ಬಿಹಾರ ಫಲಿತಾಂಶ: ಕಾಂಗ್ರೆಸ್ ಜಾತಿ ಲೆಕ್ಕಾಚಾರ ತಲೆಕೆಳಗೆ, ಕುಂದದ ಪ್ರಧಾನಿ ವರ್ಚಸ್ಸು: ಬಸವರಾಜ ಬೊಮ್ಮಾಯಿ

ಬೆಂಗಳೂರು, ನವೆಂಬರ್ 14: ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಬಿಡುಗಡೆ ಆಗಲಿದೆ. ಮತ ಎಣಿಕೆ ಆರಂಭದಿಂದಲೂ ಮುನ್ನಡೆ ಸಾಧಿಸಿ ಪ್ರಚಂಡ ಗೆಲುವಿನತ್ತ ಸಾಗಿದೆ. 200ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಗೆ ಗೆಲುವು ಸಾಧಿಸಿದೆ. ಈ ಸಂಬಂಧ ಬೆಂಗಳೂರಿನಲ್ಲೂ ಸಿಹಿ ಹಂಚಿ ಸಂಭ್ರಮಿಸಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಬಿಹಾರದಲ್ಲಿ ಕಾಂಗ್ರೆಸ್‌ ಜಾತಿ ಲೆಕ್ಕಾಚಾರ ಸುಳ್ಳು ಎಂದು ಹೇಳಿದರು.

ಬಿಹಾರ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರೀಯತೆ ಲೋಕಸಭೆಯ ಬಳಿಕವೂ ಅಚಲವಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತಾಗಿದೆ. ಮಹಾರಾಷ್ಟ್ರ, ಹರಿಯಾಣ ಹಾಗೂ ಬಿಹಾರದಲ್ಲಿ ಮೋದಿ ಅಲೆ ಮತ್ತೆ ಸ್ಪಷ್ಟವಾಗಿ ಕಂಡುಬಂದಿದೆ. ಕಾಂಗ್ರೆಸ್‌ ಪಕ್ಷ ಬಿಹಾರದಲ್ಲಿ ಜಾತಿ ರಾಜಕಾರಣದ ಲೆಕ್ಕಾಚಾರ ತಮ್ಮ ಪರವಾಗಿ ಕಾಯ್ದುಕೊಂಡಿದ್ದೇವೆ ಎಂದು ಭಾವಿಸಿತ್ತು. ಆದರೆ ಅದು ಸಂಪೂರ್ಣ ಸುಳ್ಳಾಯಿತು ಎಂಬುದನ್ನು ಜನ ತೋರಿಸಿಕೊಟ್ಟಿದ್ದಾರೆ ಎಂದು ಬೊಮ್ಮಾಯಿ ಕಟುವಾಗಿ ಟೀಕಿಸಿದರು.

Congress caste Math Fails in Bihar Election 2025 PM Modi Popularity Stays strong Basavaraj Bommai

ಎಸ್‌ಸಿ, ಎಸ್‌ಟಿಗಳಲ್ಲಿ ಶೇಕಡಾ 80 ಜನರು ಬಿಜೆಪಿಗೆ ಮತ ಹಾಕಿರುವುದು ಕಾಂಗ್ರೆಸ್‌ ಪಕ್ಷದ ಲೆಕ್ಕಾಚಾರಕ್ಕೆ ಗುದ್ದು ಕೊಟ್ಟಿದೆ. ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಮತಗಳು ಕೂಡ ಕಾಂಗ್ರೆಸ್‌ನ ಅತಿಯಾದ ತುಷ್ಟೀಕರಣ ರಾಜಕೀಯದ ವಿರುದ್ಧ ಒಂದಾಗಿವೆ. ರಾಹುಲ್‌ ಗಾಂಧಿ ಮಾಡಿರುವ "ಮತಗಳ್ಳತನ" ಆರೋಪದ ಬಗ್ಗೆ ಮಾತನಾಡಿದ ಅವರು, "ಯಾರು ಕದ್ದರು? ಪುರಾವೆ ಏನು? ಯಾವೊಬ್ಬ ಸೋತ ಅಭ್ಯರ್ಥಿಯೂ ಮತ ಕದ್ದಿದ್ದಾರೆಂದು ಹೇಳಿಲ್ಲ. ರಾಹುಲ್‌ ಗಾಂಧಿಯವರೇ ಎಲ್ಲಾ ರಾಜ್ಯಗಳಲ್ಲಿ ಮತ ಶುದ್ಧೀಕರಣಕ್ಕೆ ಪತ್ರ ಬರೆದಿದ್ದಾರೆ. ಸುಳ್ಳನ್ನು ಸಾವಿರ ಬಾರಿ ಹೇಳಿ ಸತ್ಯ ಮಾಡಲು ಪ್ರಯತ್ನಿಸಿದನ್ನು ಜನ ತಳ್ಳಿ ಹಾಕಿದ್ದಾರೆ ಎಂದು ವಿವರಿಸಿದರು.

ಬಿಹಾರ ಫಲಿತಾಂಶದಿಂದ ಕರ್ನಾಟಕ ಬಿಜೆಪಿಗೆ ಯಾವ ಪಾಠ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಕಾಂಗ್ರೆಸ್‌ ಸರ್ಕಾರದ ಜನವಿರೋಧಿ ಕೆಲಸಗಳ ವಿರುದ್ಧ ನಾವು ಒಂದಾಗಿ ಹೋರಾಡಿದರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಖಂಡಿತ ಬಹುಮತ ಪಡೆಯುತ್ತದೆ ಎಂದು ಆತ್ಮವಿಶ್ವಾಸದಿಂದ ಉತ್ತರಿಸಿದರು. ಚುನಾವಣಾ ವೇಳೆ ಬಾಂಬ್‌ ಸ್ಫೋಟ ನಡೆದ ವಿಷಯದಲ್ಲಿ ಕಾಂಗ್ರೆಸ್‌ ಆರೋಪಗಳ ಬಗ್ಗೆ ಅವರು ಪ್ರತಿಕ್ರಿಯಿಸಿದರು. 'ಬಾಂಬ್‌ ಬ್ಲಾಸ್ಟ್‌ಗೆ ಚುನಾವಣೆಗೆ ಸಂಬಂಧವಿಲ್ಲ. ಕಾಂಗ್ರೆಸ್‌ ಎಲ್ಲ ವಿಷಯದಲ್ಲೂ ರಾಜಕಾರಣ ಮಾಡಲು ನೋಡುತ್ತದೆ. ಜನರು ಮೂರ್ಖರಲ್ಲ' ಎಂದರು.

ಮುಧೋಳದಲ್ಲಿ ಕಬ್ಬು ದರ ಕುರಿತು ರೈತರು ನಡೆಸಿದ ಪ್ರತಿಭಟನೆ ನಡೆದಿದೆ. ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಲಾಗಿದೆ. ಸರ್ಕಾರ ಬೆಳಗಾವಿಯಲ್ಲಿ ತೋರಿಸಿದ ಆಸಕ್ತಿ ಮುಧೋಳದಲ್ಲಿ ತೋರಿಸಿಲ್ಲ. ಸರಿಯಾದ ಸಮಯದಲ್ಲಿ ಮಧ್ಯಪ್ರವೇಶಿಸಿದ್ದರೆ ಗಲಾಟೆ ತಪ್ಪಿಸಬಹುದು. ರೈತರಿಗೆ ಆದ ನಷ್ಟವನ್ನು ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+