ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯನ್ನು 'ಕುದುರೆ ವ್ಯಾಪಾರ' ಖೆಡ್ಡಾಕ್ಕೆ ಕೆಡವಿದ ಕಾಂಗ್ರೆಸ್‌ ತಂತ್ರ

By Manjunatha
|
Google Oneindia Kannada News

Recommended Video

ಬಿಜೆಪಿಯನ್ನ ಮಟ್ಟ ಹಾಕಲು ಕಾಂಗ್ರೆಸ್ ಮಾಡಿದ ತಂತ್ರ ವರ್ಕ್ ಔಟ್ ಆಯ್ತಾ? | Oneindia Kannada

ಬಿಜೆಪಿಯ ಆಪರೇಷನ್‌ ಕಮಲವನ್ನು ಕಾಂಗ್ರೆಸ್‌-ಜೆಡಿಎಸ್‌ ಯಶಸ್ವಿಯಾಗಿ ತಡೆ ಹಿಡಿದಿದೆ. ರೆಸಾರ್ಟ್‌ ರಾಜಕಾರಣ ಕಾಂಗ್ರೆಸ್‌-ಜೆಡಿಎಸ್‌ ಶಾಸಕರನ್ನು ಬೇಲಿ ಹಾರಿ ಬಿಜೆಪಿ ಪಾಳಯ ಸೇರದಂತೆ ಮಾಡಿದೆ.

ಎದುರು ಪಾಳಯದ ಶಾಸಕರನ್ನು ಸೆಳೆಯಲು ಹೋಗಿ ಬಿಜೆಪಿಯ ದೊಡ್ಡ-ದೊಡ್ಡ ನಾಯಕರುಗಳೇ ಖೆಡ್ಡಾಕ್ಕೆ ಬಿದ್ದಿದ್ದಾರೆ, ಕೇವಲ ಎರಡು ದಿನದಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿ ನಾಯಕರ ಬರೋಬ್ಬರಿ ಆರು ಆಡಿಯೋಗಳನ್ನು ಬಿಡುಗಡೆ ಮಾಡಿ ಭ್ರಷ್ಟಾಚಾರದ ಆರೋಪ ಹೊರಿಸಿದೆ.

ಬಿಜೆಪಿ ಹಣದ ಆಮಿಷದ ಆಡಿಯೋ ಸುಳ್ಳೇ ಸುಳ್ಳು: ಕಾಂಗ್ರೆಸ್ಸಿಗೆ ತೀವ್ರ ಮುಜುಗರಬಿಜೆಪಿ ಹಣದ ಆಮಿಷದ ಆಡಿಯೋ ಸುಳ್ಳೇ ಸುಳ್ಳು: ಕಾಂಗ್ರೆಸ್ಸಿಗೆ ತೀವ್ರ ಮುಜುಗರ

ಜನಾರ್ಧನ ರೆಡ್ಡಿ, ಶ್ರೀರಾಮುಲು, ಮುರಳಿಧರ ರಾವ್, ಯಡಿಯೂರಪ್ಪ, ಶ್ರೀರಾಮುಲು ಅವರಂತಹಾ ಬಿಜೆಪಿಯ ಮುಂಚೂಣಿಯ ನಾಯಕರುಗಳು ಆಡಿಯೋ ಕ್ಲಿಪ್‌ಗಳನ್ನೇ ಬಿಡುಗಡೆ ಮಾಡಿದ ಕಾಂಗ್ರೆಸ್ ಬಿಜೆಪಿಯ ಪ್ರಯತ್ನಕ್ಕೆ ಭಾರಿ ಹಿನ್ನಡೆ ಉಂಟುಮಾಡಿತು.

ಆದರೆ ಹೀಗೆ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದು ಆಕಸ್ಮಿಕವಲ್ಲ ಇದೊಂದು ತಂತ್ರ ಎಂಬುದು ಇದೀಗ ತಿಳಿದುಬಂದಿದೆ. ಬಿಜೆಪಿ ನಾಯಕರುಗಳು ತಮ್ಮ ಶಾಸಕರಿಗೆ ಕರೆ ಮಾಡುವ ವಿಷಯ ಈ ಮೊದಲೇ ಕಾಂಗ್ರೆಸ್‌ಗೆ ಗೊತ್ತಿತ್ತು ಅದನ್ನೇ ಬಳಸಿಕೊಂಡು ಬಿಜೆಪಿಯ ಮುಖವಾಡ ಕಳಚಲು ಕಾಂಗ್ರೆಸ್‌ ಮೊದಲೇ ಪ್ಲಾನ್‌ ಮಾಡಿತ್ತು.

Congress planed and recorded calls of BJP leaders

ಫಲಿತಾಂಶ ಬಂದ ದಿನವೇ ಮಧ್ಯವರ್ತಿಯೊಬ್ಬ ಕಾಂಗ್ರೆಸ್‌ನ ಶಾಸಕನೋರ್ವವನ್ನು ಸಂಪರ್ಕಿಸಿ ಬಿಜೆಪಿಗೆ ಬರುವಂತೆ ಆಹ್ವಾನ ನೀಡಿದ್ದ, ಬಿಜೆಪಿಯ ಮುಖ್ಯ ನಾಯಕರು 'ಉಳಿದ ವಿಷಯ' ಮಾತನಾಡುತ್ತಾರೆ ಎಂದೂ ಹೇಳಿದ್ದ, ಇದನ್ನು ಅರಿತ ಕಾಂಗ್ರೆಸ್‌ ಬಿಜೆಪಿ ನಾಯಕರು ಕರೆ ಮಾಡಿದಾಗ ಅದನ್ನು ರೆಕಾರ್ಡ್ ಮಾಡಿಕೊಂಡು ಮಾಧ್ಯಮಗಳ ಮುಂದಿಡಲು ಯೋಜನೆ ರೂಪಿಸಿತು.

ರೆಡ್ಡಿ 'ಕುದುರೆ ವ್ಯಾಪಾರ'ದ ಆಡಿಯೋ ಬಿಡುಗಡೆ ಮಾಡಿದ ಉಗ್ರಪ್ಪ ರೆಡ್ಡಿ 'ಕುದುರೆ ವ್ಯಾಪಾರ'ದ ಆಡಿಯೋ ಬಿಡುಗಡೆ ಮಾಡಿದ ಉಗ್ರಪ್ಪ

ಅದರಂತೆ ತನ್ನ ಶಾಸಕರಿಗೂ ಸೂಚಿಸಿ ಬಿಜೆಪಿಯ ಯಾರೇ ಶಾಸಕರು ಕರೆ ಮಾಡಿದರೂ ಸ್ವೀಕರಿಸಿ ಮಾತನಾಡಿ ಕರೆ ರೆಕಾರ್ಡ್‌ ಮಾಡಿಕೊಂಡು ತಮಗೆ ನೀಡುವಂತೆ ಸೂಚಿಸಿತ್ತು. ಅದರಂತೆ ಶಾಸಕರು ಮಾಡಿದರು.

ಆಪರೇಷನ್ ಕಮಲಕ್ಕೆ ಯಡಿಯೂರಪ್ಪರಿಂದಲೇ ಯತ್ನ! ಆಪರೇಷನ್ ಕಮಲಕ್ಕೆ ಯಡಿಯೂರಪ್ಪರಿಂದಲೇ ಯತ್ನ!

ಬಿಜೆಪಿಯ ಆಪರೇಷನ್ ಕಮಲದ ವಿರುದ್ಧ ಆಡಿಯೋ ಕ್ಲಿಪ್‌ ಬಳಕೆ ಮತ್ತು ಮಾಧ್ಯಮಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಹೊತ್ತಿದ್ದ ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಅವರು ಆ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಒಟ್ಟು ಆರು ರೆಕಾರ್ಡಿಂಗ್‌ಗಳನ್ನು ಮಾಧ್ಯಮದವರ ಮುಂದಿಟ್ಟರು.

ಇದೇ ಆಡಿಯೋ ಕ್ಲಿಪ್‌ಗಳನ್ನು ಇಟ್ಟುಕೊಂಡು ಯಡಿಯೂರಪ್ಪ, ಶ್ರೀರಾಮುಲು, ಜನಾರ್ದನ ರೆಡ್ಡಿ, ಮುರಳಿಧರ ರಾವ್ ಅವರ ವಿರುದ್ಧ ದೂರು ಭ್ರಷ್ಟಾಚಾರಕ್ಕೆ ಯತ್ನ ಆರೋಪ ಮಾಡಿದ ಕಾಂಗ್ರೆಸ್‌ ದೂರು ಸಹ ನೀಡಿದೆ.

English summary
Six audio clips of various BJP leaders were released by congress in just 2 days. This was planned by the congress to record calls of BJP leaders. Now congress gave complaint against Yeddyurappa, Sriramulu, Janardhan Reddy, Muralidhar Rao.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X