ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮೀರ್ ವಿರುದ್ಧ ದೇವೇಗೌಡ ದಾಳ, ಕಾಂಗ್ರೆಸ್‌ನ ಅಲ್ತಾಫ್ ಜೆಡಿಎಸ್‌ಗೆ

By Manjunatha
|
Google Oneindia Kannada News

Recommended Video

ಜಮೀರ್ ಅಹ್ಮದ್ ಖಾನ್ ವಿರುದ್ಧ ರಣತಂತ್ರ ರೂಪಿಸಿದ ಎಚ್ ಡಿ ದೇವೇಗೌಡ | Oneindia Kannada

ಜೆಡಿಎಸ್‌ ಪಕ್ಷಕ್ಕೆ ಕೈಕೊಟ್ಟು ಕಾಂಗ್ರೆಸ್ ಸೇರಿ ದೇವೇಗೌಡರ ವಿರುದ್ಧವೇ ನಾಲಿಗೆ ಹರಿ ಬಿಟ್ಟಿದ್ದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅವರಿಗೆ ತಕ್ಕ ಪಾಠ ಕಲಿಸಲು ದೇವೇಗೌಡ ಅವರು ನಿರ್ಣಯಿಸಿದ್ದು, ಇದರ ಮೊದಲ ಭಾಗವಾಗಿ ಚಾಮರಾಜಪೇಟೆ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಮುಖಂಡ ಅಲ್ತಾಫ್ ಖಾನ್ ಅವರನ್ನು ಜೆಡಿಎಸ್‌ಗೆ ಸೇರ್ಪಡೆಗೊಳಿಸಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಜಮೀರ್ ಅಹ್ಮದ್ ಖಾನ್ ಚಾಮರಾಜಪೇಟೆ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್‌ ಪರ ಸ್ಪರ್ಧಿಸುತ್ತಿರುವುದು ಬಹುತೇಕ ಖಾತ್ರಿ ಆಗಿದ್ದು, ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್ ಆಕಾಂಕ್ಷಿ ಆಗಿದ್ದ ಅಲ್ತಾಫ್ ಖಾನ್ ಅವರನ್ನು ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಂಡು ಜಮೀರ್ ಅವರಿಗೆ ಆರಂಭಿಕ ಹಿನ್ನಡೆ ಆಗುವಂತೆ ಮಾಡಿದೆ.

ಬಂಡಾಯ ಶಾಸಕ ಜಮೀರ್ ಅಹಮದ್ ಖಾನ್ ಪರಿಚಯಬಂಡಾಯ ಶಾಸಕ ಜಮೀರ್ ಅಹಮದ್ ಖಾನ್ ಪರಿಚಯ

ಅಲ್ತಾಫ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ದೇವೇಗೌಡ ಅವರು ಅಲ್ತಾಫ್ ಅವರೇ ಚಾಮರಾಜಪೇಟೆಯಿಂದ ಜೆಡಿಎಸ್ ಅಭ್ಯರ್ಥಿ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ.

Congress leader Altaf Khan joins JDS, contest against Zameer Ahmed

ಆದರೆ ಅಲ್ತಾಫ್ ಅವರ ಜೆಡಿಎಸ್ ಸೇರ್ಪಡೆಯಿಂದ ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಇಮ್ರಾನ್ ಪಾಷಾ ಬೇಸರಗೊಂಡಿದ್ದು, ಅವರೊಂದಿಗೆ ದೇವೇಗೌಡ ಅವರು ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಈ ವೇಳೆ ಮಾತನಾಡಿದ ದೇವೇಗೌಡ ಅವರು, ಕಳೆದ ಎರಡು ವರ್ಷದಿಂದಲೂ ಚಾಮರಾಜಪೇಟೆ ಕ್ಷೇತ್ರಕ್ಕಾಗಿ ಜೆಡಿಎಸ್ ಅಭ್ಯರ್ಥಿಯನ್ನು ಹುಡುಕುತ್ತಿದ್ದೆವು ಈಗ ಸರಿಯಾದ ಅಭ್ಯರ್ಥಿ ಸಿಕ್ಕಿದ್ದಾರೆ. ಚಾಮರಾಜಪೇಟೆಯ ವೋಟು ಸಮೀಕರಣ ಚೆನ್ನಾಗಿ ಗೊತ್ತಿದೆ, ಇಲ್ಲಿ ಯಾರ ಬಲ ಏನು ಎಂಬುದೂ ಗೊತ್ತಿದೆ, ಈ ಬಾರಿ ಅಲ್ತಾಫ್ ಗೆದ್ದೇ ಗೆಲ್ಲುತ್ತಾರೆ' ಎಂದರು.

ದೇವೇಗೌಡರೇ ವಿರುದ್ಧವಾಗಿ ನಿಂತರೂ ಗೆಲುವು ನನ್ನದೇ: ಜಮೀರ್ ಅಹಮದ್ ದೇವೇಗೌಡರೇ ವಿರುದ್ಧವಾಗಿ ನಿಂತರೂ ಗೆಲುವು ನನ್ನದೇ: ಜಮೀರ್ ಅಹಮದ್

ಈ ವೇಳೆ ಮಾತನಾಡಿದ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಜಮೀರ್ ಅವರು ಮಾಡಿರುವ ಎಲ್ಲಾ ಅಕ್ರಮಗಳ ದಾಖಲೆಗಳು ಜೆಡಿಎಸ್ ಬಳಿ ಇದ್ದು, ಅವುಗಳನ್ನು ಬಯಲಿಗೆ ತರುವುದಾಗಿ ಹೇಳಿದರು. ಪಕ್ಷವೇ ತಾಯಿ, ದೇವೇಗೌಡರೇ ತಂದೆ, ಕುಮಾರಣ್ಣ ಅಣ್ಣ ಎನ್ನುತ್ತಿದ್ದ ಜಮೀರ್ ಅವರು ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದರು.

ನೂತನವಾಗಿ ಪಕ್ಷ ಸೇರ್ಪಡೆಗೊಂಡ ಅಲ್ತಾಫ್ ಖಾನ್ ಮಾತನಾಡಿ, ಜಮೀರ್ ಕಳೆದ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸುವಂತೆ ನನ್ನ ಕಾಲು ಹಿಡಿದಿದ್ದರು, ಅದರ ವಿಡಿಯೋ ಕೂಡ ನನ್ನ ಬಳಿ ಇದೆ, ಈ ಬಾರಿ ಅವರನ್ನು ಸೋಲಿಸಿಯೇ ಸಿದ್ದ ಎಂದರು.

English summary
Chamarajpete congress leader Altaf Khan joins JDS. Altaf Khan expecting congress ticket from Chamarajpete but Zameer Ahmed contesting from congress who recently joined congress by leaving JDS party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X