ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸರ್ಕಾರ ಪತನ: ಭವಿಷ್ಯ ನುಡಿದ ಕೆ ಎಸ್ ಈಶ್ವರಪ್ಪ
ರಾಯಚೂರು, ಅಕ್ಟೋಬರ್ 20: ರಾಜ್ಯದಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪದೇ ಪದೇ ಸರ್ಕಾರ ಪತನವಾಗಲಿದೆ ಎಂದು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.
ಈ ಕುರಿತು ಶುಕ್ರವಾರ ರಾಯಚೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮಾತನಾಡಿ, 2024 ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸರ್ಕಾರ ಬಿದ್ದುಹೋಗತ್ತದೆ ಎಂದು ಕಿಡಿಕಾರಿದ್ದಾರೆ.

ದೇಶದಲ್ಲೇ ಕಾಂಗ್ರೆಸ್ ನವರಿಗೆ ಅಧಿಕಾರ ಇರ್ಲಿಲ್ಲ. ರಾಜ್ಯದಲ್ಲಿ ಈಗ ಗ್ಯಾರಂಟಿ ಅದು, ಇದು ಮೋಸ ಮಾಡಿ ಹೇಳಿ ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದಿದ್ದಾರೆ. ಈಗ ಅಕ್ರಮ ಅಸ್ತಿ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೇಸ್ ಬಂದಿದೆ. ಇನ್ನೂ ಸಚಿವರಾದ ಸತೀಶ್ ಜಾರಕಿಹೋಳಿ ಎಷ್ಟು ಜನರನ್ನ ಕರೆದೊಯ್ತಾರೊ ಗೊತ್ತಿಲ್ಲ. ಸರ್ಕಾರ ಬಿದ್ದೊಗತ್ತೆ ಅನ್ನೊದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ವಿಧಾನಸೌಧ,ವಿಕಾಸಸೌಧದಲ್ಲಿ ಅರಿಶೀನ-ಕುಂಕುಮಕ್ಕೆ ಬಳಸಬಾರದು ಎಂದು ಆದೇಶ ಹೊರಡಿಸಿರುವ ವಿಚಾರವಾಗಿ ಮಾತನಾಡಿ, ಬಹಳ ಬುದ್ದಿವಂತಿಗೆ ಯಿಂದ ಮಾಡಿದ್ದಾರೆ. ನೇರವಾಗಿ ಅರಿಶಿಣ ಕುಂಕುಮ ಬಳಸಬಾರದು ಅಂತ ಹೇಳಿದ್ರೆ ಸರ್ಕಾರ ಇಷ್ಟೊತ್ತಿಗೆ ಇರ್ತಾ ಇರಲಿಲ್ಲ, ರಾಸಾಯನಿಕ ವಸ್ತುಗಳ ಜೊತೆ ಸೇರಬಾರದು ಎಂದು ಹೇಳಿ ಈ ಆಟ ಆಡುತ್ತಿದ್ದಾರೆ. ಆಡ್ಲಿ ಎಷ್ಟು ದಿನ ಆಡ್ತಾರೆ ಎಂದು ವಾಗ್ದಾಳಿ ನಡೆಸಿದರು.
ಕಲಬುರ್ಗಿಯಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್ ಹೆಸಟು ಬರೆದಿಟ್ಟು ಬಿಜೆಪಿ ಮುಖಂಡ ಆತ್ಮಹತ್ಯೆ ಪ್ರಕರಣದ ಕುರಿತು ಮಾತನಾಡಿ, ನನ್ನ ಹೆಸರು ಬರೆದಿಟ್ಟು ಯಾರೊ ಆತ್ಮಹತ್ಯೆ ಮಾಡಿಕೊಂಡ್ರು, ನಾನು ತಕ್ಷಣ ರಾಜೀನಾಮೆ ಕೊಟ್ಟೆ. ನಾನು ಶರಣಪ್ರಕಾಶ್ರನ್ನ ದೋಷಿ ಅನ್ನಲ್ಲ, ಸಮಾಜದ ಮುಂದೆ ಅವರ ಹೆಸರು ಬರೆದಿಟ್ಟು ಸತ್ತಿರೋದ್ರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ಲಿ, ಆ ಬಳಿಕ ನಿರ್ದೋಷಿ ಅಂತ ಅಗಿ ಬಂದು ನಂತ್ರ ಮಂತ್ರಿ ಆಗ್ಲಿ ಎಂದು ಹೇಳಿದರು.
ನನ್ನ ಹೆಸರು ಬರೆದಿಟ್ಟು ವ್ಯಕ್ತಿ ಸತ್ತಾಗ ಕಾಂಗ್ರೆಸ್ ನವರು ನನ್ನ ರಾಜೀನಾಮೆಗೆ ಪಟ್ಟು ಹಿಡಿಲಿಲ್ಲ. ನಾನೇ ಪ್ರಧಾನಿ ನರೇಂದ್ರ ಮೋದಿ,ಅಮೀತ್ ಶಾ ಅವರಿಗೆ ಹೇಳಿದೆ. ನನ್ನ ಹೆಸರು ಬರೆದಿಟ್ಟು ಸತ್ತಿದ್ದಾನೆ ರಾಜೀನಾಮೆ ತಗೊಳಿ ಅಂದೆ, ಅವರೆ ಎರಡು ದಿನ ಕಾಯಲು ಹೇಳಿದ್ರು. ನಂತರ ನನ್ನ ಬಲವಂತಕ್ಕೆ ರಾಜೀನಾಮೆ ತಗೊಂಡಿದ್ದು, ನಾವು ಸೈಲೆಂಟಾಗಿ ಇರಬೇಕು ಅನ್ನೋದರ ಅರ್ಥ. ನಿಮ್ಮ ಹೆಸರು ಬರೆದಿಟ್ಟಿದ್ದಾನೆ ಅಂದ್ರೆ ಶರಣಪ್ರಕಾಶ್ ಪಾಟೀಲ್ ಅವರೇ ಯೋಚನೆ ಮಾಡಬೇಕು. ಮತ್ರಿ ಸ್ಥಾನದಲ್ಲಿರೋದು ಎಷ್ಟರ ಮಟ್ಟಿಗೆ ಯೋಗ್ಯ ಅಂತ ಎಂದು ಕಿಡಿಕಾರಿದರು.












Click it and Unblock the Notifications