ಇ.ಡಿ ಒಂದು ಸಂಘಟನೆಯ ಕಂಟ್ರೋಲ್‌ನಲ್ಲಿದೆ: ಕಾಂಗ್ರೆಸ್ ನಾಯಕ ಗಂಭೀರ ಆರೋಪ
ಮುಡಾ ಕೇಸ್ ವಿಚಾರವಾಗಿ ಜಾರಿ ನಿರ್ದೇಶನಾಲಯದ ( ಇಡಿ) ಅಧಿಕಾರಿಗಳು ಇತ್ತೀಚೆಗೆ ಮುಡಾ ಕಚೇರಿ ಹಾಗೂ ಈ ಪ್ರಕರಣ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ, ದಾಖಲೆ ಪರಿಶೀಲನೆ ನಡೆಸಿದ್ದರು. ಈ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ಜಾರಿ ನಿರ್ದೇಶನಾಲಯವು ಒಂದು ಸಂಘಟನೆಯ ಹಿಡಿತದಲ್ಲಿದೆ. ಅದನ್ನು ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದು ಶಾಕಿಂಗ್ ವಿಚಾರವೊಂದನ್ನು ಹೇಳಿದ್ದಾರೆ. ದಾಳಿ ನಂತರ ಮುಡಾದಿಂದ ಇಡಿ ಅಧಿಕಾರಿಗಳು ದಾಖಲೆಗಳನ್ನು ತೆಗೆದುಕೊಂಡ ವಿಚಾರವಾಗಿ ವ್ಯಂಗ್ಯ ಕೂಡ ಮಾಡಿದ್ದಾರೆ. ಇಡಿ ಅಧಿಕಾರಿಗಳು ಬಹುಶಃ ನ್ಯೂಸ್ ಪೇಪರ್ ತಗೊಂಡು ಹೋಗಿರ್ತಾರೆ. ಮುಡಾ ಕೇಸ್‌ಗೆ ಸಂಬಂಧಿಸಿದ ದಾಖಲೆಗಳು ಎರಡು ಬ್ಯಾಗ್‌ನಷ್ಟು ಇರೋದಿಲ್ಲ ಎಂದಿದ್ದಾರೆ.

ಮುಡಾ ವಿಚಾರ ರಾಜಕೀಯವಾಗಿ ಹೆಚ್ಚು ಗಮನ ಸೆಳೆದಿರುವುದರಿಂದ ಅದರ ಲಾಭವನ್ನು ಪಡೆಯಲು ಇಡಿ ಅಧಿಕಾರಿಗಳು ಎರಡು ಬ್ಯಾಗ್ ಪ್ರದರ್ಶನ ಮಾಡಿರುತ್ತಾರೆ. ಬಿಜೆಪಿಯವರು ವಿವಿಧ ಕೇಸ್‌ಗಳಲ್ಲಿ ದೋಚಿದಂತೆ ತೋರಿಕೆಗಾಗಿ ಆ ಬ್ಯಾಗ್‌ಗಳನ್ನು ಪ್ರದರ್ಶನ ಮಾಡಿದ್ದಾರೆ ಅನಿಸುತ್ತೆ. ಆ ಜಾರಿ ನಿರ್ದೇಶನಾಲಯವು ಒಂದು ಸಂಘಟನೆಯ ನಿಯಂತ್ರಣದಲ್ಲಿದ್ದು, ಅದನ್ನು ಸಮಯ ಬಂದಾಗ ಹೇಳುತ್ತೇನೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸೈಟು ಹಂಚಿಕೆ ವಿಚಾರವು ಇಂದಿನದ್ದಲ್ಲ, ಇದು ಸುಮಾರು 25 ವರ್ಷಗಳಷ್ಟು ಹಳೆದ ಕೇಸ್. ಇದನ್ನು ಬಿಜೆಪಿಯವರು ಮುಡಾ ಮೂಲಕವೇ ರಾಜಕೀಯ ದ್ವೇಷಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಇನ್ನು ಬಿಜೆಪಿಯವರ ವಿಚಾರಕ್ಕೆ ಬಂದರೆ ಚುನಾವಣಾ ಬಾಂಡ್, ಪಿಎಂ ಕೇರ್, ನೋಟ್ ಬ್ಯಾನ್ ಹಗರಣಗಳು ನಡೆದಿವೆ. ಹಾಗಾಗಿ ಮುಂದಿನ ಎಲೆಕ್ಷನ್‌ನಲ್ಲಿ ಬಿಜೆಪಿಯವರು ಮೊದಲು ತಮ್ಮ ಪಕ್ಷದ ಹೆಸರು ಬದಲಾಯಿಸಿಕೊಳ್ಳಲಿ. ಭಾರತೀಯ ಜನತಾ ಪಾರ್ಟಿ ಬದಲಿಗೆ ಭ್ರಷ್ಟಾಚಾರ ಜನತಾ ಪಾರ್ಟಿ ಎಂದು ಹೆಸರು ಬದಲಿಸಿಕೊಳ್ಳಲಿ ಎಂದು ಬಿಕೆ ಹರಿಪ್ರಸಾದ್ ಸಲಹೆ ಕೊಟ್ಟಿದ್ದಾರೆ.
ಕುಮಾರಸ್ವಾಮಿ ಮಾತಿಗೆ ಕೌಂಟರ್: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಈ ಕಾಂಗ್ರೆಸ್ ಸರ್ಕಾರ ಐದು ವರ್ಷ ಇರೋದಿಲ್ಲ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿ.ಕೆ.ಹರಿಪ್ರಸಾದ್, ಕುಮಾರಸ್ವಾಮಿ ಅವರು ಬಿಲ್ಲ ರಂಗನ ಜೊತೆ ಸೇರಿದ್ದಾರೆ ಎಂದು ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಕುಟುಕಿದ್ದಾರೆ.

ಬಿಜೆಪಿ ಪಕ್ಷದ ಜೊತೆಗೆ ಜೆಡಿಎಸ್ ಪಕ್ಷ ಸೇರಿಕೊಂಡಿದೆ. ಹಾಗಾಗಿ ಈಗ ಕಮಲದ ಬದಲಿಗೆ ಬೇರೆ ಹೆಸರಿನಲ್ಲಿ ಆಪರೇಷನ್ ಮಾಡುತ್ತಾರ? ಎಂದು ಕಾದು ನೋಡಬೇಕು. ಕುಮಾರಸ್ವಾಮಿ ಹೇಳಿದಂತೆ ನಮ್ಮ ಕಾಂಗ್ರೆಸ್ ಪಕ್ಷ ಅಷ್ಟೊಂದು ವೀಕ್ ಆಗಿಲ್ಲ. ಹಾಗಾಗಿ ಬಿಜೆಪಿ-ಜೆಡಿಎಸ್ ಪಕ್ಷದವರು ಹಗಲುಗನಸು ಕಾಣೋದ್ರಲ್ಲಿ ತಪ್ಪಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಶೀಘ್ರವೇ ಪತನವಾಗಲಿದೆ. 2028ರೊಳಗೆ ನಾನೇ ಕರ್ನಾಟಕದ ಮುಖ್ಯಮಂತ್ರಿ ಆಗುತ್ತೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ. ಇದರ ಅರ್ಥ ನಾವೇ ಸರ್ಕಾರವನ್ನು ಬೀಳಿಸುತ್ತೇವೆ ಎಂದಲ್ಲ. ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕರೇ ತಮ್ಮ ಪಕ್ಷ ಬೀಳಿಸಲಿದ್ದಾರೆ. ಆಗ ನಾನು ಸಿಎಂ ಆಗುತ್ತೇನೆ ಎಂದು ಕುಮಾರಸ್ವಾಮಿ ಇಂಗಿತ ವ್ಯಕ್ತಪಡಿಸಿದ್ದಾರೆ.












Click it and Unblock the Notifications