ಕೋಟ್ಯಧಿಪತಿಗಳು ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುತ್ತೇವೆಂಬ ಮಾತಿಗೆ ಮರುಳಾಗಬೇಡಿ: ರಮೇಶ್ ಕುಮಾರ್ ವಾಗ್ದಾಳಿ
ಅವರು ಅಧಿಕಾರಕ್ಕೆ ಬರಲ್ಲಾ, ಮತ್ತೆ ನಿಮಗೆ ಸಾಲ ಕೊಡುವವರು ಇರುವುದಿಲ್ಲ ಎಂದು ಜೆಡಿಎಸ್ ನಾಯಕರ ಹೆಸರು ಬಳಸದೇ ರಮೇಶ್ ಕುಮಾರ್ ಟಾಂಗ್ ನೀಡಿದರು.
ಕೋಲಾರ,ಫೆಬ್ರವರಿ8: ಕೋಟ್ಯಧಿಪತಿಗಳು ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುತ್ತೇವೆಂಬ ಮಾತಿಗೆ ಮರುಳಾಗಬೇಡಿ ಎಂದು ಮಾಜಿ ಸ್ವೀಕರ್ ರಮೇಶ್ ಕುಮಾರ್ ಜೆಡಿಎಸ್ ನಾಯಕರ ವಿರುದ್ದವಾಗಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಡವರ ಆರ್ಥಿಕ ಸಬಲತೆಗಾಗಿ, ಆರೋಗ್ಯದ ಹಿತದೃಷ್ಟಿಯಿಂದ ಸಾಲ ನೀಡಲಾಗಿತ್ತಿದೆ. ಶೂನ್ಯ ಬಡ್ಡಿಗೆ ಹೆಣ್ಣು ಮಕ್ಕಳಿಗೆ ಸಹಾಯವಾಗಲು ಸಾಲ ನೀಡಿದರೆ ಕೆಲವರು ಹೊಟ್ಟೆ ಕಿಚ್ಚು ಪಟ್ಟರು. ಅವರು ಅಧಿಕಾರಕ್ಕೆ ಬರಲ್ಲ ಎಂದು ಜೆಡಿಎಸ್ ನಾಯಕರ ಹೆಸರು ಬಳಸದೇ ರಮೇಶ್ ಕುಮಾರ್ ಟಾಂಗ್ ನೀಡಿದರು.
ಅವರು ಅಧಿಕಾರಕ್ಕೆ ಬರಲ್ಲಾ, ಮತ್ತೆ ನಿಮಗೆ ಸಾಲ ಕೊಡುವವರು ಇರುವುದಿಲ್ಲ. ನಮಗೆ ಆಶೀರ್ವಾದ ಮಾಡಿ ಎಂದು ಜನತೆಗೆ ಮನವಿ ಮಾಡಿದ್ದಾರೆ. ಇನ್ನೂ ಈ ಬಾರಿಯೂ ಸಹ ಕೋಲಾರ ವಿಧಾನಸಭಾ ಕ್ಷೇತ್ರ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಕೋಲಾರದಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಿಸಿಕೊಂಡಿದ್ದು, ಬಿಜೆಪಿ ಹಾಗೂ ಜೆಡಿಎಸ್ ಸಹ ತಮ್ಮದೇ ಆದ ತಂತ್ರಗಾರಿಕೆಯ ಮೂಲಕ ತಮ್ಮ ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಲು ಹಲವು ತಂತ್ರಗಾರಿಕೆಯನ್ನ ನಡೆಸಿವೆ.

ಅದು ಅಲ್ಲದೇ ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಬಂದಿರುವ ಹಾಲಿ ಕೋಲಾರ ಶಾಸಕ ಶ್ರೀನಿವಾಸ್ ಗೌಡ ಅವರು ಕ್ಷೇತ್ರ ಬಿಟ್ಟುಕೊಟ್ಟಿದ್ದು, ಜೆಡಿಎಸ್ ಮತಗಳನ್ನ ಕಳೆದುಕೊಳ್ಳದೆ ಮತ್ತೆ ಜೆಡಿಎಸ್ ಕೋಟೆಯನ್ನ ಭದ್ರಪಡಿಸಿಕೊಳ್ಳಬೇಕು ಎಂದು ಜೆಡಿಎಸ್ ನಾಯಕರು ಈಗಾಗಲೇ ಸಾಕಷ್ಟು ಸಭೆಯನ್ನ್ ನಡೆಸುವ ಮೂಲಕ ಜೆಡಿಎಸ್ ಮತಗಳು ಕೈತಪ್ಪದಂತೆ ಹಲವು ರೂಪರೇಷೆಯನ್ನ ಸಿದ್ದಪಡಿಸಿದ್ದದಾರೆ.

ಈ ಬರಿ ಸಾಕಷ್ಟು ಕುತೂಹಲ ಹುಟ್ಟುಹಾಕಿರುವಂತದ್ದು ಸಿದ್ದರಾಮಯ್ಯ ಅವರ ಕೋಲಾರ ಸ್ಪರ್ಧೆ, ಈಗಾಗಲೇ ಬಿಜೆಪಿಯೂ ಸಹ ವರ್ತೂರ್ ಪ್ರಕಾಶ್ ಅವರನ್ನ ಕಣಕಿಳಿಸುವ ಸಿದ್ದತೆಯನ್ನ ನಡೆಸಿದ್ದು, ವರ್ತೂರ್ ಪ್ರಕಾಶ್ ಹಾಗೂ ಸಿದ್ದರಾಮಯ್ಯ ನಡುವೆ ಈ ಬಾರೀ ಪೈಪೋಟಿ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.












Click it and Unblock the Notifications