ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವರ ವಿರುದ್ಧ ಸಿದ್ದರಾಮಯ್ಯಗೆ ಶಾಸಕರ ದೂರು

|
Google Oneindia Kannada News

ಬೆಂಗಳೂರು, ಜ.24 : ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದ ಸದಸ್ಯರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಶಾಸಕರು ದೂರುವುದು ಹೊಸದೇನಲ್ಲ. ಸದ್ಯ, ಮೂವರು ಸಚಿವರ ವಿರುದ್ಧ ಶಾಸಕರು ತಿರುಗಿ ಬಿದ್ದಿದ್ದು, ಅವರನ್ನು ಬದಲಾವಣೆ ಮಾಡಿ, ಇಲ್ಲವೇ ಬುದ್ಧಿಹೇಳಿ ಎಂದು ಸಿಎಂಗೆ ಶಾಸಕಸರು ಒತ್ತಾಯಿಸಿದ್ದಾರೆ.

ಗುರುವಾರ ವಿಧಾನಸಭೆ ಕಲಾಪಕ್ಕೂ ಮೊದಲು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಖಮರುಲ್ ಇಸ್ಲಾಂ ಮತ್ತು ಪ್ರಕಾಶ್ ಹುಕ್ಕೇರಿ ವಿರುದ್ಧ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಚಿವರು ತಮಗೆ ಬೇಕಾದರಿಗೆ ಮಾತ್ರ ಶೀಘ್ರ ಕೆಲಸ ಮಾಡಿಕೊಡುವ ಮೂಲಕ ಸಜ್ಜನ ಪಕ್ಷಕಾತ ಮಾಡುತ್ತಿದ್ದಾರೆ ಎಂದು ಶಾಸಕರು ಸಿಎಂಗೆ ದೂರು ಹೇಳಿದರು.

Siddaramaiah

ಶಾಸಸಕರ ದೂರಿನಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಶಾಸಕರ ಬೇಡಿಕೆಗಳಿಗೆ ಬೆಲೆ ನೀಡುವಂತೆ ಹಾಗೂ ಸ್ವಜನ ಪಕ್ಷಪಾತ ನಡೆಸದಂತೆ ಸಚಿವರಿಗೆ ತಾಕೀತು ಮಾಡಿದರು. ಆದರೆ, ಇದಕ್ಕೆ ಸಮಾಧಾನಗೊಳ್ಳದ ಶಾಸಕ ಎ.ಎಸ್‌.ಪಾಟೀಲ್‌ ನಡಹಳ್ಳಿ ಬಿಜಾಪುರ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಅವರನ್ನು ಬದಲಾವಣೆ ಮಾಡಿ ಎಂದು ಪಟ್ಟು ಹಿಡಿದರು. [ಸಚಿವರಿಗೆ ಸಿಎಂ ಕ್ಲಾಸ್]

ಉಸ್ತುವಾರಿ ಸಚಿವರ ಧೋರಣೆಯಿಂದಾಗಿ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಸಮಸ್ಯೆ ಬಗೆಹರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಇದರ ಪರಿಣಾಮ ಲೋಕಸಭೆ ಚುನಾವಣೆ ಮೇಲೆ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಡಹಳ್ಳಿ ಅವರನ್ನು ಸಮಾಧಾನ ಸಿಎಂ ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದರು.

ಅಧಿಕಾರಿ ವಿರುದ್ಧ ಅಸಮಾಧಾನ : ಐಎಎಸ್‌ ಅಧಿಕಾರಿ ಶ್ರೀವತ್ಸ ಕೃಷ್ಣ ಅವರು ಆಮ್ ಅದ್ಮಿ ಪಕ್ಷವನ್ನು ಬೆಂಬಲಿಸಿ ಪತ್ರಿಕೆಯಲ್ಲಿ ಅಂಕಣ ಬರೆದ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆಯಿತು. ಶಾಸಕ ಪ್ರಿಯಾಂಕ ಖರ್ಗೆ, ಐಟಿ-ಬಿಟಿ ಕಾರ್ಯದರ್ಶಿಯಾಗಿರುವ ಶ್ರೀವತ್ಸ ಅವರು ಈ ಅಂಕಣದಲ್ಲಿ ಆಮ್‌ ಆದ್ಮಿ ಪಕ್ಷದ ಗೆಲುವನ್ನು ಹೊಗಳಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಿದ್ದಾರೆ ಎಂದರು.

ಬಹುತೇಕ ಶಾಸಕರು ಶ್ರೀವತ್ಸ ಕೃಷ್ಣ ಅವರ ವರ್ತನೆಯನ್ನು ಖಂಡಿಸಿದರು. ಶಾಸಕರಿಗೆ ಉತ್ತರ ನೀಡಿದ ಸಿಎಂ ಈ ಅಂಕಣದ ಬಗ್ಗೆ ಅಧಿಕಾರಿಯಿಂದ ವಿವರಣೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕರಿಗೆ ಭರವಸೆ ನೀಡಿದರು.

ಮನೆ ಹಂಚಿಕೆ ಅಧಿಕಾರ ನೀಡಿ : ಶಾಸಕ ಮನೋಹರ ತಹಶೀಲ್ದಾರ್‌, ಆಶ್ರಯ ಮನೆ ಹಂಚಿಕೆ ವಿಚಾರದಲ್ಲಿ ಶಾಸಕರ ಹಕ್ಕು ಮೊಟಕುಗೊಂಡಿದೆ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಈ ಹಿಂದಿನಂತೆಯೇ ಶಾಸಕರ ಅಧ್ಯಕ್ಷತೆಯ ಸಮಿತಿಗೆ ಆಶ್ರಯ ಮನೆ ಹಂಚಿಕೆ ಹಕ್ಕು ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸಿಎಂ, ಬೇಲೂರು ಘೋಷಣೆ ಹಿನ್ನೆಲೆಯಲ್ಲಿ ಆಶ್ರಯ ಮನೆ ಹಂಚಿಕೆ ಹೊಣೆ ಗ್ರಾಮ ಪಂಚಾಯ್ತಿಗಳಿಗೆ ನೀಡಲಾಗಿದೆ. ಇದರಲ್ಲಿ ಬದಲಾವಣೆ ಮಾಡುವುದು ಸಾಧ್ಯವಿಲ್ಲ ಎಂದರು.

English summary
The ruling party legislators are learnt to have again complained to Chief Minister Siddaramaiah against some of his ministerial colleagues for their lax attitude in responding to people's problems. At the Congress Legislature Party (CLP) meeting on Thursday, several MLAs took serious exception to the way ministers have been functioning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X