ಬಸವರಾಜ ರಾಯರೆಡ್ಡಿ ಮಾನಸಿಕ ರೋಗಿ, ಅಮಾನತ್ತು ಮಾಡಿ; ಹೆಚ್ ಆರ್ ಶ್ರೀನಾಥ್ ವಾಗ್ದಾಳಿ
ಕೊಪ್ಪಳ,ಜುಲೈ 11: ಬಸವರಾಜ ರಾಯರಡ್ಡಿ ಮಾನಸಿಕ ರೋಗಿ. ಈ ಅಧಿವೇಶನ ಮುಗಿಯವವರೆಗೂ ಅವರನ್ನು ಅಮಾನತ್ತು ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಎಂಎಲ್ ಸಿ ಹೆಚ್ ಆರ್ ಶ್ರೀನಾಥ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಿನ್ನೆ ವಿಧಾನಸಭಾ ಅಧಿವೇಶನದಲ್ಲಿ ಗಂಗಾವತಿ ಶಾಸಕ ಜನಾರ್ಧನರೆಡ್ಡಿ ಆನೇಗೊಂದಿ ಭಾಗದಲ್ಲಿರುವ ಫಾರ್ಮ ಸ್ಟೈ ತೆರವುಗೊಳಿಸಬಾರದು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಚಿವ ಸುರೇಶ ಭೈರತಿ ಉತ್ತರ ನೀಡಿದರು. ಇದೇ ಸಂದರ್ಭದಲ್ಲಿ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಆನೇಗೊಂದಿ ಭಾಗವು ಡ್ರಗ್ ಮಾಫಿಯಾ ಎಂದು ಆರೋಪಿಸಿದರು. ಆರೋಪದಿಂದಾಗಿ ಈಗ ಗಂಗಾವತಿ ಜನ ಕೆಂಡಮಂಡಲರಾಗಿದ್ದು, ಈ ಹಿನ್ನೆಲೆಯಲ್ಲಿ ಹೆಚ್ ಆರ್ ಶ್ರೀನಾಥ ಅವರು ಬಸವರಾಜ ರಾಯರೆಡ್ಡಿ ವಿರುದ್ದ ವಾಗ್ದಾಳಿ ನಡೆಸಿದರು.

ಬಸವರಾಜ ರಾಯರೆಡ್ಡಿ ಈ ಹಿಂದೆ ಸಚಿವರಾಗಿದ್ದರು. ಆಗಲೂ ವಿರುಪಾಪುರಗಡ್ಡೆ ಇತ್ತು. ಆಗ ಇಲ್ಲಿ ಡ್ರಗ್ ಮಾರಾಟ ನಡೆಯುತ್ತಿದ್ದರೆ ಯಾಕೆ ಕ್ರಮ ಕೈಗೊಳ್ಳಲಿಲ್ಲ. ಅವರಿಗೂ ಗಂಗಾವತಿ ಕ್ಷೇತ್ರಕ್ಕೂ ಏನು ಸಂಬಂಧ. ಈ ಭಾಗದ ರೈತರಿಗೆ ಅವಹೇಳನ ಮಾಡಿದ ರಾಯರೆಡ್ಡಿ ಕ್ಷೇಮ ಕೇಳಬೇಕು. ಅವರು ಗಂಗಾವತಿಗೆ ಬಂದರೆ ವಿರೋಧ ವ್ಯಕ್ತಪಡಿಸಲಾಗುವುದು ಶಾಸಕ ಜನಾರ್ಧನರೆಡ್ಡಿ ಹಾಗು ಹೊಸಪೇಟೆ ಶಾಸಕ ಹೆಚ್ ಆರ್ ಗವಿಯಪ್ಪರೊಂದಿಗೆ ಫಾರ್ಮ ಸ್ಟೈ ಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಹಿಂದಿನ ಸರಕಾರ ಪ್ರವಾಸೋದ್ಯಮ ಬೆಳವಣಿಗೆ ದೃಷ್ಠಿಯಿಂದ ರೈತರ ಭೂಮಿಯಲ್ಲಿ ಶೇ 10 ರಷ್ಟು ಭೂಮಿಯಲ್ಲಿ ಫಾರ್ಮ ಸ್ಟೈಗಳನ್ನು ನಿರ್ಮಿಸಬೇಕು ಎಂದಿತ್ತು. ಈ ಮಾದರಿಯಲ್ಲಿ ಚಿಕ್ಕಮಗಳೂರಿನಲ್ಲಿ ಫಾರ್ಮ ಸ್ಟೈಗಳಿಗೆ ಅವಕಾಶ ನೀಡಲಾಗಿದೆ. ಇದೇ ಮಾದರಿಯಲ್ಲಿ ಈ ಭಾಗದಲ್ಲಿ ಫಾರ್ಮ ಸ್ಟೈಗಳಿಗೆ ಅವಕಾಶ ಕೊಡಿಸಬೇಕೆಂದು ಆಗ್ರಹಿಸಿದರು.
ಅಂಜನಾದ್ರಿ ಪವಿತ್ರ ಸ್ಥಳ. ಇಲ್ಲಿಯವರೆಗೂ ಇಲ್ಲಿ ಡ್ರಗ್ ಮಾರಾಟದಂಥ ಪ್ರಕರಣಗಳು ದಾಖಲಾಗಿಲ್ಲ. ಕೇವಲ ಸಣ್ಣ ಪುಟ್ಟ ಪ್ರಕರಣಗಳು ದಾಖಲಾಗಿವೆ. ಮಾಹಿತಿ ಇಲ್ಲದೆ ಬಸವರಾಜ ರಾಯರೆಡ್ಡಿ ಮಾತನಾಡಬಾರದಿತ್ತು ಎಂದು ಶ್ರೀನಾಥ ಹೇಳಿದರು.












Click it and Unblock the Notifications