Operation Hasta ; ಕಾಂಗ್ರೆಸ್ ನಿಂದ ಸಂಪರ್ಕ: ಗುಟ್ಟುಬಿಟ್ಟು ಕೊಟ್ಟ ಎಸ್‌ ಟಿ ಸೋಮಶೇಖರ್‌

ಬೆಂಗಳೂರು, ಆಗಸ್ಟ್‌ 21: ರಾಜ್ಯ ರಾಜಕಾರಣದಲ್ಲಿ ಆಪರೇಷನ್‌ ಹಸ್ತದ ಸುದ್ದು ಜೋರಾಗಿದ್ದು, ಕಾಂಗ್ರೆಸ್‌ ನಿಂದ ಬಿಜೆಪಿಗೆ ಹೋಗಿದ್ದ ನಾಯಕರನ್ನ ಆಪರೇಷನ್‌ ಹಸ್ತದ ಮೂಲಕ ಕಾಂಗ್ರೆಸ್‌ ಗಾಳ ಹಾಕಿದ್ದು, ಕಾಂಗ್ರೆಸ್‌ ನಾಯಕರು ಸಂಪರ್ಕಿಸಿರುವ ಕುರಿತು ಮಾಜಿ ಸಚಿವ ಎಸ್‌ ಟಿ ಸೋಮಶೇಖರ್‌ ಗುಟ್ಟು ಬಿಟ್ಟು ಕೊಟ್ಟಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ನಾನು 20 ವರ್ಷ ಕಾಂಗ್ರೆಸ್‌‌ನಲ್ಲಿದ್ದವನು, ಹೀಗಾಗಿ ನನಗೆ ಈಗಲೂ ಕರೆಯುತ್ತಾರೆ. ಹಿಂದೆಯೂ ಕರೆಯುತ್ತಿದ್ದರು ನಾನು ಪ್ರಭಲ ನಾಯಕ ಅಲ್ಲ. ನಾನು ಯಶವಂತಪುರ ಕ್ಷೇತ್ರಕ್ಕೆ ಮಾತ್ರ ಸೀಮಿತ. ಯಶವಂತಪುರ ಹೊರತುಪಡಿಸಿ ಯಾವ ನಾಯಕ ಅಲ್ಲ, ಸಮುದಾಯದ ಪ್ರಭಲ ನಾಯಕನೂ ಅಲ್ಲ.ಸಂಪರ್ಕ ಮಾಡ್ತಾರೆ ಅಂದ್ರೆ ನಾನೂ ಕಾಂಗ್ರೆಸ್‌ನಲ್ಲಿ 20 ವರ್ಷ ಇದ್ದೆ, ಹಾಗಾಗಿ ನನ್ನ ಸಂಪರ್ಕ ಮಾಡಿದ್ದಾರೆ ಎಂದು ಹೇಳಿದ್ದಾರೆ.

Congress Leaders Have Contacted Me Said ST Somashekar

ಕಳೆದ ಬಾರಿ ಚುನಾವಣೆ ಮೊದಲು ಸಂಪರ್ಕ ಮಾಡಿದ್ರು. ನಾನು ಕಾಂಗ್ರೆಸ್‌ಗೆ ಹೋದೆನಾ.? ನಾನು ಹೋದೆನಾ, ಹೋಗಲಿಲ್ಲ ಇಲ್ಲೇ ಇದ್ದೆ. ಆದ್ರೂ ನಾನು ಹೋಗುತ್ತೇನೆ ಎಂದು ಕ್ರಿಯೇಟ್ ಮಾಡ್ತಾರೆ.
ಸೋಮಶೇಖರ್ ಹೋಗ್ತಾನೆ, ಈ ವಾರದಲ್ಲಿ ಹೋಗ್ತಾನೆ ಅಂತ ಮಾಡಿದ್ರು. ಬೈರತಿ ಬಸವರಾಜ್ ಕೂಡ ಊರಲ್ಲಿ ಇರಲಿಲ್ಲ. ಯಡಿಯೂರಪ್ಪ ಅವರು ಕೂಡ ಕೇಳಿದ್ರು. ಅವರನ್ನ ನಾನು ಭೇಟಿಯಾಗುತ್ತೇನೆ ಎಂದು ಹೇಳಿದರು.

ಎಸ್.ಟಿ ಸೋಮಶೇಖರ್ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರುವ ವಿಚಾರವಾಗಿ ಮಾತನಾಡಿ, ಯಾರು ಟಿಕೆಟ್ ಆಕಾಂಕ್ಷಿಗಳಿಗೆ ಅನುಮಾನ ಇದೆ. ನಮಗೆ ಟಿಕೆಟ್ ಕೊಡ್ತಾರೋ ಇಲ್ಲವೋ, ಡಿ ಲಿಮಿಟೇಷನ್ ಮಾಡ್ತಾರೋ ಇಲ್ಲವೋ ಅನ್ನೋದು. ಈಗಾಗಲೇ ಕೆಲವರ ಜೊತೆ ಮಾತಾಡಿದ್ದೇನೆ. ಯಾರು ಹೋಗ್ತಾರೆ ಅವರೆಲ್ಲರಿಗೂ ಮಾತಾಡಿದ್ದೇನೆ ಎಂದರು.

ಒಂದೊಂದು ಕಾರ್ಪೋರೇಷನ್‌‌ ವಾರ್ಡ್‌ಗೆ ಹತ್ತಾರು ಜನ ಆಕಾಂಕ್ಷಿಗಳಿದ್ದಾರೆ. ಅವರಲ್ಲಿ ಕೆಲವರು ಟಿಕೆಟ್‌ ಕೈತಪ್ಪುತ್ತೆ ಅಂತಾನೋ ಅಥವಾ ವಾರ್ಡ್ ಮೀಸಲಾತಿ ಬದಲಾಗುತ್ತೆ ಅಂತಾನೋ ಹೋಗ್ತಿದ್ದಾರೆ. ಇದರಿಂದ ಸಂಘಟನೆಗೆ ಏನು ಹಿನ್ನಡೆಯಾಗಲ್ಲ ಎಂದರು.

Congress Leaders Have Contacted Me Said ST Somashekar

ಯಡಿಯೂರಪ್ಪ ಸಭೆಗೆ ಗೈರಾದ ವಿಚಾರವಾಗಿ ಮಾತನಾಡಿ, ಯಡಿಯೂರಪ್ಪ ಅವರು ನನ್ನ ಜೊತೆ ಮಾತನಾಡಿದ್ರು. ನನಗೆ ತಡವಾಗಿ ಮೆಸೇಜ್ ಸಿಕ್ಕಿದೆ ಅಂತ ಹೇಳಿದೆ, ಯಡಿಯೂರಪ್ಪ ಅವರು ನಮ್ಮ ನಾಯಕರು. ನನ್ನನ್ನ ಬಿಜೆಪಿಗೆ ಕರೆತಂದವರು ಅವರೇ. ಸಹಕಾರ ಸಚಿವರನ್ನಾಗಿ ಮಾಡಿ, ಮೈಸೂರು ಉಸ್ತುವಾರಿ ಕೂಡ ನೀಡಿದ್ರು. ಯಡಿಯೂರಪ್ಪ ಅವರನ್ನು ಹೊರತಾಗಿ ನಾನು ಏನೂ ಮಾಡಲ್ಲ. ಬಾ ಮನೆಗೆ ಅಂತ ಕರೆದಿದ್ದಾರೆ, ಹೋಗಿ ಭೇಟಿಯಾಗಿ ಮಾತಾಡ್ತೇನೆ. ದುಡುಕಿ ನಿರ್ಧಾರ ಮಾಡಬೇಡ ಅಂತ ಹೇಳಿದ್ದಾರೆ ಎಂದು ತಿಳಿಸಿದರು.

ನಿಮ್ಮ ಅವಧಿಯಲ್ಲೇ ಬಿಬಿಎಂಪಿ ಚುನಾವಣೆ ಮಾಡಬಹುದಿತ್ತು ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿಬಿಎಂಪಿ ಸಮಸ್ಯೆ ಇತ್ತು.ಡಿ ಲಿಮಿಟೇಷನ್ ಸಮಸ್ಯೆ ಇತ್ತು, ವಾರ್ಡ್ ವಿಂಗಡಣೆ ಆಗಿತ್ತು. ಮೀಸಲಾತಿ ಸಮಸ್ಯೆ ಆಗಿ ಸುಪ್ರೀಂ ಕೋರ್ಟ್ ಹೋಗಲಾಗಿತ್ತು. ಬಿಜೆಪಿ ಸರ್ಕಾರ ಚುನಾವಣೆ ಮಾಡಲು ರೆಡಿ ಇತ್ತು. ಕಾಂಗ್ರೆಸ್ ಹೇಳಿದ ಮೇಲೆ ಎಲ್ಲಾ ಚಟುವಟಿಕೆ ಕ್ಯಾಚ್ ಮಾಡುವ ಪ್ರಯತ್ನ ಮಾಡಿದೆ ಎಂದರು.

ತಮ್ಮ ಕ್ಷೇತ್ರಕ್ಕೆ 7.64 ಕೋಟಿ ಅನುದಾನ ಬಿಡುಗಡೆ ವಿಚಾರವಾಗಿ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಸಮಸ್ಯೆ ಆಗಿತ್ತು. ಒಂದೇ ಒಂದು ಬೋರ್ವೆಲ್ ಕೊರೆಸಲು ಆಗಿರಲಿಲ್ಲ, ಕುಡಿಯುವ ನೀರು ಆಗಿರಲಿಲ್ಲ. ಧರಣಿ ಕೂರೋದಾಗಿ ಹೇಳಿದ್ದೆ. ಈ ಸಂಬಂಧ ಬಿಬಿಎಂಪಿ ಕಮೀಷನರ್ ಹಾಗೂ ರಾಕೇಶ್ ಸಿಂಗ್ ಅವರಿಗೂ ಮಾತಾಡಿದ್ದೇನೆ. ಈ ಬಗ್ಗೆ ಡಿ ಕೆ ಶಿವಕುಮಾರ್‌ ಬಳಿಯೂ ಮಾತಾಡಿದ್ದೆ.
ಕೆಂಪೇಗೌಡ ಬಡಾವಣೆ ವೀಕ್ಷಣೆಗೆ ಬಂದಿದ್ರು. ಆಗ ವಾಸ್ತವ ಸ್ಥಿತಿ ಹೇಳಿದ್ದೆ.ಡೆವಲಪ್ಮೆಂಟ್ ಹಣ ಸ್ಟಾಪ್ ಮಾಡಿ, ಕುಡಿಯುವ ನೀರು ಸ್ಟಾಪ್ ಮಾಡಬೇಡಿ ಅಂತ. ಆಗ ಅಧಿಕಾರಿಗಳಿಗೆ ಕೇಳಿದವರಿಗೆ ಹಣ ಬಿಡುಗಡೆ ಮಾಡುವಂತೆ ಹೇಳಿದರು ಎಂದರು.

ತಮ್ಮ ವಿರೋಧಿಗಳ ವಿರುದ್ಧ ಶಿಸ್ತು ಕ್ರಮದ ವಿಚಾರವಾಗಿ ಮಾತನಾಡಿ, ಯಾರನ್ನೂ ಸಸ್ಪೆಂಡ್ ಮಾಡಿ, ತೊಂದರೆ ಮಾಡಿ ಅನ್ನೋದು ನಾನು ಹೇಳಿಲ್ಲ. ನೆಮ್ಮದಿಯಾಗಿ ಕೆಲಸ ಮಾಡಲು ಅವಕಾಶ ನೀಡಿ ಅನ್ನೋದು ನನ್ನ ಚಿಂತನೆ. ಇಬ್ಬರನ್ನ ಸಸ್ಪೆಂಡ್ ಮಾಡಿದಾಕ್ಷಣಕ್ಕೆ ಒಳ ಹೊರಗೂ ಇರತಕ್ಕಂತದ್ದು ಬದಲಾಗಲ್ಲ. ಬಿಜೆಪಿಯವರು ಎಲ್ಲಾ ವಾಟ್ಸಾಪ್ ಗ್ರೂಪಲ್ಲಿ ವೀಡಿಯೋ ಹಾಕ್ತಿದ್ದಾರೆ.
ಈಶ್ವರಪ್ಪ ಹೇಳಿರುವಂತೆ ವಲಸೆ ಆಗಿರೋರು ಬರೋರು ಬರ್ತಾರೆ, ಹೋಗೋರು ಹೋಗ್ತಾರೆ ಅಂತ. ಅಂತ ಹೇಳಿಕೆಗಳನ್ನ ಅವೈಡ್ ಮಾಡಿ ಅನ್ನೋದು ನನ್ನ ಚಿಂತನೆ.

ಚುನಾವಣೆಗೆ ಮೊದಲು ಸೋಮಶೇಖರ್ ಈಗ ಹೋಗ್ತಾನೆ ಅಂತೆಲ್ಲಾ ಹೇಳಿದ್ರು. ಬಿಜೆಪಿ ಬಿಡಲ್ಲ, ಕಾಂಗ್ರೆಸ್ ಹೋಗಲ್ಲ ಅಂತ ಹೇಳಿದ್ದೆ, ಸಿದ್ದರಾಮಯ್ಯ ಜೊತೆ ಮಾತಾಡಿದ್ದೇ ತಪ್ಪಾ.? ಸಿದ್ದರಾಮಯ್ಯ ಅವರ ಜೊತೆ ರಾಜಕಾರಣ ಮಾತಾಡಿಲ್ಲ. ನಮ್ಮ ಕ್ಷೇತ್ರದ ವಿಚಾರ ಮಾತ್ರ ಮಾತಾಡಿದ್ದೇನೆ. ಅದಾದ ಮೇಲೆ ಸೋಮಶೇಖರ್ ಕಾಂಗ್ರೆಸ್ ಎಂಪಿಗೆ ಹೋಗ್ತಾನೆ, ಮಗ ಎಂಎಲ್‌ಎ ಗೆ ನಿಲ್ತಾನೆ.
ಬಿಜೆಪಿಯಲ್ಲಿ ಅಪ್ಪ ಮಗನಿಗೆ ಟಿಕೆಟ್ ಕೊಡಲ್ಲ ಅಂತೆಲ್ಲ ಸುದ್ದಿಯಾಗಿದೆ, ಒಳ್ಳೆಯ ವಾತಾವರಣ ಸೃಷ್ಟಿ ಮಾಡಿ ಅಂತ ಸಿ.ಟಿ ರವಿ ಅವರಿಗೆ ಹೇಳಿದ್ದೇನೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+