Breaking; ಟಿಆರ್‌ಎಸ್‌ನ ಬಿಟೀಮ್ ಕಾಂಗ್ರೆಸ್, ಸಚಿವರ ಟ್ವೀಟ್
ಬೆಂಗಳೂರು, ನವೆಂಬರ್ 25; ತೆಲಂಗಾಣದ ಆಡಳಿತಾರೂಢ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮತ್ತು ಬಿಜೆಪಿ ನಾಯಕರ ಜಟಾಪಟಿ ಮುಂದುವರೆದಿದೆ. ಅದರಲ್ಲೂ ಬಿ. ಎಲ್. ಸಂತೋಷ್ ವಿಚಾರ ಬಂದ ಮೇಲೆ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿವೆ.
ಟಿಆರ್‌ಎಸ್ ಶಾಸಕರ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಇಂಧನ ಸಚಿವ ಸುನೀಲ್ ಕುಮಾರ್ ಟ್ವೀಟ್ ಮಾಡಿದ್ದಾರೆ. 'ಟಿಆರ್‌ಎಸ್ ದಾಖಲು ಮಾಡಿರುವ ಸುಳ್ಳು ದೂರಿಗೆ ಕಾಂಗ್ರೆಸ್ ಪ್ರಚಾರ ನೀಡುತ್ತಿದೆ' ಎಂದು ಎರಡೂ ಪಕ್ಷಗಳ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.
ತೆಲಂಗಾಣದಲ್ಲಿ ಆಪರೇಷನ್ ಕಮಲಕ್ಕೆ ಕಾರ್ಯಾಚರಣೆ ನಡೆಸಲಾಗಿತ್ತು ಎಂಬುದು #TRS ನಿರ್ಮಾಣ ಹಾಗೂ ನಿರ್ದೇಶನದ ಪ್ರಹಸನ.
— Sunil Kumar Karkala (@karkalasunil) November 25, 2022
ಸುಳ್ಳು ಆರೋಪ ಹಾಗೂ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ದೇಶದ ಗಮನ ಸೆಳೆಯಲು ನಡೆಸುತ್ತಿರುವ ಪ್ರಯತ್ನ ಇದಾಗಿದೆ.
(1/2)
'ತೆಲಂಗಾಣದಲ್ಲಿ ಆಪರೇಷನ್ ಕಮಲಕ್ಕೆ ಕಾರ್ಯಾಚರಣೆ ನಡೆಸಲಾಗಿತ್ತು ಎಂಬುದು ಟಿಆರ್‌ಎಸ್ ನಿರ್ಮಾಣ ಹಾಗೂ ನಿರ್ದೇಶನದ ಪ್ರಹಸನ. ಸುಳ್ಳು ಆರೋಪ ಹಾಗೂ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ದೇಶದ ಗಮನ ಸೆಳೆಯಲು ನಡೆಸುತ್ತಿರುವ ಪ್ರಯತ್ನ ಇದಾಗಿದೆ' ಎಂದು ಸಚಿವರು ಹೇಳಿದ್ದಾರೆ.

'ಕಾಂಗ್ರೆಸ್‌ನ ದುಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ, ಟಿಆರ್‌ಎಸ್‌ನ ಬಿ ಟೀಮ್ ರೀತಿಯಲ್ಲಿ ಅದು ವರ್ತಿಸುತ್ತಿದೆ. ಬಿ. ಎಲ್. ಸಂತೋಷ್ ವಿರುದ್ಧ ಟಿಆರ್‌ಎಸ್ ದಾಖಲಿಸಿರುವ ಸುಳ್ಳು ದೂರಿಗೆ ಕಾಂಗ್ರೆಸ್ ಪ್ರಚಾರ ನೀಡುತ್ತಿದೆ. ಓತಿಕ್ಯಾತಕ್ಕೆ ಬೇಲಿಗೂಟ ಸಾಕ್ಷಿ ಎಂಬಂತಾಗಿದೆ ಈ ಮೈತ್ರಿ' ಎಂದು ವ್ಯಂಗ್ಯವಾಡಿದ್ದಾರೆ.
ಲುಕ್ ಔಟ್ ನೋಟಿಸ್; ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಶಾಸಕರ ಖರೀದಿಗೆ ಹಣದ ಆಮಿಷವೊಡ್ಡಲಾಗಿದೆ ಎಂಬ ಆರೋಪದ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ. ಈ ತಂಡ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್‌ಗೆ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿತ್ತು.
ಭಾರತಿ ಧರ್ಮ ಜನಸೇನಾ ಅಧ್ಯಕ್ಷ ತುಷಾರ್ ವೆಲ್ಲಪ್ಪಲ್ಲಿ, ಕೊಚ್ಚಿಯ ಜಗ್ಗು ಕೊಟ್ಟಿಲಿಲ್, ಕರೀಂನಗರದ ಡಿ. ಶ್ರೀನಿವಾಸ್ ವಿರುದ್ಧವೂ ನೋಟಿಸ್ ಜಾರಿಗೊಳಿಸಲಾಗಿದೆ. ಡಿ. ಶ್ರೀನಿವಾಸ್ ಸೋಮವಾರ ಎಸ್ಐಟಿ ವಿಚಾರಣೆ ಎದುರಿಸಿದ್ದಾರೆ.
ತೆಲಂಗಾಣದ ಹೈಕೋರ್ಟ್ ನಿರ್ದೇಶನದಂತೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ನಾಲ್ವರು ಶಾಸಕರ ಖರೀದಿ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ಕೈಗೊಂಡಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್‌ಗೆ 2ನೇ ನೋಟಿಸ್ ನೀಡಲಾಗಿದೆ. ನವೆಂಬರ್ 26 ಅಥವ 28ರಂದು ಎಸ್‌ಐಟಿ ಮುಂದೆ ಹಾಜರಾಗಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಬಿ. ಎಲ್. ಸಂತೋಷ್ ಸೇರಿ ಇತರ ಮೂವರನ್ನು ಎಸ್‌ಐಟಿ ಪ್ರಕರಣದ ಆರೋಪಿಗಳೆಂದು ಹೆಸರಿಸಿದೆ. ಟಿಆರ್‌ಎಸ್ ಶಾಸಕ ರೋಹಿತ್ ರೆಡ್ಡಿ ಅಕ್ಟೋಬರ್ 26ರಂದು ನಾಲ್ವರು ಶಾಸಕರ ಖರೀದಿ ಬಗ್ಗೆ ದೂರು ದಾಖಲಿಸಿದ್ದರು.












Click it and Unblock the Notifications