CT ರವಿಯನ್ನು ಜನ ಸುಮ್ಮನೆ OT ರವಿ ಎನ್ನುತ್ತಾರೆಯೇ?: ದಿನೇಶ್ ಗುಂಡೂರಾವ್
ಬೆಂಗಳೂರು, ಡಿಸೆಂಬರ್ 27: ಬಿಜೆಪಿ ಶಾಸಕ ಸಿ.ಟಿ.ರವಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿ.ಟಿ.ರವಿ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.
CT ರವಿಯನ್ನು ಜನ ಸುಮ್ಮನೆ OT ರವಿ ಎನ್ನುತ್ತಾರೆಯೇ ಎಂದು ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
'ತನ್ನ ಮಾತುಗಳು ಕಾಂಗ್ರೆಸ್ ನಾಯಕರಿಗೆ ಮರ್ಮಘಾತವಾದಂತೆ ಎಂದು C.T.ರವಿ ತಮನ್ನು ತಾವೇ ಆತ್ಮಪ್ರಶಂಸೆ ಮಾಡಿಕೊಂಡಿದ್ದಾರೆ. ನಾವು C.T.ರವಿಯವರನ್ನು ನಿಮಾನ್ಸ್ ರೋಗಿಗಳ ಪಟ್ಟಿಯಲ್ಲಿಟ್ಟಿದ್ದೇವೆ. ಹಾಗಾಗಿ ನಮಗೆ ರವಿ ಮಾತುಗಳು ಹುಚ್ಚನ ಕನವರಿಕೆಗಳಂತೆ. ತಲೆ ಸರಿ ಇಲ್ಲದವರ ಮಾತಿಗೆ ಯಾರಾದರೂ ತಲೆ ಕೆಡಿಸಿಕೊಳ್ಳುತ್ತಾರೆಯೇ?' ಎಂದು ಪ್ರಶ್ನಿಸಿದ್ದಾರೆ.

'C.T. ರವಿಯವರಿಗೆ ಸಂಸ್ಕಾರ ಎಂಬ ಪದದ ಅರ್ಥವೇ ಗೊತ್ತಿಲ್ಲ. ಕಾಂಗ್ರೆಸ್ ನಾಯಕರ ಬಗ್ಗೆ ಅಸಹ್ಯಕರ ಪದ ಬಳಕೆ ಮಾಡುವ ರವಿಯವರಿಗೆ ಯಾವ ಸಂಸ್ಕಾರವಿದೆ? ಹೆಂಡ ಕುಡಿದವರಿಗಿಂತಲೂ ಕಡೆಯಾಗಿ ಮಾತಾಡುವ C.T. ರವಿಯವರನ್ನು ಜನ ಸುಮ್ಮನೆ O.T. ರವಿ ಎನ್ನುತ್ತಾರೆಯೇ? OT ಕುಡಿಯದೆ ರವಿಯವರ ಬಾಯಿಂದ ಇಂತಹ ಕೊಳಕು ಹೇಳಿಕೆಗಳು ಹೇಗೆ ಬರಲು ಸಾಧ್ಯ?' ಎಂದು ಕೇಳಿದ್ದಾರೆ.
'ವಾಜಪೇಯಿ, ಅಡ್ವಾಣಿ ತೆರೆಗೆ ಸರಿದ ಮೇಲೆ BJPಯಲ್ಲಿ ಸಂಸ್ಕಾರಹೀನ, ಚಾರಿತ್ರ್ಯಶೂನ್ಯ ವ್ಯಕ್ತಿಗಳೇ ತುಂಬಿಕೊಂಡಿದ್ದಾರೆ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎಂಬಂತೆ BJPಯಲ್ಲಿರುವ ಬಹುತೇಖರು C.T.ರವಿಯರಂತೆ ಕೊಳಕು ಗಿರಾಕಿಗಳೆ. BJPಯಲ್ಲಿ ಯಾರಾದರೂ ಸಭ್ಯಸ್ಥರಿದ್ದಿದ್ದರೆ ರವಿಯವರಿಗೆ ಇಷ್ಟೊತ್ತಿಗೆ ಬೈದು ಬುದ್ದಿ ಹೇಳಬೇಕಿತ್ತಲ್ಲವೇ?' ಎಂದು ಟ್ವೀಟ್ ಮಾಡಿದ್ದಾರೆ.

'C.T. ರವಿಯವರೆ, 'ನುಡಿದರೆ ಮುತ್ತಿನ ಹಾರದಂತಿರಬೇಕು,ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು,ನುಡಿದರೆ ಲಿಂಗ ಮೆಚ್ಚಿ ಅಹುದುಹುದು ಎನ್ನಬೇಕು' ಎಂಬುದು ಬಸವಣ್ಣನ ವಾಣಿ. ಬಸವಣ್ಣ ಹುಟ್ಟಿದ ನಾಡಿನಲ್ಲಿ ನಿಮ್ಮಂತಹವರ ಬಾಯಿಂದ ಇಂತಹ ಕೊಳಕು ಮಾತುಗಳೇ? ಮೊದಲು ಸಂಸ್ಕಾರ ಕಲಿಯಿರಿ. ಆಮೇಲೆ ಮರ್ಮಾಘಾತದ ಮಾತು' ಎಂದು ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದ ಸಿಟಿ ರವಿ, 'ಕುಡಿದು ಮಾತಾಡ್ತೀನಿ ಅಂತಾ ಅವರು( ಕಾಂಗ್ರೆಸ್ ನಾಯಕರು) ನನ್ನ ಬಗ್ಗೆ ಮಾತಾಡಿದ್ದಾರೆ. ನನ್ನ ರಕ್ತದಲ್ಲಿ ಗಾಂಜಾ, ಮದ್ಯ ಪಾನ ಮಾಡಿರೋದು ಏನಾದರೂ ಸಿಕ್ಕರೆ ಮಾತಾಡಲಿ. ನನ್ನ ಜೊತೆ ಸ್ಪರ್ಧೆಗೆ ಅವರು ಯಾರೇ ಬರಲಿ. ನಾನು ಬೆಳಗಾವಿ ತನಕ ಓಡಿ ತೋರಿಸ್ತೀನಿ. ಅವರ ಕೈಯಲ್ಲಿ ಓಡೋದಕ್ಕೆ ಆಗುತ್ತಾ ಎಂದು ತೋರಿಸಲಿ. ಕುಡಿದು ಓಡಾಡೋಕ್ಕೆ ಆಗದೇ ಇರೋರು ಯಾರು ಎಂಬುದು ಎಲ್ಲರಿಗೂ ಗೊತ್ತು' ಎಂದಿದ್ದಾರೆ.












Click it and Unblock the Notifications