ದಾವಣಗೆರೆಯಿಂದ ಕೋಲಾರದವರೆಗಿನ ಅಭಿವೃದ್ಧಿಗೆ ಕಾಂಗ್ರೆಸ್ ಪ್ಲ್ಯಾನ್
ಬೆಂಗಳೂರು, ಏಪ್ರಿಲ್ 28: ಬೆಂಗಳೂರು ಪ್ರಾದೇಶಿಕ ವಲಯದ ಅಭಿವೃದ್ಧಿಗಾಗಿ 23 ಮಿಲಿಯನ್ ಜನಸಂಖ್ಯೆಯನ್ನು ಗುರಿಯಾಗಿಸಿ ಕಾಂಗ್ರೆಸ್ ಪಕ್ಷ ಪ್ರತ್ಯೇಕ ಅಭಿವೃದ್ಧಿ ಪರಿವಿಡಿಯನ್ನು ಹೊಂದಿದ್ದು, ಅದಕ್ಕಾಗಿ ತನ್ನ ಪ್ರಣಾಳಿಕೆ ಘೋಷಿಸಿದೆ.
ಬೆಂಗಳೂರು ವಲಯವು ಶಿವಮೊಗ್ಗ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಒಳಗೊಂಡಿದ್ದು, ಇವುಗಳ ಅಭಿವೃದ್ಧಿಗೆ ಪ್ರತ್ಯೇಕ ಯೋಜನೆಗಳನ್ನು ರೂಪಿಸುವ ಇಚ್ಛೆ ಹೊಂದಿದೆ.
ನಗರದ ಹೊರವಲಯ ಮತ್ತು ಸಮೀಪದ ಪಟ್ಟಣಗಳಿಗೆ ಮೆಟ್ರೊ ರೈಲು ಸೇವೆಯ ವಿಸ್ತರಣೆ, ಸಂಚಾರ ದಟ್ಟಣೆ ಕಡಿಮೆ ಮಾಡಲು ಫ್ಲೈವರ್‌ಗಳ ನಿರ್ಮಾಣ, ಮಂಗಳೂರನ್ನು ಮತ್ತೊಂದು ಸಿಲಿಕಾನ್ ವ್ಯಾಲಿಯಾಗಿ ರೂಪಿಸುವ ಆಶಯ ಸೇರಿದಂತೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಸಾಧ್ಯತೆಗಳನ್ನು ಪ್ರಸ್ತಾಪಿಸಿದೆ.
ಮತ್ತೊಂದು ಬಾರಿ ಅಧಿಕಾರ ಹಿಡಿಯಬೇಕೆಂಬ ಆಶಯ ಹೊತ್ತ ಆಡಳಿತಾರೂಢ ಪಕ್ಷದ ಪ್ರಣಾಳಿಕೆ ಸಹಜವಾಗಿಯೇ ಜನರ ಗಮನ ಸೆಳೆದಿದೆ. ಕಾಂಗ್ರೆಸ್ ಪ್ರಣಾಳಿಕೆಯ ಮುಖ್ಯಾಂಶಗಳು ಇಲ್ಲಿವೆ. ಪ್ರಣಾಳಿಕೆಯನ್ನು ಎರಡು ರೀತಿ ವಿಂಗಡಿಸಲಾಗಿದೆ. 128 ಪುಟಗಳ 'ವಿಭಾಗ ಪ್ರಣಾಳಿಕೆ'ಯಲ್ಲಿ ರಾಜ್ಯದ ಎಲ್ಲ 30 ಜಿಲ್ಲೆಗಳನ್ನು ಕಲಬುರ್ಗಿ, ಬೆಂಗಳೂರು, ಬೆಳಗಾವಿ ಮತ್ತು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಶಿವಮೊಗ್ಗ : ಶಿವಮೊಗ್ಗ ನಗರ ಸಂಪೂರ್ಣ ಎಲ್‌ಇಡಿ ವಿದ್ಯುದೀಕರಣ. ಶಿವಮೊಗ್ಗ ನಗರದ ರಸ್ತೆಗಳನ್ನು 100 ಅಡಿ ರಸ್ತೆಗಳಾಗಿ ಮೇಲ್ದರ್ಜೆಗೆ. ಜಿಲ್ಲೆಯ 40 ಗ್ರಾಮಗಳನ್ನು ಆಯ್ದು ಸ್ಮಾರ್ಟ್ ವಿಲೇಜ್ ಯೋಜನೆ ರೂಪಿಸುವುದು. ಇಂತಹ ಗ್ರಾಮಗಳ ಸಂಪೂರ್ಣ ಡಿಜಿಟಲ್ ಸಾಕ್ಷರತೆ, ಮೂಲಸೌಕರ್ಯ ವೃದ್ಧಿ ಮಾಡುವ ಗುರಿ. ಪ್ರತಿ ಗ್ರಾಮದಲ್ಲಿ ಎಟಿಎಂ ಸೌಲಭ್ಯ. ಜಿಲ್ಲೆಯಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪನೆ ಮೂಲಕ ಕೈಗಾರಿಕೆಗೆ ಉತ್ತೇಜನ. ಪ್ರತಿ 15 ಕಿಮೀ ವ್ಯಾಪ್ತಿಯೊಳಗೆ ಪ್ರಾಥಮಿಕ ಆರೋಗ್ಯ ಕೇಂದ್ರ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಐಎಎಸ್, ಐಪಿಎಸ್, ಬ್ಯಾಂಕಿಂಗ್, ಕೆಎಎಸ್ ಪರೀಕ್ಷಾ ತರಬೇತಿ ಕೇಂದ್ರ.
ಕೋಲಾರ : ಕೋಲಾರದ ನರಸಾಪುರದಲ್ಲಿ ಆಟೊ ಹಬ್ ಸ್ಥಾಪನೆ. ಕ್ಲಾತ್ ಡೈಯಿಂಗ್, ಸಿಲ್ಕ್ ಪ್ರಿಂಟಿಂಗ್, ಕೈಮಗ್ಗ ಉದ್ಯಮದ ವಿಶೇಷ ಬೆಳವಣಿಗೆಗಾಗಿ ಹೂಡಿಕೆದಾರರ ಆಕರ್ಷಣೆ. ಸಮಗ್ರ ಜವಳಿ ಪಾರ್ಕ್ ಸ್ಥಾಪಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಕ್ರಮ. ಪರಿಸರ ಸ್ನೇಹಿತ ಸ್‌ಟಾವೇರ್ ಟೆಕ್ನಾಲಜಿ ಪಾರ್ಕ್ ಸ್ಥಾಪನೆ. ಜಿಲ್ಲೆಯ ಕೆರೆ, ಕೊಳವೆ ಬಾವಿಗಳ ಪುನಶ್ಚೇತನಕ್ಕೆ ಅಗತ್ಯ ಕ್ರಮ. ಮೇಕೆದಾಟು ಯೋಜನೆ ಮೂಲಕ ಕೋಲಾರ, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ನೀರಿನ ಸೌಲಭ್ಯ. ಕೋಲಾರ ಗೋಲ್ಡ್ ್ಯಾಕ್ಟರಿಯ 12 ಸಾವಿರ ಎಕರೆ ಜಮೀನಿನಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಷ್ಟ್ರೀಯ ಹೂಡಿಕೆದಾರರ ಹಾಗೂ ಉತ್ಪಾದಕರ ವಲಯದ ಅಭಿವೃದ್ಧಿ. ಕೋಲಾರ, ವೇಮಗಲ್ ಮತ್ತು ನರಸಾಪುರ ಸುತ್ತಲಿನ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪನಗರಗಳ ಸೃಷ್ಟಿ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಮನಗರ: ಆಟೊಮೊಟಿವ್ ವಲಯ ಸ್ಥಾಪನೆ ಮೂಲಕ ಉದ್ಯೋಗ ಸೃಷ್ಟಿ. ರಾಮನಗರದಲ್ಲಿ ಜವಳಿ ಪಾರ್ಕ್ ಸ್ಥಾಪನೆ. ರಾಮನಗರದಲ್ಲಿ ಇಎಸ್‌ಐ ಆಸ್ಪತ್ರೆ, ವಸತಿ ಕಾಲನಿಗಳು, ಕೈಗಾರಿಕೆ ಆಧರಿತ ಕಾರ್ಮಿಕರಿಗೆ ಮನೆಗಳ ನಿರ್ಮಾಣ. ರೈತ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ. ರೇಷ್ಮೆ ವಲಯದ ರೈತರಿಗಾಗಿ ವಿಶೇಷ ಆದ್ಯತೆಯ ವಲಯಗಳ ಸ್ಥಾಪನೆ. ಮೇಕೆದಾಟು ಯೋಜನೆ ಮೂಲಕ ನೀರಿನ ಬರ ನೀಗಿಸಲು ಕ್ರಮ. ರಾಮಗನರದಲ್ಲಿ ೊರೆನ್ಸಿಕ್ ಲ್ಯಾಬ್ ಸ್ಥಾಪನೆ. ರಾಮನಗರದಲ್ಲಿ ರೇಷ್ಮೆ ಕೃಷಿಯ ಶ್ರೀಮಂತಿಕೆ ಬಿಂಬಿಸುವ ವಸ್ತುಪ್ರದರ್ಶನ ಸ್ಥಾಪನೆ.
ಚಿಕ್ಕಬಳ್ಳಾಪುರ: ಫಾರ್ಮಸುಟಿಕಲ್, ಗಾರ್ಮೆಂಟ್, ಐಟಿ ಲಾಜಿಸ್ಟಿಕ್ಸ್ ಪಾರ್ಕ್ ಮತ್ತು ಕೌಶಲ್ಯ ವೃದ್ಧಿ ಕೇಂದ್ರಗಳ ಸ್ಥಾಪನೆ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಬೃಹತ್ ಕೈಗಾರಿಕಾ ವಲಯವಾಗಿ ಮಾರ್ಪಾಟು. ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಗುಂಟ ಕೈಗಾರಿಕೆ ವಲಯ ಅಭಿವೃದ್ಧಿ. ಗ್ರಾನೈಟ್ ಪಾರ್ಕ್ ಅಭಿವೃದ್ಧಿ. ಐಟಿ ವಿಶೇಷ ಆರ್ಥಿಕ ವಲಯ, ಕನ್ವೆನ್‌ಷನ್ ಸೆಂಟರ್, ನಂದಿ ಬೆಟ್ಟ, ವಿದುರಾಶ್ವತ್ಥ ಅಭಿವೃದ್ಧಿ. ಚಿಕ್ಕಬಳ್ಳಾಪುರ ಸಂಸ್ಕರಣ ಘಟಕ ಸ್ಥಾಪನೆ. ಕಲ್ಯಾಣ ನದಿ, ಜಿಲ್ಲೆಯ ಎಲ್ಲ ಕೆರೆಗಳ ಪುನಶ್ಚೇತನ.
ತುಮಕೂರು: ಜಿಲ್ಲಾ ಕೇಂದ್ರ ತುಮಕೂರು ಸಂಪೂರ್ಣ ಸಿಸಿಟಿವಿ ವ್ಯಾಪ್ತಿಗೆ ಒಳಪಡಿಸಿ, ಕಾನೂನು ಸುವ್ಯವಸ್ಥೆ ಸುಧಾರಣೆ. ಕೊಳವೆ ಮಾರ್ಗದ ಅಡುಗೆ ಅನಿಲ ಪೂರೈಕೆ ಯೋಜನೆ ಗೇಲ್ ಸಹಯೋಗದಲ್ಲಿ ಪೂರ್ಣ. ಶೇ.20ರಷ್ಟು ಕೈಗಾರಿಕೆ ಜಮೀನು ಸಣ್ಣ ಕೈಗಾರಿಕೆಗಳಿಗೆ ಮೀಸಲು. ಗ್ರಾಮೀಣ ಪ್ರದೇಶ ಸಂಪೂರ್ಣ ಮಳೆ ನೀರು ಕೊಯ್ಲು ವ್ಯಾಪ್ತಿಗೆ. ತುಮಕೂರಿನಲ್ಲಿ ತಲಾ ಒಂದು ಕೃಷಿ, ಪಶು ಸಂಗೋಪನೆ ಹಾಗೂ ತೋಟಗಾರಿಕಾ ಕಾಲೇಜುಗಳ ಸ್ಥಾಪನೆ. ಪಿಪಿಪಿ ಮಾದರಿಯಲ್ಲಿ ಗ್ರೀನ್ ಪಾರ್ಕ್ ಸ್ಥಾಪನೆ. ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಜಿಲ್ಲೆಗೆ ನೀರು ಪೂರೈಕೆ.
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಡಿಆರ್‌ಡಿಓ ಘಟಕದ ಸ್ಥಾಪನೆ ಮೂಲಕ 20 ಸಾವಿರ ಜನರಿಗೆ ಉದ್ಯೋಗ. ರೆಡಿಮೇಡ್ ಗಾರ್ಮೆಂಟ್ ವಲಯ, ಪ್ರಿಂಟಿಂಗ್ ವಲಯ ಸೇರಿ ಕೈಗಾರಿಕಾ ಕ್ಲಸ್ಟರ್‌ಗಳ ಸ್ಥಾಪನೆ. ನೀರಿನ ಬರ ನೀಗಿಸಲು ಶಾಂತಿ ಸಾಗರ ಹಾಗೂ ವಾಣಿವಿಲಾಸ ಸಾಗರಗಳ ಅಭಿವೃದ್ಧಿ. ಗಾಳಿ ವಿದ್ಯುತ್ ಸ್ಥಾಪನೆಗೆ ಉತ್ತೇಜನ. ತುಂಗಭದ್ರಾ ಹಿನ್ನೀರಿನ ಮೂಲಕ ಮೊಳಕಾಲ್ಮೂರು, ಚಳ್ಳಕೆರೆ, ಪಾವಗಡ ಪ್ರದೇಶಕ್ಕೆ ನೀರು. ಚಿತ್ರದುರ್ಗ ಐತಿಹಾಸಿಕ ಸ್ಮಾರಕಗಳ ಅಭಿವೃದ್ಧಿ. ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆ.
ದಾವಣಗೆರೆ: ದಾವಣಗೆರೆಯಲ್ಲಿ ಐಟಿ-ಬಿಟಿ ಹಬ್ ಸ್ಥಾಪನೆ. ಜವಳಿ ಪಾರ್ಕ್, ವಿಮಾನ ನಿಲ್ದಾಣ, ಗೋವಿನಜೋಳ, ಅಕ್ಕಿ ಉತ್ಪನ್ನಗಳ ಕೈಗಾರಿಕೆ ಸ್ಥಾಪನೆ. ಜಗಳೂರು ಬಳಿ ಒಣ ಮೆಣಸಿನಕಾಯಿ, ಈರುಳ್ಳಿ ಸಂಸ್ಕರಣ ಘಟಕ ಸ್ಥಾಪನೆ. ಮಾವಿನ ಸಂಸ್ಕರಣ ಬೃಹತ್ ಘಟಕ.
ಬೆಂಗಳೂರು ನಗರ: 10 ಸಾವಿರ ಕೋಟಿ ರು.ಗಳ ಹೂಡಿಕೆ ಮೂಲಕ ವಿಶ್ವದರ್ಜೆಯ ಮೂಲಸೌಕರ್ಯ ಅಭಿವೃದ್ಧಿ. ಬೆಂಗಳೂರಿನಲ್ಲಿ ರಸ್ತೆಗಳ ವಿಸ್ತರಣೆ, ಮತ್ತಷ್ಟು ಫ್ಲೈಓವರ್‌ಗಳ ನಿರ್ಮಾಣ, ಮೆಟ್ರೊ ರೈಲು ಸೇವೆ ವಿಸ್ತರಣೆ
ಬೆಂಗಳೂರು ಗ್ರಾಮಾಂತರ: ಪ್ರತಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘಗಳ ಸ್ಥಾಪನೆ. ಗ್ರಾಮೀಣ ಜೀವ ವೈವಿಧ್ಯತೆ ಕಾಪಾಡಲು ವಿಶೇಷ ಉತ್ತೇಜನ. ಕೃಷಿ ಹೊಂಡ ಮತ್ತು ಚೆಕ್ ಡ್ಯಾಮ್‌ಗಳ ನಿರ್ಮಾಣ. ಕಬ್ಬನ್ ಪಾರ್ಕ್ ಮತ್ತು ಬೃಂದಾವನ ಪಾರ್ಕ್ ಮಾದರಿಯಲ್ಲಿ ಪಾರ್ಕ್‌ಗಳ ಸ್ಥಾಪನೆ.











Click it and Unblock the Notifications