ವಿಧಾನಪರಿಷತ್ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಬೆಂಗಳೂರು, ಸೆಪ್ಟೆಂಬರ್ 24: ಕರ್ನಾಟಕ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಉಪ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹೆಸರಿಸಿದೆ.
ನಾಮಪತ್ರ ಸಲ್ಲಿಕೆಗೆ ಸೋಮವಾರ(ಸೆಪ್ಟೆಂಬರ್ 24) ಕೊನೆ ದಿನವಾಗಿದೆ. ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ, ಭಾನುವಾರದಂದೇ ಪ್ರಕಟಿಸಿದೆ.
@INCIndia has announced
— Karnataka Congress (@INCKarnataka) September 23, 2018
1. Shri. M C Venugopal
2. Shri. Nazeer Ahmed are the candidates for upcoming MLC by-election in Karnataka.
ಎಂ.ಸಿ. ವೇಣುಗೋಪಾಲ್ ಹಾಗೂ ನಜೀರ್ ಅಹಮದ್ ಅಭ್ಯರ್ಥಿಗಳಾಗಿ ಘೋಷಿತರಾಗಿದ್ದಾರೆ. ನಿವೇದಿತ್ ಆಳ್ವಾ, ಯು. ಬಿ ವೆಂಕಟೇಶ್ ಅವರ ಹೆಸರುಗಳು ಕೂಡಾ ಕೇಳಿ ಬಂದಿತ್ತು. ಇವರಲ್ಲದೆ, ಮುಖ್ಯಮಂತ್ರಿ ಚಂದ್ರು, ಪ್ರಕಾಶ್ ರಾಥೋಡ್, ವಿ.ಆರ್. ಸುದರ್ಶನ್, ಬರಗೂರು ರಾಮಚಂದ್ರಪ್ಪ ಸೇರಿದಂತೆ ಹಲವರ ಹೆಸರು ಕೂಡ ಕೇಳಿಬಂದಿತ್ತು.

ಈ ಪೈಕಿ ನಜೀರ್ ಅಹಮದ್ ಅವರ ಹೆಸರು ಕೊನೆ ಕ್ಷಣದಲ್ಲಿ ಸೇರಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಜಿ ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರ್ನಾಟಕದ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರ ಜತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಭೆ ನಡೆಸಿ, ಅಂತಿಮವಾಗಿ ಹೆಸರುಗಳನ್ನು ಘೋಷಿಸಲಾಗಿದೆ.
#Karnataka MLC Polls.
— Neeraj (@Neeraj_2018) September 23, 2018
Voting on 4th. pic.twitter.com/Hs8GNssgJf
ಸೆ.25ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅ.4ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಅಂದು ಸಂಜೆ 5 ರಿಂದ ಮತ ಎಣಿಕೆ ಆರಂಭವಾಗಲಿದ್ದು, ಅ.6ರೊಳಗೆ ಪ್ರಕ್ರಿಯೆ ಮುಗಿಯಲಿದೆ.
ಮೈತ್ರಿ ಪಕ್ಷಗಳ ಬಳಿ 118 ಶಾಸಕರ ಬೆಂಬಲ ಇದೆ. ಹೀಗಾಗಿ, ಬಿಜೆಪಿ ಮೂರು ಅಭ್ಯರ್ಥಿಗಳನ್ನು ಹೆಸರಿಸಲಿದೆ.












Click it and Unblock the Notifications