋಧಪಕ್ಷದ ನಾಯಕ' ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಹುಡುಕಿಕೊಳ್ಳಲಿ." ಎಂದು ತಿರುಗೇಟು ನೀಡಿದೆ.
ರಾಜೀನಾಮೆ ನೀಡುವವರು ಯಾರು ಎಂದ ಕಾಂಗ್ರೆಸ್
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಹೊಣೆ ಹೊತ್ತ ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ರಾಜೀನಾಮೆ ಕೊಟ್ಟಿದ್ದಾರೆ. ಇದನ್ನು ಉಲ್ಲೇಖಿಸದೆಯೇ ಕಾಂಗ್ರೆಸ್ ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದೆ.
ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳು ರಾಜ್ಯದ ವಾತಾವರಣವನ್ನು ಹಾಳುಮಾಡುತ್ತಿದೆ.
— BJP Karnataka (@BJP4Karnataka) May 25, 2023
ಜನರು ಗ್ಯಾರಂಟಿಗಳಿಗೆ ಕಾಯುತ್ತಿದ್ದರೆ, ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ದೆಹಲಿ ಸುತ್ತುತ್ತಿದ್ದಾರೆ.
ರಾಜ್ಯದಲ್ಲಿ ನಿತ್ಯ ನಿರಂತರ ಜರುಗುತ್ತಿರುವ ಇಂತಹ ಹಲವಾರು ಘಟನೆಗಳಿಗೆ @siddaramaiah ಅವರ ನೇತೃತ್ವದ #ATMSarkara ವೇ ನೇರ ಹೊಣೆ! pic.twitter.com/t1DeVa676z
ಚುನಾವಣೆಯಲ್ಲಿ ಹೀನಾಯ ಸೋಲಿನ ಹೊಣೆ ಹೊರುವವರು, ಹೊಣೆ ಹೊತ್ತು ರಾಜೀನಾಮೆ ಕೊಡುವವರು ಯಾರೂ ಇಲ್ಲವೇ ಬಿಜೆಪಿಯಲ್ಲಿ!? ಈ ಸೋಲಿಗೆ ಹೊಣೆ ಯಾರದ್ದು, ಅಮಿತ್ ಷಾಅವರದ್ದೋ?, ಬೊಮ್ಮಾಯಿಯವರದ್ದೋ? ಮೋದಿಯವರದ್ದೋ ? ನಳಿನ್ ಕಟೀಲರದ್ದೋ? ಸೋಲಿನ ಹೊಣೆ ಹೊತ್ತು ರಾಜೀನಾಮೆ ಕೊಡುವವರು ಯಾರು?! ಎಂದು ಪ್ರಶ್ನೆ ಮಾಡಿದೆ.
ನಾವು ಘೋಷಿಸಿದ 5 ಗ್ಯಾರಂಟಿಗಳನ್ನು ಜಾರಿಗೊಳಿಸುವುದು ಗ್ಯಾರಂಟಿ.
— Karnataka Congress (@INCKarnataka) May 25, 2023
ನಾವು ನಮ್ಮ ಜನರ ಹಿತ ಕಾಪಾಡುವ ಬದ್ಧತೆ ಹೊಂದಿದ್ದೇವೆ.@BJPKarnataka ನಾಯಕರು ಕನ್ನಡಿಗರು ನೀಡಿದ ತಪರಾಕಿಗೆ ಚಿಕಿತ್ಸೆ ಪಡೆದು ರೆಸ್ಟ್ ಮಾಡಲಿ, ಹಾಗೆಯೇ 'ವಿರೋಧಪಕ್ಷದ ನಾಯಕ' ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಹುಡುಕಿಕೊಳ್ಳಲಿ.
ಉಚಿತ ಗ್ಯಾರಂಟಿಗಳನ್ನು ಆದಷ್ಟು ಬೇಗ ಜಾರಿಗೆ ತರಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಅಧಿಕಾರಕ್ಕೆ ಬರುವವರೆಗೆ ಉಚಿತ ಗ್ಯಾರಂಟಿ ಎಂದಿದ್ದ ಕಾಂಗ್ರೆಸ್ ಈಗ ಷರತ್ತು ವಿಧಿಸುವ ಮಾತನಾಡುತ್ತಿದೆ, ಯಾವುದೇ ಷರತ್ತಿಲ್ಲದೆ ಎಲ್ಲಾ ಗ್ಯಾರಂಟಿಗಳನ್ನು ಪೂರೈಸಬೇಕು ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಕೂಡ ಏನೆ ಕಷ್ಟ ಆದರೂ ಉಚಿತ ಘೋಷಣೆಗಳನ್ನು ಜಾರಿ ಮಾಡುತ್ತೇವೆ ಎನ್ನುವ ಹೇಳಿಕೆಯನ್ನು ಪುನರುಚ್ಚರಿಸಿದೆ. ಸಚಿವ ಸಂಪುಟ ರಚನೆಯಾದ ನಂತರವೇ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡುವ ಭರವಸೆ ನೀಡಿದೆ.












Click it and Unblock the Notifications