ಪಂಚರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್‌ ಟಾರ್ಗೆಟ್‌; ಯಾವ ರಾಜ್ಯಕ್ಕೆ ಎಷ್ಟು?

ಬೆಂಗಳೂರು, ಅಕ್ಟೋಬರ್‌ 16: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಸಂಕಷ್ಟ ಎದುರಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ನ ಮಾಜಿ ಕಾರ್ಪೋರೇಟರ್‌ ಅಶ್ವಥಮ್ಮ ಮತ್ತು ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ನಡೆದು ಬರೋಬ್ಬರಿ 42 ಕೋಟಿ ಹಣ ಪತ್ತೆಯಾಗಿದ್ದು,ಬಿಜೆಪಿ ತೀವ್ರ ವಾಗ್ದಾಳಿ ನಡೆಸುತ್ತಿದೆ.

ಹೌದು, ಈಗಾಗಲೇ ಪಂಚರಾಜ್ಯಗಳ ಚುನಾವಣೆಗಳ ದಿನಾಂಕ ಘೋಷಣೆಯಾಗಿದ್ದು, ಇತ್ತ ಬೆಂಗಳೂರಿನ ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ವೇಳೆ 42 ಕೋಟಿ ಹಣ ಪತ್ತೆಯಾಗಿದ್ದು, ಕಾಂಗ್ರೆಸ್‌ ಹೈಕಮಾಂಡ್‌ ಕರ್ನಾಟಕ ಸರ್ಕಾರಕ್ಕೆ ಹಣ ನೀಡುವ ಕುರಿತು ಟಾರ್ಗೆಟ್‌ ನೀಡಿದೆ ಎಂದು ಆರೋಪಿಸಿದೆ.

congress-high-command

ಈ ಕುರಿತು ರಾಜ್ಯ ಬಿಜೆಪಿ ಟ್ವೀಟ್‌ ಮಾಡಿದ್ದು, ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಮೊದಲನೇ ಹಂತದ ₹1000 ಕೋಟಿ ಟಾರ್ಗೆಟ್ ನೀಡಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದೆ.

ಮೊದಲ ಹಂತದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ 1000 ಕೋಟಿ ಟಾರ್ಗೆಟ್‌ ನೀಡಿದ್ದು, ತೆಲಂಗಾಣ ಕಾಂಗ್ರೆಸ್‌ಗೆ ₹300 ಕೋಟಿ, ಮಿಜೋರಾಂ ಕಾಂಗ್ರೆಸ್‌ಗೆ ₹100 ಕೋಟಿ, ಛತ್ತಿಸ್‌ಗಢ‌ ಕಾಂಗ್ರೆಸ್‌ಗೆ ₹200 ಕೋಟಿ, ರಾಜಸ್ಥಾನ‌ ಕಾಂಗ್ರೆಸ್‌ಗೆ ₹200 ಕೋಟಿ, ಹಾಗೂ ಮಧ್ಯಪ್ರದೇಶ‌ ಕಾಂಗ್ರೆಸ್‌ಗೆ ₹200 ಕೋಟಿ ಟಾರ್ಗೆಟ್‌ ನೀಡಿದೆ ಎಂದು ಕರ್ನಾಟಕ ಬಿಜೆಪಿ ಹೇಳಿದೆ. ಅಲ್ಲದೇ ಕಮಿಷನ್, ಕಲೆಕ್ಷನ್ ಮೂಲಕ ಸಾವಿರ ಕೋಟಿ ಟಾರ್ಗೆಟ್ ಮಾಡಿ ಸಂಗ್ರಹಿಸುತ್ತಿರುವ ಕಾಂಗ್ರೆಸ್ ಹಣ ಹಂಚುವ ಮುನ್ನವೇ ಸಿಕ್ಕಿ ಬಿದ್ದಿದೆ ಎಂದು ರಾಜ್ಯ ಬಿಜೆಪಿ ಕುಟುಕಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆದ್ದಿದೆ ಎಂದಾಗ ಹೈಕಮಾಂಡ್‌‌ನ ಸಂತಸಕ್ಕೆ ಪಾರವೇ ಇಲ್ಲ. ಅಸ್ತಿತ್ವ ಕಳೆದುಕೊಳ್ಳುವ ಕೊನೆಯ ಹಂತದಲ್ಲಿದ್ದ ಕಾಂಗ್ರೆಸ್‌ಗೆ ಕರ್ನಾಟಕ ಸಿಕ್ಕಿದ್ದು ಮುಳುಗುತ್ತಿದ್ದವರಿಗೆ ಹುಲ್ಲು ಕಡ್ಡಿಯಲ್ಲ, ದೋಣಿಯೇ ಸಿಕ್ಕಂತಾಗಿತ್ತು.

ತನ್ನ ಟೂಲ್‌ ಕಿಟ್‌ ಬಳಸಿ ಬಿಜೆಪಿ ಸರ್ಕಾರದ ವಿರುದ್ಧ 40% ಎಂಬ ಸುಳ್ಳು ಆರೋಪ ಮಾಡಿದ್ದರ ಹಿಂದೆ ಇದ್ದ ಸತ್ಯಾಂಶ ಈಗ ಸಂಪೂರ್ಣ ಬಯಲಾಗಿದೆ. ಪಂಚರಾಜ್ಯಗಳಲ್ಲಿ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಗುತ್ತಿಗೆದಾರ ಹಾಗೂ ಸಿದ್ದರಾಮಯ್ಯ ಅವರ ಶಿಷ್ಯ ಅಂಬಿಕಾಪತಿ ಮನೆಯಲ್ಲಿ ಸಿಕ್ಕಿರುವ ₹42 ಕೋಟಿಗಳು ಕರ್ನಾಟಕ ಕಾಂಗ್ರೆಸ್‌ ಪಾಲಿನ ಎಟಿಎಂ ಆಗಿದೆ ಹಾಗೂ 80% ಕಮಿಷನ್‌ ದಂಧೆ ನಡೆಸುತ್ತಿದೆ ಎಂಬುದಕ್ಕೆ ದೊರೆತ ಪುರಾವೆ.

ಸರ್ಕಾರ ಅಧಿಕಾರ ವಹಿಸಿಕೊಂಡ ಮೊದಲ ವಾರದಲ್ಲೇ ಈ #ATMSarkara ಕ್ಕೆ ಇದ್ದದ್ದು ಹಣ ಕಲೆಕ್ಷನ್‌ ಮಾಡಿ ಹೈಕಮಾಂಡ್‌ಗೆ ಒಪ್ಪಿಸುವ ಬೃಹತ್‌ ಜವಾಬ್ದಾರಿ. ದೆಹಲಿಯಿಂದ ಬಂದ ಕಲೆಕ್ಷನ್‌ ಏಜೆಂಟ್‌ ಸುರ್ಜೆವಾಲಾ ರಾಜ್ಯದ ಪ್ರಮುಖ ಅಧಿಕಾರಿಗಳೆನ್ನೆಲ್ಲ ಪಂಚತಾರಾ ಹೋಟೆಲ್‌ನಲ್ಲಿ ಗುಡ್ಡೆ ಹಾಕಿ ರಹಸ್ಯ ಸಭೆ ನಡೆಸಿದ್ದೇ ಈ ಸರ್ಕಾರ ಮುಂದೆ ನಡೆಯುವ ಹಾದಿಯನ್ನು ಅಧಿಕಾರಿಗಳಿಗೆ ಸ್ಪಷ್ಟಪಡಿಸಲು. ಎಲ್ಲಾ ಇಲಾಖೆಯ ಮುಖ್ಯಸ್ಥರಿಗೂ ತಿಂಗಳ ಟಾರ್ಗೆಟ್ಟನ್ನು ಸ್ವತಃ ಕೊಟ್ಟು ಹೋದ ಸುರ್ಜೇವಾಲ ಅವರು ನಂತರ ತಿಂಗಳಿಗೆ ಎರಡೆರೆಡು ಬಾರಿ ರಾಜ್ಯಕ್ಕೆ ಬರುವ ಮೂಲಕ ಟಾರ್ಗೆಟ್‌ ತಲುಪುತ್ತಿರುವುದನ್ನು ಸ್ವತಃ ಖಾತರಿ ಮಾಡಿಕೊಂಡರು.

ಈಗ ಬರಗಾಲದಲ್ಲಿಯೂ ಬಂಗಾರದಂತೆ ಹೊಳೆಯುತ್ತಿರುವುದೇ ಅವತ್ತು ಬಿತ್ತಿ ಹೋದ ಬೀಜದ ಸಮೃದ್ಧ ಫಸಲು. ಮೊನ್ನೆ ₹42 ಕೋಟಿ, ಇಂದು ₹45 ಕೋಟಿ, ಇದು ಕಾಂಗ್ರೆಸ್ ಹೊರ ರಾಜ್ಯಗಳ ಚುನಾವಣೆಗೆ ಫಂಡಿಂಗ್ ಮಾಡಲು ರಾಜ್ಯವನ್ನು ಲೂಟಿ ಹೊಡೆಯುತ್ತಿರುವ ಪರಿ.

ವಶಪಡಿಸಿಕೊಂಡ ಎಲ್ಲಾ ಹಣದ ವಾರಸುದಾರರು ಕಾಂಗ್ರೆಸ್‌ ನಾಯಕರ ಬೇನಾಮಿಗಳು ಹಾಗೂ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರು. ಅಂಬಿಕಾಪತಿ ಸಿಎಂ ಸಿದ್ದರಾಮಯ್ಯ ಬಣದವರಾದರೇ, ಮಾಜಿ ಎಂ.ಎಲ್.ಸಿ ಬೆಮೆಲ್ ಕಾಂತರಾಜು ಡಿಸಿಎಂ ಡಿ ಕೆ ಶಿವಕುಮಾರ್‌ ಬಣದವರು. ರಾಜ್ಯವನ್ನು ಲೂಟಿ ಹೊಡೆಯುವುದರಲ್ಲಿ ಸಹ ಬಣಗಳ ಪೈಪೋಟಿ ಜೋರೋ ಜೋರು ಎಂದು ಬಿಜೆಪಿ ಕಿಡಿಕಾರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+