120 ಕಾಂಗ್ರೆಸ್ ಅಭ್ಯರ್ಥಿಗಳು ಫೈನಲ್! ಅನ್ಯ ಪಕ್ಷದವರಿಗಾಗಿ 25 ಸೀಟ್ ರಿಸರ್ವ್; ಮೊದಲ ಪಟ್ಟಿ ರಿಲೀಸ್ ಯಾವಾಗ?
120 ಕ್ಷೇತ್ರದ ಅಭ್ಯರ್ಥಿಗಳನ್ನ ಕಾಂಗ್ರೆಸ್ ಪಕ್ಷವೂ ಅಂತಿಮಗೊಳಿಸಿದೆ.
ಬೆಂಗಳೂರು, ಮಾರ್ಚ್ 9: ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ರಾಜಕೀಯ ಪಕ್ಷಗಳು ಈಗಾಗಲೇ ಹಲವು ಸಮಾವೇಶ ಹಾಗೂ ಯಾತ್ರೆಗಳ ಮೂಲಕ ರಾಜ್ಯಾದ್ಯಂತ ಪ್ರವಾಸವನ್ನ ನಡೆಸುತ್ತಿದ್ದಾರೆ.
ಕಾಂಗ್ರೆಸ್ ರಾಜ್ಯ ಚುನಾವಣಾ ಸಮಿತಿಯು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಈ ಹಿಂದೆ ಕಾಂಗ್ರೆಸ್ ಈಗಾಗಲೇ ಹಲವು ಸಭೆಗಳನ್ನ ನಡೆಸಿದೆ. ಟಿಕೆಟ್ ಫೈನಲ್ ಗೆ ಕಳೆದ ಎರಡು ದಿನಗಳಿಂದ ನಡೆದ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಈಗಾಗಲೇ 120 ಕ್ಷೇತ್ರದ ಅಭ್ಯರ್ಥಿಗಳನ್ನ ಅಂತಿಮಗೊಳಿಸಿದ್ದು, ಈ ಬಾರಿ ಅಧಿಕಾರಕ್ಕೆ ಬರಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್ ಚುನಾವಣಾ ಹೊತ್ತಲಿ ಆಪರೇಷನ್ ಅಸ್ತಕ್ಕೆ ಮುಂದಾಗಿದೆ. ತಮ್ಮ ಅಭ್ಯರ್ಥಿಗಳು ಅಸಮರ್ಧವಾಗಿಲ್ಲ ಕಡೆ ಗೆಲ್ಲುವ ಅನ್ಯ ಪಕ್ಷದ ನಾಯಕರಿಗೆ ಕಾಂಗ್ರೆಸ್ ಗಾಳ ಹಾಕಿದೆ.

ಈಗಾಗಲೇ ಕಾಂಗ್ರೆಸ್ ಸೇರ್ಪಡೆ ಕುರಿತು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಬಿಜೆಪಿ ಹಾಗೂ ಜೆಡಿಎಸ್ ನ ಶಾಸಕರು ಹಾಗೂ ಸಚಿವರನ್ನ ಕರೆ ತರುವ ಪ್ರಯತ್ನವನ್ನ ನಡೆಸಿದೆ. ಹೀಗಾಗಿ ಅನ್ಯ ಪಕ್ಷದಿಂದ ಬರುವ ಸಮರ್ಥರು ನಾಯಕರಿಗೆ ಟಿಕೆಟ್ ನೀಡಲು 25 ರಿಂದ 30 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಮಾಡದೆ ಕಾಯ್ದು ನೋಡುವ ತಂತ್ರಗಾರಿಕೆಯನ್ನ ಕಾಂಗ್ರೆಸ್ ರೂಪಿಸಿದೆ.
ಕಳೆದ ತಿಂಗಳೇ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಹಲವು ಸುತ್ತಿನ ಸಮಾಲೋಚನೆ ಬಳಿಕ ಸಂಭಾವ್ಯರ ಪಟ್ಟಿಯಲ್ಲಿನ ಒಟ್ಟು 120 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಯಿತು. ಈ ಪಟ್ಟಿಯನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ರವಾನಿಸಲಾಗುತ್ತಿದ್ದು, ಹೈಕಮಾಂಡ್ ಅನುಮೋದನೆ ಪಡೆದು ಈ ತಿಂಗಳ 20 ರೊಳಗೆ ಪ್ರಕಟಿಸಲು ನಿರ್ಧರಿಸಲಾಗಿದೆ.
ಇನ್ನೂ ಉಳಿದ 104 ಕ್ಷೇತ್ರಗಳಿಗೆ ಸಂಬಂಧಿಸಿದಂತೆ 2, 3, 4 ಸಂಭಾವ್ಯರ ಹೆಸರುಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಮಾರ್ಚ್ 27ರಂದು ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆಯಲ್ಲಿಈ ತಿಂಗಳಾಂತ್ಯಕ್ಕೆ ಸುಮಾರು 70 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಲು ನಿರ್ಧರಿಸಲಾಗಿದೆ.

ಇನ್ನೂ ಉಳಿದ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳೊಂದಿಗೆ ಚರ್ಚಿಸಿ, ಮನವೊಲಿಸಿ ಒಮ್ಮತದ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಸುವ ಜವಾಬ್ದಾರಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. ಇನ್ನೂ ಕ್ಷೇತ್ರದಲ್ಲಿ ಪಕ್ಷದ ಸಮರ್ಥ ಅಭ್ಯರ್ಥಿಗಳಿಲ್ಲದೇ ಗೆಲ್ಲಬಹುದಾದ ಕ್ಷೇಥ್ರಗಳಲ್ಲಿ ಅನ್ಯ ಪಕ್ಷದ ಸಮರ್ಥ ಅಭ್ಯರ್ಥಿಗಳನ್ನ ಪಕ್ಷಕ್ಕೆ ಬರಮಾಡಿಕೊಳ್ಳುವ ಮೂಲಕ ಟಿಕೆಟ್ ನೀಡುವ ಚಿಂತನೆಯನ್ನ ಕೆಪಿಸಿಸಿ ನಡೆಸಿದೆ.
ಅನ್ಯ ಪಕ್ಷದ ಯಾರನ್ನ ಪಕ್ಷಕ್ಕೆ ಬರಮಾಡಿಕೊಳ್ಳಬೇಕು, ಅನ್ಯ ಪಕ್ಷದವರು ಪಕ್ಷಕ್ಕೆ ಬರುವುದರಿಂದ ಪಕ್ಷ ಹಾಗೂ ಕ್ಷೇತ್ರಕ್ಕೆ ಆಗುವ ಲಾಭ ನಷ್ಟ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಚರ್ಚಿಸಿ, ವರಿಷ್ಠರ ಸಹಮತದೊಂದಿಗೆ ಮುಂದುವರಿಯಬಹುದು ಎಂಬ ತೀರ್ಮಾನಕ್ಕೆ ಸಭೆ ಬಂದಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಇನ್ನೂ ವಿಧಾನ ಪರಿಷತ್ತಿನ ಕಾಂಗ್ರೆಸ್ ನ 5-6 ಜನ ಸದಸ್ಯರು ವಿಧಾನಸಭೆ ಚುನಾವಣೆಗೆ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಪಕ್ಷ ಅಧಿಕಾರಕ್ಕೆ ಬಂದರೆ ಸಚಿವ ಸಂಪುಟದಲ್ಲಿ ಕೆಲ ಮೇಲ್ಮನೆ ಸದಸ್ಯರಿಗೂ ಅವಕಾಶ ಕಲ್ಪಿಸಬಹುದು. ಹಾಗಾಗಿ, ಯು.ಬಿ.ವೆಂಕಟೇಶ್ ಹೊರತುಪಡಿಸಿ ಬೇರೆಯವರಿಗೆ ಅವಕಾಶವಿಲ್ಲಎಂದು ಸಭೆಯಲ್ಲಿ ಸಭೆಯಲ್ಲಿ ತಿರ್ಮಾನಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.












Click it and Unblock the Notifications