ಕಾಂಗ್ರೆಸ್ಸಿನ ಮುಂದಿನ ಮುಖ್ಯಮಂತ್ರಿ ರೇಸಿಗೆ ಮತ್ತೊಂದು ಹೆಸರು ಸೇರ್ಪಡೆ!
ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಚಾಲ್ತಿಯಲ್ಲಿರಬೇಕಾದರೆ, ಕಾಂಗ್ರೆಸ್ಸಿನಲ್ಲೂ ಈ ವಿಚಾರ ಮುನ್ನಲೆಗೆ ಬಂದು ದೊಡ್ಡ ಸುದ್ದಿಯಾಗುತ್ತಿರುವುದು ಉದ್ದೇಶಪೂರ್ವಕವೋ ಅಥವಾ ಕಾಕತಾಳಿಯವೋ?
ಒಟ್ಟಿನಲ್ಲಿ, ಆಡಳಿತ ಬಿಜೆಪಿಯ ವಿರುದ್ದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ಸಿಗೆ ಹೋರಾಡಲು ಸಾಕಷ್ಟು ಸರಕುಗಳಿದ್ದರೂ, ಮುಂದಿನ ಚುನಾವಣೆ ಯಾರ ಹೆಸರಿನಲ್ಲಿ ಮುನ್ನಡೆಯಾಗಬೇಕು ಎನ್ನುವುದು ಪಕ್ಷಕ್ಕೆ ಇರಿಸುಮುರಿಸು ತಂದೊಡ್ಡುತ್ತಿದೆ.
ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹಚ್ಚಿದ ಬೆಂಕಿ, ಪ್ರಮುಖ ನಾಯಕರ ಎಚ್ಚರಿಕೆಯ ನಡುವೆಯೂ ತಣ್ಣಗಾಗುವುದು ಹಾಗಿರಲಿ, ದಿನದಿಂದ ದಿನಕ್ಕೆ ಇದು ಪಕ್ಷದ ಮುಖಂಡರ ನಡುವಿನ ಮನಸ್ತಾಪಕ್ಕೆ ವೇದಿಕೆಯಾಗುತ್ತಿದೆ.
ಭಾವೀ ಸಿಎಂ ಸಿದ್ದರಾಮಯ್ಯ ಎಂದು ಜಮೀರ್ ಅಹ್ಮದ್ ಮೂಲಕ ಹೇಳಿಸಿ, ಆ ಮೂಲಕ, ತಮ್ಮದೇ ಪಕ್ಷದ ಇತರ ಮುಖಂಡರ ನಾಡಿಮಿಡಿತ ಅರಿಯುವ ಕೆಲಸವನ್ನು ವಿರೋಧ ಪಕ್ಷದ ನಾಯಕರು ಮಾಡುತ್ತಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ. ಇವೆಲ್ಲದರ ನಡುವೆ, ಸಿಎಂ ಹುದ್ದೆಗೆ ಇನ್ನೋರ್ವ ಉತ್ತರ ಕರ್ನಾಟಕದ ಪ್ರಭಾವೀ ನಾಯಕರ ಹೆಸರು ಸೇರ್ಪಡೆಯಾಗಿದೆ.

ಸಿಎಂ ರೇಸಿನಲ್ಲಿ ನಾನು ಇಲ್ಲ ಎಂದು ಹೇಳಿದ್ದು ಯಾರು, ಡಾ.ಪರಮೇಶ್ವರ್
ಈಗಾಗಲೇ, ದಲಿತ ಸಿಎಂ ಎನ್ನುವ ವಿಚಾರ ಭಾರೀ ಚರ್ಚೆಯಲ್ಲಿದೆ. ಡಾ.ಪರಮೇಶ್ವರ್ ಅವರು "ಸಿಎಂ ರೇಸಿನಲ್ಲಿ ನಾನು ಇಲ್ಲ ಎಂದು ಹೇಳಿದ್ದು ಯಾರು. ಆದರೆ ಅದನ್ನೆಲ್ಲಾ ಚರ್ಚಿಸಲು ಇದು ಸೂಕ್ತ ವೇದಿಕೆಯಲ್ಲ. ಮುಂದಿನ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಬೇಕಿದೆ"ಎಂದು ಪರಮೇಶ್ವರ್ ಹೇಳುವ ಮೂಲಕ, ತಮ್ಮ ಆಕಾಂಕ್ಷೆಯನ್ನು ಹೊರಹಾಕಿದ್ದರು.

ಎಂ.ಬಿ.ಪಾಟೀಲ್ ಕೂಡಾ ಈ ವಿಚಾರದ ಬಗ್ಗೆ ಸುತ್ತೂರು ಮಠದಲ್ಲಿ ಪ್ರಸ್ತಾಪ
ಇದಾಗಿ ಎರಡು ದಿನಗಳ ಕೆಳಗೆ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಕೂಡಾ ಈ ವಿಚಾರದ ಬಗ್ಗೆ ಸುತ್ತೂರು ಮಠದಲ್ಲಿ ಪ್ರಸ್ತಾವಿಸಿದ್ದರು. "ಮುಖ್ಯಮಂತ್ರಿ ಹುದ್ದೆಗೆ ಅರ್ಹರಾದ ಮುಖಂಡರು ಲಿಂಗಾಯತ ಸಮುದಾಯದಲ್ಲೂ ಇದ್ದಾರೆ"ಎಂದು ಹೇಳಿದ್ದರು. ಕಾಂಗ್ರೆಸ್ಸಿನಲ್ಲಿ ಆ ಸಮುದಾಯದ ಪ್ರಮುಖ ನಾಯಕರಲ್ಲಿ ಎಂ.ಬಿ.ಪಾಟೀಲ್ ಮಂಚೂಣಿಯಲ್ಲಿದ್ದಾರೆ. ಈಗ, ಆ ಪಟ್ಟಿಗೆ ಇನ್ನೋರ್ವ ನಾಯಕರ ಹೆಸರು ಸೇರ್ಪಡೆಯಾಗಿದೆ.

ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಹೆಸರು ಕೂಡಾ ಈಗ ಕೇಳಿಬರುತ್ತಿದೆ
ಈಗ, ಗದಗ ಕ್ಷೇತ್ರದ ಶಾಸಕ, ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಹೆಸರು ಕೂಡಾ ಈಗ ಕೇಳಿಬರುತ್ತಿದೆ. ಮುಂದಿನ ಮುಖ್ಯಮಂತ್ರಿ ಎಚ್.ಕೆ.ಪಾಟೀಲ್ ಯಾಕಾಗಬಾರದು ಎನ್ನುವ ಚರ್ಚೆ ಸಾಮಾಜಿಕ ತಾಣದಲ್ಲಿ ಜೋರಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ಸಿನಿಂದ ಅವರೇ ಸೂಕ್ತ ಅಭ್ಯರ್ಥಿ ಎನ್ನುವ ವಿಚಾರ ಜಾಲತಾಣದಲ್ಲಿ ಹರಿದಾಡುತ್ತಿದೆ.
Recommended Video

ಬಂಗಾರಪ್ಪನವರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ರಾಜೀವ್ ಗಾಂಧಿ ಕೇಳಿದಾಗ
ಈ ಹಿಂದೆ ಕೂಡಾ ಕರ್ನಾಟಕ ರಾಜಕೀಯದಲ್ಲಿ ಎಚ್.ಕೆ.ಪಾಟೀಲ್ ಅವರ ತಂದೆಯ ಹೆಸರು ಮಂಚೂಣಿಯಲ್ಲಿತ್ತು. ಆದರೆ, ಬಂಗಾರಪ್ಪನವರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೇಳಿದಾಗ, ಮರುಕ್ಷಣವೇ ಅವರು ಸಿಎಂ ರೇಸಿನಿಂದ ಹಿಂದಕ್ಕೆ ಸರಿದಿದ್ದರು. ಈ ಬಾರಿ, ಎಚ್.ಕೆ.ಪಾಟೀಲ್ ಅವರಿಗೇ ಸಿಎಂ ಸ್ಥಾನ ನೀಡಬೇಕು ಎನ್ನುವ ಒತ್ತಾಯ ಅವರ ಅಭಿಮಾನಿಗಳಿಂದ ಜೋರಾಗಿ ಕೇಳಿಬರುತ್ತಿದೆ.
-
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications