ಕಾವೇರಿಗಾಗಿ ಹೋರಾಟದ ಕಿಚ್ಚು; ನಾಡದ್ರೋಹಿ ಕಾಂಗ್ರೆಸ್‌ಗೆ ಧಿಕ್ಕಾರ, ಧಿಕ್ಕಾರ, ಧಿಕ್ಕಾರ: ಬಿಜೆಪಿ

ಬೆಂಗಳೂರು, ಸೆಪ್ಟೆಂಬರ್‌ 22: ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ದ್ರೋಹವನ್ನು ಎಸಗಿದೆ. ನಾಡದ್ರೋಹಿ ಕಾಂಗ್ರೆಸ್‌ಗೆ ಧಿಕ್ಕಾರ, ಧಿಕ್ಕಾರ, ಧಿಕ್ಕಾರ ಎಂದು ರಾಜ್ಯ ಬಿಜೆಪಿ ಕರ್ನಾಕಟ ಕಾಂಗ್ರೆಸ್‌ ವಿರುದ್ದ ತೀವ್ರ ವಾಗ್ದಾಳಿ ನಡೆಸಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ಕೇಂದ್ರದಲ್ಲಾಗಲಿ ಅಥವಾ ರಾಜ್ಯದಲ್ಲಾಗಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗಲೆಲ್ಲಾ ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯ ಎಂಬುದು ಕಟ್ಟಿಟ್ಟ ಬುತ್ತಿ. ತಮಿಳುನಾಡಿನಲ್ಲಿ ರಚನೆಯಾಗುವ ಸರ್ಕಾರಗಳ ಜೊತೆ ಒಂದಲ್ಲ ಒಂದು ರೀತಿ ಮೈತ್ರಿ ಮಾಡಿಕೊಳ್ಳುತ್ತಿದ್ದ ಕಾಂಗ್ರೆಸ್, ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ದ್ರೋಹವನ್ನು ಎಸಗಿದೆ.

congress-has-continuously-betrayed

ವಿಪಕ್ಷದಲ್ಲಿದ್ದಾಗ ಕಾವೇರಿಯನ್ನು ಚುನಾವಣೆಯ ವಿಷಯವನ್ನಾಗಿ, ಕನ್ನಡದ ಅಸ್ಮಿತೆಯನ್ನಾಗಿ ಬಳಸಿಕೊಳ್ಳುವ ಕಾಂಗ್ರೆಸ್‌ ಅಧಿಕಾರ ದೊರೆತ ತಕ್ಷಣ ಕಾವೇರಿಯನ್ನು ಹಾಗೂ ಕಾವೇರಿ ಕೊಳ್ಳದ ಭಾಗದ ಜನರ ಹಿತಾಸಕ್ತಿಯನ್ನು ಸಂಪೂರ್ಣ ಕಡೆಗಣಿಸುತ್ತದೆ. ಚುನಾವಣೆಗೂ ಮುನ್ನ ಮೇಕೆದಾಟು ವಿಚಾರದಲ್ಲಿ "ನಮ್ಮ ನೀರು-ನಮ್ಮ ಹಕ್ಕು" ಎಂದು ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್‌, ಚುನಾವಣೆ ಬಳಿಕ "ನಮ್ಮ ನೀರು - ತಮಿಳುನಾಡಿನ ಹಕ್ಕು" ಎಂಬಂತೆ ವರ್ತಿಸುತ್ತಿರುವುದು, ಕಾಂಗ್ರೆಸ್‌ನ ಸೋಗಲಾಡಿ ಬುದ್ದಿಗೆ ತಾಜಾ ಉದಾಹರಣೆ ಎಂದು ಹೇಳಿದೆ.

ಗೋವಾದಲ್ಲಿ ನಿಂತುಕೊಂಡು, ಮಹದಾಯಿಯ ಒಂದೇ ಒಂದು ಹನಿ ನೀರನ್ನು ಸಹ ಕರ್ನಾಟಕಕ್ಕೆ ಬಿಡುವುದಿಲ್ಲ ಎಂದು ಅಬ್ಬರಿಸಿದ್ದ ಕಾಂಗ್ರೆಸ್‌ನ ನಾಯಕಿ ಸೋನಿಯಾ ಗಾಂಧಿಯವರು, ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡಿಸಲು ಮಾತ್ರ ಸದಾ ಮುಂದೆ ನಿಂತಿರುತ್ತಾರೆ.

ಮೇಕೆದಾಟು ಯೋಜನೆ ಅನುಷ್ಠಾನಗೊಂಡರೆ, ಕಾವೇರಿ ಸಮಸ್ಯೆ ಬಗೆಹರಿಯಲಿದೆ ಎಂದು ಪುಂಖಾನುಪುಂಖವಾಗಿ ಭಾಷಣ ಮಾಡಿದ್ದ ಕಾಂಗ್ರೆಸ್‌ನ ನಾಯಕರು, ಈಗ ಸಂಪೂರ್ಣ ಬಹುಮತದ ಅಧಿಕಾರ ದೊರೆತರೂ ಮೌನಕ್ಕೆ ಶರಣಾಗಿರುವುದು, ಕಾಂಗ್ರೆಸ್‌ನ ದ್ವಿಮುಖ ನೀತಿಗೆ ಸ್ಪಷ್ಟ ಉದಾಹರಣೆ.

ಬರೋಬ್ಬರಿ 103 ವರ್ಷಗಳ ಬಳಿಕ ರಾಜ್ಯದಲ್ಲಿ ಕಂಡು ಕೇಳರಿಯದಂತಹ ಬರ ಆವರಿಸಿದೆ. ದಾಖಲೆಯ ಪ್ರಮಾಣದ ಮಳೆ ಕೊರತೆಯ ಕಾರಣ ಕುಡಿಯುವ ನೀರಿಗೆ ತತ್ವಾರ ಈಗಾಗಲೇ ಶುರುವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಅತ್ಯಂತ ನಾಜೂಕಿನಿಂದ ನಿಭಾಯಿಸಬೇಕಾಗಿದ್ದ ಕಾಂಗ್ರೆಸ್‌ ಸರ್ಕಾರ ಮಾಡಿದ್ದು ಬರೀ ರಾಜಕೀಯ. ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ರಾಜ್ಯದ ರೈತರ ಹಿತಾಸಕ್ತಿಗಿಂತಲೂ, 2024 ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮಾಡಿಕೊಂಡಿರುವ I.N.D.I.Alliance ನ ಗೆಳೆತನವೇ ಮುಖ್ಯವಾಗಿರುವುದು, ಸರ್ಕಾರ ಈ ವಿವಾದದ ಆರಂಭದಲ್ಲಿ ಇಟ್ಟ ಹೆಜ್ಜೆಗಳಿಂದಲೇ ಜಗಜ್ಜಾಹೀರಾಗಿದೆ.

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು, ತಮ್ಮ ರಾಜ್ಯದ ಜನರಿಗೆ, ಕರ್ನಾಟಕದಿಂದ ನೀರು ಬಿಡಿಸಿಯೇ ತೀರುತ್ತೇನೆಂದು ಭರವಸೆ ನೀಡಿದರೆ, ನಮ್ಮ ರಾಜ್ಯದ ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿರವರು, ರಾಜ್ಯದ ರೈತರು ಈ ಬಾರಿ ನೀರಾವರಿ ಆಶ್ರಿತ ಬೆಳೆಗಳನ್ನು ಬೆಳೆಯಬಾರದೆಂದು ಆಜ್ಞೆ ಮಾಡುತ್ತಾರೆ. ಚೆಲುವರಾಯಸ್ವಾಮಿ ಕರ್ನಾಟಕಕ್ಕೆ ಕೃಷಿ ಸಚಿವರೋ ಅಥವಾ ತಮಿಳುನಾಡಿಗೋ..? ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.

ಅವಕಾಶ ಸಿಕ್ಕಾಗಲೆಲ್ಲಾ ಬಿಟ್ಟಿ ಪ್ರಚಾರಕ್ಕೆ ಹವಣಿಸುವ ವ್ಯಕ್ತಿ ನಮ್ಮ ರಾಜ್ಯದ ಜಲ ಸಂಪನ್ಮೂಲ ಸಚಿವ. ಮಳೆಯ ಕೊರತೆ ಉಂಟಾದ ತಕ್ಷಣವೇ ಕಾವೇರಿ ನದಿ ನೀರು ಹಂಚಿಕೆ ಹಾಗೂ ವಿವಾದದ ಬಗ್ಗೆ ತಜ್ಞರ ಮಾಹಿತಿ ಪಡೆದು ಆ ನಿಟ್ಟಿನಲ್ಲಿ ಮುಂದುವರೆಯಬೇಕಿತ್ತು. ಆದರೆ ನೇಮು ಹಾಗೂ ಫೇಮಿಗೆ ಸದಾ ಹಪಹಪಿಸುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುವ ನಾಟಕ ಮಾಡಿದರೇ ಹೊರತು, ತಮ್ಮ ಆಪ್ತ ಗೆಳೆಯ ತಮಿಳುನಾಡಿನ ಸಿಎಂ ಎಂ.ಕೆ.ಸ್ಟಾಲಿನ್‌ರವರ ಜೊತೆ ಚರ್ಚಿಸಲೇ ಇಲ್ಲ.

congress-has-continuously-betrayed

ಚುನಾವಣೆಯ ಸೀಟು ಹಂಚಿಕೆ ಬಗ್ಗೆ, ಚುನಾವಣೆಯ ಕಾರ್ಯಸೂಚಿಗಳ ಬಗ್ಗೆ ಎಂ.ಕೆ. ಸ್ಟಾಲಿನ್‌ರವರ ಹೆಗಲ ಮೇಲೆ ಕೈ ಹಾಕಿ ಚರ್ಚಿಸುವ ಡಿಸಿಎಂ ಡಿ.ಕೆ. ಶಿವಕುಮಾರ್‌ರವರು, ಕರ್ನಾಟಕದ ವಾಸ್ತವದ ಪರಿಸ್ಥಿತಿಯನ್ನು ಏಕೆ ತಿಳಿಸಲಿಲ್ಲ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಲಭಿಸಿಲ್ಲ ಎಂದು ಕಿಡಿಕಾರಿದೆ.

ತಮಿಳುನಾಡಿಗೆ ಸಾಕಷ್ಟು ನೀರು ಹರಿಬಿಟ್ಟ ನಂತರ, ಜನ ಸರ್ಕಾರದ ನಡೆಯನ್ನು ವಾಚಾಮಗೋಚರವಾಗಿ ಖಂಡಿಸಿದ ತಕ್ಷಣ ಸರ್ವಪಕ್ಷಗಳ ಸಭೆ ಎಂಬ ಹೊಸ ನಾಟಕವನ್ನು ಕಾಂಗ್ರೆಸ್‌ ಆರಂಭಿಸಿತು. ಎಂದಿನಂತೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಸಹ ನಡೆಸಿತು. ಆದರೆ ತಮಿಳುನಾಡಿಗೆ ನೀರು ಬಿಡುವ ಮುನ್ನ ಏಕೆ ಸರ್ವಪಕ್ಷಗಳ ಸಭೆಯನ್ನು ನಡೆಸಲಿಲ್ಲ ಎಂಬುದಕ್ಕೆ ಸಹ ಇದುವರೆಗೂ ಉತ್ತರ ನೀಡದೇ ಪಲಾಯನ ಮಾಡುತ್ತಿದೆ.

ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಕಾವೇರಿ ವಿಚಾರದಲ್ಲಿ ತಮಿಳುನಾಡು ಸರ್ಕಾರ ಹೇಳಿದಂತೆ ಕೇಳುವುದರ ಹಿಂದೆ ಲೋಕಸಭಾ ಚುನಾವಣೆಯ ರಾಜಕೀಯ ಅಡಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ತಾನು ಹೆಚ್ಚು ಸೀಟು ಗೆಲ್ಲುವುದಿಲ್ಲವೆಂಬುದು ಕಾಂಗ್ರೆಸ್‌ಗೆ ಈಗಾಗಲೇ ಮನವರಿಕೆಯಾಗಿದೆ. ಹಾಗಾಗಿ ಕೊನೆ ಪಕ್ಷ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ, ಅಲ್ಲಿಯಾದರೂ ಒಂದಷ್ಟು ಸೀಟುಗಳನ್ನು ಗೆಲ್ಲಬೇಕೆಂಬ ದೂರಾಲೋಚನೆಯಿಂದ ಕನ್ನಡಿಗರ ಸ್ವಾಭಿಮಾನವನ್ನು ತಮಿಳುನಾಡಿಗೆ ಅಡವಿಡುವ ಕೆಲಸ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+