ಮಂತ್ರಿಗಿರಿ ಪಟ್ಟಕ್ಕೆ ಪಟ್ಟು ಹಿಡಿದ ನಾಯಕರಿಗೆ ಲೋಕಸಭೆ ದಾಳ: ಶಾಸಕರಿಗೆ ಹೈಕಮಾಂಡ್‌ ವಿಧಿಸಿದ ಷರತ್ತುಗಳೇನು!?

ಬೆಂಗಳೂರು, ಮೇ 25: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ ಗೆ ಲೋಕಸಭಾ ಚುನಾವಣೆಯಲ್ಲಿಯೂ ಅತೀ ಹೆಚ್ಚಿನ ಸ್ಥಾನಗಳನ್ನ ಗೆಲ್ಲಲು ಹೈಕಮಾಂಡ್‌ ಚಿಂತನೆಯನ್ನ ನಡೆಸಿದೆ.

ಸಿಎಂ, ಡಿಸಿಎಂ ಹಾಗೂ ಆಯ್ಕೆಯ ಬಳಿಕ ಯಾರನ್ನ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆದಿದ್ದು, ಲೋಕಸಭಾ ಚುನಾವಣೆ ಹಿನ್ನಲೆ ಸಂಪುಟಕ್ಕೆ ಸೇರ್ಪಡೆಯಾಗುವವರು ಲೋಕಸಭಾ ಚುನಾವಣೆಗೂ ಸಿದ್ದರಾಗಿರಬೇಕು ಎಂದು ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಶಾಸಕರಿಗೆ ಷರತ್ತು ಹಾಕಿದೆ ಎನ್ನಲಾಗಿದೆ.

Ministerial Aspirants in Karnataka

2019 ರ ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನವನ್ನ ಪಡೆದಿದ್ದ ಕಾಂಗ್ರೆಸ್‌, ಈ ಬಾರೀ ರಾಜ್ಯದಲ್ಲೇ ನಮ್ಮದೇ ಸರ್ಕಾರ ಅಧಿಕಾರದಲ್ಲಿದೆ, ಅದಲ್ಲದೇ 135 ಸ್ಥಾನಗಳನ್ನ ಗೆಲುವನ್ನ ಸಾಧಿಸಿದೆ. ಹೀಗಾಗಿ 2024 ರ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳಲ್ಲಿ ಗೆಲ್ಲಬೇಕು ಎಂದು ಕಾಂಗ್ರೆಸ್‌ ಹೈಕಮಾಂಡ್‌ ಚಿಂತನೆಯನ್ನ ನಡೆಸಿದ್ದು, ಸಂಪುಟಕ್ಕೆ ಸೇರ್ಪಡೆಯಾಗುವ ಸಚಿವರುಗಳಿಗೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಬಿಗ್ ಟಾಸ್ಕ್ ಫಿಕ್ಸ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಮಂತ್ರಿಗಿರಿಗಾಗಿ ಹಲವು ಸಚಿವಾಕಾಂಕ್ಷಿಗಳು ಹೈಕಮಾಂಡ್‌ ನಾಯಕರ ಬೆನ್ನು ಬಿದ್ದಿದ್ದು, ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬಗ್ಗೆ ಹೈಕಮಾಂಡ್‌ ಲೋಕಸಭೆಯ ದಾಳ ಉರುಳಿಸಲು ಮುಂದಾಗಿದೆ. ಈ ಬಾರೀ ರಾಷ್ಟ್ರಮಟ್ಟದಲ್ಲಿ ಗೆಲುವು ತಂತ್ರವನ್ನ ನಡೆಸಿರುವ ಕಾಂಗ್ರೆಸ್‌ ಹೈಕಮಾಂಡ್‌ ಲೋಕಸಭೆ ಗೆಲುವಿನ ಲೆಕ್ಕಾಚಾರ ಹಾಕಿಯೇ ಈ ಬಾರಿ ಸಚಿವ ಸ್ಥಾನದ ಅವಕಾಶ ನೀಡಲಾಗುತ್ತದೆ ಎಂಬುದು ಕಾಂಗ್ರೆಸ್ ವಲಯದ ಮಾತು ಕೇಳಿ ಬಂದಿವೆ.

ಈಗಾಗಲೇ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25+1, ಕಾಂಗ್ರೆಸ್‌ 1, ಜೆಡಿಎಸ್‌ 1 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಟಾರ್ಗೆಟ್‌ ಹಾಕಿಕೊಂಡಿದೆ. ಇತ್ತ ಡಿ ಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಜೊತೆಗೆ ಮಲ್ಲಿಕಾರ್ಜುನ್‌ ಖರ್ಗೆ ಹಾಗೂ ರಾಹುಲ್‌ ಗಾಂಧಿ ಸಭೆ ನಡೆಸಿದ್ದು, ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ತಂತ್ರವನ್ನ ಚರ್ಚಿಸಿದ್ದಾರೆ.

Ministerial Aspirants in Karnataka

ಶಾಸಕರಿಗೆ ಹೈಕಮಾಂಡ್‌ ವಿಧಿಸಿದ ಷರತ್ತುಗಳೇನು!?

ಲೋಕಸಭೆ ಚುನಾವಣೆಯಲ್ಲಿ ನಾವು 20 ಸ್ಥಾನಗಳನ್ನು ಗೆಲ್ಲಲೇಬೇಕು. ಬಿಬಿಎಂಪಿ ಚುನಾವಣೆಯಲ್ಲೂ ವಿಜಯ ಸಾಧಿಸಬೇಕು.ಜಿಲ್ಲಾ ಸಚಿವರು ಆಗುವವರು ಪ್ರತಿ ಜಿಲ್ಲೆಯಲ್ಲಿ ಹಾಗೂ ಶಾಸಕರು ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಪಕ್ಷದ ಕಚೇರಿ ಸ್ಥಾಪಿಸಲೇಬೇಕು ಹಾಗೂ ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರನ್ನು ಮರೆಯಬಾರದು ಎಂದು ಹೈಕಮಾಂಡ್‌ ನಾಯಕರು ಹೇಳಿದ್ದಾರೆ ಎನ್ನಲಾಗಿದೆ.

ಈಗ ಯಾವ ಜಾತಿ? ಯಾವ ಜಿಲ್ಲೆ ಎನ್ನುವುದು ಮುಖ್ಯ ಅಲ್ಲ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿಕೊಡುವ ಸಾಮರ್ಥ್ಯ ಇರುವವರು ಎಷ್ಟು ಜನ ಎನ್ನುವುದೇ ಮಾನದಂಡ ಮುಖ್ಯಕ್ಕೆ. ಇನ್ನೂ ಕೆಲ ಕ್ಷೇತ್ರದಲ್ಲಿ ಅಗತ್ಯ ಬಿದ್ದರೆ ಅವರೇ ಅಖಾಡಕ್ಕಿಳಿದು ಗೆದ್ದು ತೋರಿಸಬೇಕು ಎಂದು ವರಷ್ಠರು ಷರತ್ತು ವಿಧಿಸಿದ್ದಾರೆ.

ಇತ್ತ ಮಂತ್ರಿಗಿರಿಗಾಗಿ ಪಟ್ಟು ಹಿಡಿದವರು,ಲೋಕಸಭಾ ಟಾಸ್ಕ್ ಪಡೆಯಲೇಬೇಕು. ಯಾವ ಜಿಲ್ಲೆಯಲ್ಲಿ ಯಾವ ಪ್ರಭಾವಿ ಶಾಸಕನಿಗೆ ಸಚಿವಸ್ಥಾನ ಕೊಟ್ಟರೆ ಲೋಕಸಭೆಗೆ ನೆರವಾಗಲಿದೆ? ಯಾರನ್ನ ಮಂತ್ರಿ ಮಾಡಿದರೆ ಲೋಕಸಭೆಗೆ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಅನುಕೂಲವಾಗಲಿದೆ? ಎಂಬ ಲೆಕ್ಕಾಚಾರವನ್ನ ಹೈಕಮಾಂಡ್‌ ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+