ರಾಜೀನಾಮೆ ಕೊಟ್ಟ ರೆಬಲ್ ಶಾಸಕರಿಗೆ ಪಕ್ಷದಿಂದಲೂ ಶಾಕ್?

ಬೆಂಗಳೂರು, ಜುಲೈ 23 : "ಕಾಂಗ್ರೆಸ್ ಪಕ್ಷದಿಂದ ಗೆದ್ದು ಈಗ ಸರ್ಕಾರವನ್ನು ಉರುಳಿಸುವ ಹಂತಕ್ಕೆ ಹೋಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇಂತಹ ಶಾಸಕರಿಗೆ ತಕ್ಕ ಪಾಠವಾಗಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಮಂಗಳವಾರ ಸ್ಪೀಕರ್ ರಮೇಶ್ ಕುಮಾರ್ ಕಚೇರಿ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅತೃಪ್ತ ಶಾಸಕರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಸುಳಿವು ನೀಡಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಲ್ಲಾ 13 ಶಾಸಕರು ಮುಂಬೈನಲ್ಲಿದ್ದಾರೆ.

ಚರ್ಚೆ,ಸಿಟ್ಟು,ಇವತ್ತೇ ಕಡೆ, ಎಲ್ಲವೂ ಮುಗಿಯುತ್ತದೆ: ರಮೇಶ್ ಕುಮಾರ್

ಮಾಧ್ಯಮಗಳ ಜೊತೆ ಮಾತನಾಡಿದ ದಿನೇಶ್ ಗುಂಡೂರಾವ್, "ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಪಕ್ಷದಿಂದಲೂ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಪಕ್ಷದಿಂದ ದೂರ ಇಡುವ ಕೆಲಸಕ್ಕೆ ಮುಂದಾಗುತ್ತೇವೆ, ಮತ್ತೊಮ್ಮೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ" ಎಂದು ಸ್ಪಷ್ಟಪಡಿಸಿದರು.

"ಶಾಸಕರು ನಮ್ಮ ಪಕ್ಷದ ಕಾರ್ಯಕರ್ತರು, ಬಾವುಟದಿಂದ ಗೆದ್ದಿದ್ದಾರೆ. ಈಗ ಸರ್ಕಾರವನ್ನು ಉರುಳಿಸುವ ಹಂತಕ್ಕೆ ಹೋಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಇಂತಹ ಶಾಸಕರಿಗೆ ತಕ್ಕ ಪಾಠವಾಗಬೇಕು" ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಹೈಕಮಾಂಡ್‌ ನಮಗೆ ಸ್ವಾತಂತ್ರ್ಯ ನೀಡಿದೆ

ಹೈಕಮಾಂಡ್‌ ನಮಗೆ ಸ್ವಾತಂತ್ರ್ಯ ನೀಡಿದೆ

ಮಾಧ್ಯಮಗಳ ಜೊತೆ ಮಾತನಾಡಿದ ದಿನೇಶ್ ಗುಂಡೂರಾವ್, "ಕಾಂಗ್ರೆಸ್ ಪಕ್ಷದಿಂದ 13 ಶಾಸಕರ ಮೇಲೂ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಈ ವಿಚಾರದಲ್ಲಿ ಹೈಕಮಾಂಡ್ ನಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಲು ನಾವು ಸಿದ್ಧ" ಎಂದು ಹೇಳಿದರು.

ವಿಪ್ ಅನ್ವಯವಾಗುವುದಿಲ್ಲ

ವಿಪ್ ಅನ್ವಯವಾಗುವುದಿಲ್ಲ

ಮಂಗಳವಾರದ ಕಲಾಪದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಬಿ. ಎಸ್. ಯಡಿಯೂರಪ್ಪ, "15 ಅತೃಪ್ತರಿಗೆ ವಿಪ್ ಅನ್ವಯವಾಗಲ್ಲ. ಸುಪ್ರೀಂಕೋರ್ಟ್ ಅವರಿಗೆ ವಿನಾಯಿತಿ ನೀಡಿದೆ. ಸ್ಪೀಕರ್ ರೂಲಿಂಗ್ ನೀಡಿದರೂ ಅನ್ವಯವಾಗುವುದಿಲ್ಲ. ಸದನಕ್ಕೆ ಹಾಜರಾಗಲು ಈಗಲೂ ವಿನಾಯಿತಿ ನೀಡಲಾಗಿದೆ" ಎಂದು ಹೇಳಿದರು.

ಶಾಸಕರಿಗೆ ಬೆದರಿಕೆ ಹಾಕುತ್ತಿದ್ದಾರೆ

ಶಾಸಕರಿಗೆ ಬೆದರಿಕೆ ಹಾಕುತ್ತಿದ್ದಾರೆ

ಮಂಗಳವಾರದ ಕಲಾಪದಲ್ಲಿ ಮಾತನಾಡಿದ ಕಾಂಗ್ರೆಸ್ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, "ಅತೃಪ್ತ ಶಾಸಕರು ಎಲ್ಲಿದ್ದಾರೆ ಗೊತ್ತಿಲ್ಲ. ಅವರಿಗೆ ಬೆದರಿಕೆ ಹಾಕಲಾಗುತ್ತಿದೆ, ಅವರ ದಾರಿ ತಪ್ಪಿಸುತ್ತಿರುವುದು ಡಿ. ಕೆ. ಶಿವಕುಮಾರ್ ಅಲ್ಲ, ಬಿಜೆಪಿಯವರು. ಅನ್ಯಾಯವಾಗಿ ಅವರು ತೋಡಿದ ಹಳ್ಳಕ್ಕೆ ಬಿದ್ದಿದ್ದೀರಿ. ನಿಮ್ಮ ರಾಜಕೀಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದೀರಿ" ಎಂದರು.

ಅತೃಪ್ತರಲ್ಲ ಸಂತೃಪ್ತರು

ಅತೃಪ್ತರಲ್ಲ ಸಂತೃಪ್ತರು

ಮಂಗಳವಾರದ ಕಲಾಪದಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್, "ಮುಬೈಂನಲ್ಲಿರುವ ನನ್ನ ಗೆಳೆಯರು ಅತೃಪ್ತರಲ್ಲ. ಅವರು ತೃಪ್ತರು, ಸಂತೃಪ್ತರು. ಮುಂಬೈ ಆತಿಥ್ಯಕ್ಕೆ ಬಹಳ ಹೆಸರುವಾಸಿ. ಆದರೆ, ನಮಗೆ ಕಹಿ ಅನುಭವವಾಯ್ತು" ಎಂದು ಬೇಸರ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+