• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯದಲ್ಲಿ ಕೋವಿಡ್ ನಿಂದ ಮೃತ ಪಟ್ಟ ಅಸಲಿ ಸಾವಿನ ಸಂಖ್ಯೆ ಬಹಿರಂಗ!

|
Google Oneindia Kannada News

ಬೆಂಗಳೂರು, ಜೂನ್ 17: ಕೊರೊನಾ ಮಹಾಮಾರಿಯಿಂದ ಮೃತ ಪಟ್ಟವರ ನಿಜವಾದ ಸಂಖ್ಯೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಮುಚ್ಚಿಡುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಲೇ ಇದೆ.

ವಿದೇಶಿ ಮಾಧ್ಯಮಗಳು ಕೂಡಾ ಭಾರತದಲ್ಲಿನ ಸಾವಿನ ಸಂಖ್ಯೆಯನ್ನು ಏನು ಸರಕಾರ ತೋರಿಸುತ್ತಿದೆಯೋ ಅದು ತಪ್ಪು ಲೆಕ್ಕ ಎಂದು ಟೀಕಿಸಿದ್ದವು. ಅದಕ್ಕೆ, ಕೇಂದ್ರ ಸರಕಾರ ಸ್ಪಷ್ಟನೆಯನ್ನು ನೀಡಿತ್ತು.

"ಡೆಲ್ಟಾ ಪ್ಲಸ್" ರೂಪಾಂತರದಿಂದ 3ನೇ ಅಲೆ; ಆರೋಗ್ಯ ಇಲಾಖೆ ಎಚ್ಚರಿಕೆ

ವಿರೋಧ ಪಕ್ಷದವರು ಸಾವಿನ ಆಡಿಟ್ ನಡೆಯಬೇಕೆಂದು ಸರಕಾರವನ್ನು ಒತ್ತಾಯಿಸುತ್ತಲೇ ಇದೆ. ಈಗ, ಕಾಂಗ್ರೆಸ್ಸಿನ ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಕೂಡಾ ಸರಕಾರ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.

 ಕೊರೊನಾ ಸಾವಿನ ಸಂಖ್ಯೆ: ರಾಜಧಾನಿ ಬೆಂಗಳೂರನ್ನು ಮೀರಿಸುತ್ತಿರುವ ರಾಜ್ಯದ ಈ ನಗರ ಕೊರೊನಾ ಸಾವಿನ ಸಂಖ್ಯೆ: ರಾಜಧಾನಿ ಬೆಂಗಳೂರನ್ನು ಮೀರಿಸುತ್ತಿರುವ ರಾಜ್ಯದ ಈ ನಗರ

ರಾಜ್ಯದಲ್ಲಿ ಕೋವಿಡ್ ನಿಂದ ಮೃತ ಪಟ್ಟವರ ಸಂಖ್ಯೆ ಸರಕಾರ ತೋರಿಸುತ್ತಿರುವುದು ಸತ್ಯಕ್ಕೆ ದೂರವಾದದು. ಕನಿಷ್ಟವೆಂದರೂ ಎಂಟರಿಂದ ಹತ್ತು ಪಟ್ಟು ಕಮ್ಮಿ ಲೆಕ್ಕವನ್ನು ಸರಕಾರ ತೋರಿಸುತ್ತಿದೆ ಎಂದು ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

 ಆಸ್ಪತ್ರೆಗಳು ಹಿಂದಿನ ಸಾವಿನ ಸಂಖ್ಯೆಯನ್ನು ಈಗ ತೋರಿಸುತ್ತಿದೆ

ಆಸ್ಪತ್ರೆಗಳು ಹಿಂದಿನ ಸಾವಿನ ಸಂಖ್ಯೆಯನ್ನು ಈಗ ತೋರಿಸುತ್ತಿದೆ

ರಾಜ್ಯದಲ್ಲಿ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ, ಕೆಲವು ದಿನಗಳ ಹಿಂದೆ ಸಾವಿನ ಸಂಖ್ಯೆ ಹೆಚ್ಚಾಗಿದ್ದಾಗ, ಹಳೆಯ ಲೆಕ್ಕವನ್ನು ತೋರಿಸಲಾಗುತ್ತಿದೆ ಎಂದು ಖುದ್ದು ಆಯುಕ್ತ ಗೌರವ್ ಗುಪ್ತಾ ಒಪ್ಪಿಕೊಂಡಿದ್ದರು. ಆಸ್ಪತ್ರೆಗಳು ಹಿಂದಿನ ಸಾವಿನ ಸಂಖ್ಯೆಯನ್ನು ಈಗ ತೋರಿಸುತ್ತಿದೆ ಎಂದು ಗುಪ್ತಾ ಹೇಳಿದ್ದರು.

 ಜೂನ್ 16ಕ್ಕೆ ಅನ್ವಯವಾಗುವಂತೆ 33,296 ಜನರು ಕೋವಿಡ್ ನಿಂದ ಮೃತ

ಜೂನ್ 16ಕ್ಕೆ ಅನ್ವಯವಾಗುವಂತೆ 33,296 ಜನರು ಕೋವಿಡ್ ನಿಂದ ಮೃತ

"ಜೂನ್ 16ಕ್ಕೆ ಅನ್ವಯವಾಗುವಂತೆ 33,296 ಜನರು ಕೋವಿಡ್ ನಿಂದ ಮೃತ ಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ತನ್ನ ಬುಲೆಟಿನ್ ನಲ್ಲಿ ತೋರಿಸಿದೆ. ಕೋವಿಡ್ ನಿರ್ವಹಣೆಯಲ್ಲೂ ರಾಜ್ಯ ಸರಕಾರ ವಿಫಲಗೊಂಡಿತ್ತು. ಈಗ, ಸಾವಿನ ಅಸಲಿ ಸಂಖ್ಯೆಯನ್ನೂ ಮುಚ್ಚಿಡುತ್ತಿದೆ'ಎಂದು ಎಚ್.ಕೆ.ಪಾಟೀಲ್ ಆರೋಪಿಸಿದ್ದಾರೆ.

 ರಾಜ್ಯ ಸರಕಾರದ ವಿರುದ್ದ ಗುರುತರ ಆರೋಪ

ರಾಜ್ಯ ಸರಕಾರದ ವಿರುದ್ದ ಗುರುತರ ಆರೋಪ

"ಮೊದಲನೇ ಅಲೆಯಲ್ಲಿ 23 ಸಾವಿರ ಜನ ಮೃತ ಪಟ್ಟಿದ್ದಾರೆಂದು ತೋರಿಸಲಾಗಿದೆ. ಒಟ್ಟು ನಮ್ಮ ರಾಜ್ಯದಲ್ಲಿ 3,27,985 ಜನರು ಸಾವನ್ನಪ್ಪಿದ್ದಾರೆಂದು ರಾಜ್ಯ ಸರ್ಕಾರದ ಮಾಹಿತಿ ಇದೆ. ಜನವರಿಯಿಂದ ಜೂನ್ ವರೆಗೂ ಈ ಅಂಕಿಅಂಶ ಎಲ್ಲೂ ತಾಳೆಯಾಗುತ್ತಿಲ್ಲ"ಎಂದು ಪಾಟೀಲ್ ಅವರು ಸರಕಾರದ ವಿರುದ್ದ ಗುರುತರ ಆರೋಪ ಮಾಡಿದ್ದಾರೆ.

 ಸರಕಾರದ ವಿರುದ್ದ ಗಂಭೀರ ಆರೋಪ ಮಾಡಿದ ಎಚ್.ಕೆ.ಪಾಟೀಲ್

ಸರಕಾರದ ವಿರುದ್ದ ಗಂಭೀರ ಆರೋಪ ಮಾಡಿದ ಎಚ್.ಕೆ.ಪಾಟೀಲ್

"ಕೊರೊನಾ ಮೊದಲನೇ ಮತ್ತು ಎರಡನೇ ಅಲೆಯಲ್ಲಿ ಸಾವನ್ನಪ್ಪಿದವರ ಡೆತ್ ಆಡಿಟ್ ಸಿಗದ ಹಾಗೆ ಮಾಡಲಾಗಿದೆ. ಒಟ್ಟು 87,082 ಸಾವಿರ ಸಾವು ಸಂಭವಿಸಿದೆ. ಎರಡೂವರೆ ಲಕ್ಷ ಸಾವನ್ನು ಮುಚ್ಚಿಟ್ಟಿದ್ದಾರೆ. ಇವರಿಗೆ ಮನುಷ್ಯತ್ವ ಅನ್ನೋದೇ ಇಲ್ಲ"ಎಂದು ಎಚ್.ಕೆ.ಪಾಟೀಲ್ ಟೀಕಿಸಿದ್ದಾರೆ.

English summary
Coronavirus Deaths in Karnataka: Congress Leader H K Patil Alleges Karnataka Govt Hiding Actual Coronavirus Death Toll in Karnataka. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X