Government Employee: ಸರ್ಕಾರಿ ನೌಕರರ KGID ನಿಯಮಗಳನ್ನು ತಿಳಿಯಿರಿ
ಬೆಂಗಳೂರು, ಸೆಪ್ಟೆಂಬರ್ 02: ರಾಜ್ಯ ಸರ್ಕಾರಿ ನೌಕರರಿಗೆ ಅನೇಕ ಸೌಲಭ್ಯಗಳಿವೆ. ಅದರಲ್ಲೂ ಕಡ್ಡಾಯ ಜೀವ ವಿಮಾ ಯೋಜನೆಗೆ ನೌಕರರು ಒಳಪಡುತ್ತಾರೆ. ಆದರೆ ಇದಕ್ಕೆ ಸಹ ಅನೇಕ ನಿಯಮಗಳಿವೆ. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯೊಂದನ್ನು ಹಾಕಲಾಗಿದೆ. ಕಡ್ಡಾಯ ಜೀವ ವಿಮಾ ಯೋಜನೆಗೆ ಒಳಪಡುವ ವಿಧಾನವು ಈ ಕೆಳಕಂಡಂತಿದೆ ಎಂದು ನೌಕರರಿಗೆ ಮಾಹಿತಿ ನೀಡಲಾಗಿದೆ.
ಕರ್ನಾಟಕ ಸರ್ಕಾರದ ಸೇವೆಗೆ ಸೇರ್ಪಡೆಯಾಗುವ ಎಲ್ಲಾ ಶ್ರೇಣಿಯ ಅಧಿಕಾರಿ/ ನೌಕರರು ಕಡ್ಡಾಯವಾಗಿ ಹಾಗೂ ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಭಾರತೀಯ ಅರಣ್ಯ ಸೇವೆಯಲ್ಲಿನ ಕರ್ನಾಟಕ ವೃಂದಕ್ಕೆ ಸೇರಿದವರು ಐಚ್ಛಿಕವಾಗಿ ಕಡ್ಡಾಯ ಜೀವ ವಿಮಾ ಯೋಜನೆಗೆ ಒಳಪಡಲು ಅರ್ಹರಾಗಿರುತ್ತಾರೆ.

ಯೋಜನೆಗೆ ಒಳಪಡುವವರಿಗೆ 18 ವರ್ಷ ವಯಸ್ಸಾಗಿರಬೇಕು. 50 ವರ್ಷ ಮೀರಿರಬಾರದು. ಪ್ರಥಮ ಮಾಸಿಕ ವೇತನ ಪಡೆಯುವ ಮುನ್ನ ವಿಮೆಗೆ ಒಳಪಡಬೇಕು. ಧಾರಣ ಮಾಡಿದ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯ ಸರಾಸರಿ ವೇತನದ ಶೇ. 6.25 ಭಾಗಕ್ಕಿಂತ ಕಡಿಮೆ ಇಲ್ಲದಂತೆ ಮಾಸಿಕ ದರದ ವಿಮಾ ಕಂತನ್ನು ಪಾವತಿಸಬೇಕು.
ಮಾಸಿಕ ವಿಮಾ ಕಂತಿನ ಕನಿಷ್ಠ ದರವನ್ನು ಲೆಕ್ಕ ಮಾಡುವ ವಿಧಾನ. ಉದಾಹರಣೆಗೆ ವೇತನ ಶ್ರೇಣಿ ರೂ.17000-28950 ಸರಾಸರಿ ಲೆಕ್ಕಚಾರ. 17000+28950=45950=22975/-2.ರೂ. 22975 x 6.25% =1435/-100. ರೂ.1435ಕ್ಕೆ ಸಮಿಪದ ದಶಾಂಶಕ್ಕೆ ಪೂರ್ಣಂಕಗೊಳಿಸಬೇಕು. ಆಗ ರೂ.1440ಗಳು.
ಉದಾಹರಣೆ. ವೇತನ ಶ್ರೇಣಿ ರೂ.18600-32600 ಸರಾಸರಿ ಲೆಕ್ಕಚಾರ ರೂ. 18600+32600=51200 = 25600/-2. ರೂ. 25600 x 6.25% = 1600/-
100. ರೂ. 1600.
ಪ್ರಥಮ ವಿಮಾ ಕಂತನ್ನು, ಸರ್ಕಾರಿ ಪಾವತಿಗಳನ್ನು ಸ್ವೀಕರಿಸುವ ಸ್ಥಳೀಯ ಬ್ಯಾಂಕಿನಲ್ಲಿ ದೊರೆಯುವ ಮೂರು ಭಾಗಗಳ ಚಲನ್‌ನಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿಮಾಡಿ ನಗದನ್ನು ಈ ಇಲಾಖೆಯ ಲೆಕ್ಕ ಶೀರ್ಷಿಕ 8011-00-105-101ಗೆ ಪ್ರಾರಂಭಿಕ ಠೇವಣಿಯಾಗಿ ಪಾವತಿಸಿ, ಬ್ಯಾಂಕಿನ ಸ್ವೀಕೃತಿ ಮೊಹರಾದ ನಿಗದಿತ ಎರಡು ಭಾಗ ಚಲನ್‌ಗಳನ್ನು ಹಿಂದಕ್ಕೆ ಪಡೆಯತಕ್ಕದ್ದು. ಪ್ರಾರಂಭಿಕ ಠೇವಣಿ ಪಾವತಿಸಿದ ಚಲನ್ ತೋರಿಸಿ ಇಲಾಖೆಯ ಎಲ್ಲಾ ಕಛೇರಿಗಳಲ್ಲಿ ಉಚಿತವಾಗಿ ದೊರೆಯುವ ಪ್ರಸ್ತಾವನೆ ನಮೂನೆಯನ್ನು ಪಡೆದುಕೊಳ್ಳತಕ್ಕದ್ದು.
* ರೂ. 1000ರೊಳಗಿನ ಪ್ರಾರಂಭಿಕ ಠೇವಣಿಯನ್ನು ಪಾವತಿಸಿದ್ದು, 40 ವರ್ಷ ಮೀರದ ವಯಸ್ಸಿನವರು ವೈದ್ಯೇತರ ಪ್ರಸ್ತಾವನೆಯನ್ನು (ನಾನ್ ಮೆಡಿಕಲ್) ಸಲ್ಲಿಸತಕ್ಕದ್ದು.
* ರೂ. 1000ಮೀರಿದ ಪ್ರಾರಂಭಿಕ ಠೇವಣಿಯನ್ನು ಪಾವತಿಸಿದವರು ಯಾವುದೇ ವಯಸ್ಸಿನವರಾಗಿದ್ದರೂ ವೈದ್ಯಕೀಯ ಪ್ರಸ್ತಾವನೆಯನ್ನು (ಮೆಡಿಕಲ್) ಸಲ್ಲಿಸತಕ್ಕದ್ದು.
* 40 ವರ್ಷ ವಯಸ್ಸು ಮೀರಿದವರು ಯಾವುದೇ ಮೊತ್ತದ ಪ್ರಾರಂಭಿಕ ಠೇವಣಿಯನ್ನು ಪಾವತಿಸಿದ್ದರೂ ವೈದ್ಯಕೀಯ ಪ್ರಸ್ತಾವನೆಯನ್ನು (ಮೆಡಿಕಲ್) ಸಲ್ಲಿಸತಕ್ಕದ್ದು.
* ಪ್ರಸ್ತಾವನೆದಾರರನ್ನು ಪರೀಕ್ಷಿಸುವ ಅರ್ಹ ವೈದ್ಯರಿಗೆ ಇಲಾಖೆಯಿಂದ ನಿಗದಿತ ವೈದ್ಯಕೀಯ ಶುಲ್ಕವನ್ನು ಪಾವತಿಸಲಾಗುತ್ತದೆ.
ಕಡ್ಡಾಯ ವಿಮಾ ಯೋಜನೆಯಲ್ಲಿರುವ ಸೌಲಭ್ಯಗಳು. ನಗದು ರೂಪದಲ್ಲಿ ವಿಮಾಕಂತಿನ ಸಂದಾಯ ಮಾಡುವಿಕೆ. ಸಾಲ ಸೌಲಭ್ಯ. ನಗದು ರೂಪದಲ್ಲಿ ವಿಮಾಕಂತಿನ ಸಂದಾಯ ಮಾಡುವಿಕೆ. ವಿಮಾದಾರರು ಯಾವುದೇ ಕಾರಣದಿಂದ ರಾಜ್ಯ ಸರ್ಕಾರದ ಸೇವೆಯಿಂದ ಬಿಡುಗಡೆಹೊಂದಿದ ಸಂದರ್ಭದಲ್ಲಿ ತಾವು ಹೊಂದಿದ್ದ ಪಾಲಿಸಿಯ ಅವಧಿ ಮುಗಿಯುವವರೆಗೆ ಮುಂದುವರಿಸಿಕೊಂಡು ಹೋಗಲು ಹಾಗೂ ಮಾಸಿಕ ವಿಮಾಕಂತುಗಳನ್ನು ನಗದು ರೂಪದಲ್ಲಿ ಸಂದಾಯ ಮಾಡಲು ನಿಯಮ (17) ರನ್ವಯ ಅವಕಾಶವಿದೆ.
ವಿವಿಧ ಹಕ್ಕು ಇತ್ಯರ್ಥ ಪ್ರಕರಣಗಳು: ಅವಧಿ ಪೂರೈಕೆ ಹಕ್ಕು ಪ್ರಕರಣ, ಮರಣಜನ್ಯ ಹಕ್ಕು ಪ್ರಕರಣ, ವಿಮಾತ್ಯಾಗಮೌಲ್ಯ ಹಕ್ಕು ಪ್ರಕರಣಗಳು.
* ಅವಧಿ ಪೂರೈಕೆ ಹಕ್ಕು ಪ್ರಕರಣ. ಈ ಇಲಾಖೆಯಲ್ಲಿ ನಿಶ್ಚಿತ ಅವಧಿ (ಎನ್‌ಡೋಮೆಂಟ್) ಪಾಲಿಸಿಗಳನ್ನು ಮಾತ್ರ ನೀಡುವುದರಿಂದ ವಿಮಾದಾರರ ವಯಸ್ಸು 55 ವರ್ಷಗಳು ತುಂಬಿದ ದಿನಾಂಕದಂದು ಆತ ಹೊಂದಿದ ಎಲ್ಲಾ ಪಾಲಿಸಿಗಳು ಫಲಪ್ರದಗೊಳ್ಳುತ್ತವೆ. ವಿಮಾದಾರರ ಬಗ್ಗೆ ನಿಗದಿತ ಎಲ್ಲಾ ವಿವರಗಳು ಲಭ್ಯವಾದಲ್ಲಿ ಸಾಮಾನ್ಯವಾಗಿ ಫಲಪ್ರದ ತಿಂಗಳಿನಲ್ಲಿಯೇ ಹಕ್ಕನ್ನು ಇತ್ಯರ್ಥಪಡಿಸಿ ಹುಂಡಿ ನೀಡಲಾಗುತ್ತದೆ.
* ಮರಣಜನ್ಯ ಹಕ್ಕು ಪ್ರಕರಣ. ಪಾಲಿಸಿಗಳು ಫಲಪ್ರದಗೊಳ್ಳುವ ಮುನ್ನವೇ ವಿಮಾದಾರರು ಮರಣಹೊಂದಿದಲ್ಲಿ ವಿಮಾ ಪಾಲಿಸಿಗಳ ಒಟ್ಟು ವಿಮಾ ಮೊತ್ತಕ್ಕೆ ಮರಣದ ಮಾಹೆಯವರೆಗಿನ ಲಾಭಾಂಶ ಸೇರಿಸಿ ಒಟ್ಟು ಮೊತ್ತವನ್ನು ನಾಮ ನಿರ್ದೇಶಿತ ವ್ಯಕ್ತಿಗೆ ಪಾವತಿಮಾಡಲಾಗುವುದು.
* ವಿಮಾ ತ್ಯಾಗ ಮೌಲ್ಯ ಹಕ್ಕು ಪ್ರಕರಣ. ವಿಮಾದಾರರು ಪಾಲಿಸಿಗಳ ಅವಧಿ ಪೂರ್ಣಗೊಳ್ಳುವ ಮೊದಲೇ (ಫಲಪ್ರದಗೊಳ್ಳುವ ಮೊದಲು) ಸರ್ಕಾರಿ ಸೇವೆಯಿಂದ ಬಿಡುಗಡೆ ಹೊಂದಿದಲ್ಲಿ, (ಅಂದರೆ ಸ್ವಯಂ ನಿವೃತ್ತಿ, ಕಡ್ಡಾಯ ನಿವೃತ್ತಿ, ವಜಾ, ರಾಜೀನಾಮೆ, ಇತರೆ) ಅಂತಹ ವಿಮಾದಾರರು ತಾವು ಹೊಂದಿರುವ ಪಾಲಿಸಿಗಳನ್ನು ಫಲಪ್ರದಗೊಳ್ಳುವವರೆಗೆ ವಿಮಾಕಂತನ್ನು ನಗದಿನಲ್ಲಿ ಪಾವತಿಸಿ ಮುಂದುವರಿಸಿಕೊಂಡು ಹೋಗಬಹುದು (ಇದಕ್ಕೆ ಸರ್ಕಾರಿ ಸೇವೆಯಿಂದ ಬಿಡುಗಡೆ ಹೊಂದಿದ 12 ತಿಂಗಳೊಳಗೆ ಇಲಾಖೆಯಿಂದ ಅನುಮತಿಯನ್ನು ಪಡೆಯುವುದು ಕಡ್ಡಾಯ. ಪಾಲಿಸಿ ಮುಂದುವರಿಸುವ ಇಚ್ಛೆಯಿಲ್ಲದಿದ್ದಲ್ಲಿ ಪಾಲಿಸಿಯ ಮೌಲ್ಯವನ್ನು ಬಿಟ್ಟುಕೊಟ್ಟು ನಗದನ್ನು ಪಡೆದುಕೊಳ್ಳಬಹುದು) ಇದಕ್ಕೆ ವಿಮಾ ತ್ಯಾಗ ಮೌಲ್ಯ ಹಕ್ಕೆಂದು ಕರೆಯುವರು.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ












Click it and Unblock the Notifications