'ನಮ್ಮಲ್ಲಿ ಸಿಕ್ ಲೀವ್, ಪರ್ಸನಲ್ ಲೀವ್ ಇಲ್ಲ': ಫ್ಲೆಕ್ಸಿಬಲ್ ರಜೆ ನೀತಿ ಹೆಸರಲ್ಲಿ ಉದ್ಯೋಗಿಗಳಿಗೆ ಶಾಕ್ ನೀಡಿದ ಕಂಪನಿ

ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದ ಮಹಿಳೆಯೊಬ್ಬರಿಗೆ ಎಚ್‌ಆರ್ ಕಡೆಯಿಂದ ಬಂದ ಕರೆಯೊಂದು ಇದೀಗ ಆನ್‌ಲೈನ್‌ನಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಕಂಪನಿಯೊಂದರ ರಜೆ ನೀತಿಯ ಬಗ್ಗೆ ಕೇಳಿ ದಂಗಾದ ಆಕೆ, ಉದ್ಯೋಗಿಗಳಿಗೆ ಸಿಕ್ ಲೀವ್ ಅಥವಾ ವೈಯಕ್ತಿಕ ರಜೆ ತೆಗೆದುಕೊಳ್ಳಲು ಅವಕಾಶವೇ ಇಲ್ಲ ಎಂದು ಹೇಳಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಉದ್ಯೋಗಿಗಳಿಗೆ ನೀಡುವ ರಜೆಗಳನ್ನು 'ಫ್ಲೆಕ್ಸಿಬಲ್ ' ನೀತಿ ಎಂದು ಎಚ್‌ಆರ್ ಕರೆದಿದ್ದರೂ, ಅದರ ಹಿಂದಿನ ಅಸಲಿಯತ್ತು ಅನೇಕ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.

ಉಪಾಸನಾ ಎಂಬುವವರು ಲಿಂಕ್ಡ್‌ಇನ್‌ನಲ್ಲಿ ತಮ್ಮ ಈ ಕಹಿ ಅನುಭವವನ್ನು ಬರೆದುಕೊಂಡಿದ್ದಾರೆ. ಉದ್ಯೋಗಾವಕಾಶದ ಬಗ್ಗೆ ಮಾತನಾಡಲು ಕಂಪನಿಯೊಂದರ ಎಚ್‌ಆರ್ ಕರೆ ಮಾಡಿದ್ದರು. ಕಂಪನಿಯ ಹೆಸರನ್ನು ಬಹಿರಂಗಪಡಿಸದ ಉಪಾಸನಾ, ಈ ಸಂಭಾಷಣೆ ತಮಗೆ ತೀವ್ರ ಅಚ್ಚರಿ ಮತ್ತು ಆಘಾತ ಮೂಡಿಸಿದ್ದರಿಂದ ಇದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

Company

ಕರೆಯ ಆರಂಭದಲ್ಲಿ ಎಲ್ಲವೂ ಸಹಜವಾಗಿಯೇ ಇತ್ತು. ಸುಮಾರು 10 ನಿಮಿಷಗಳ ಕಾಲ ಎಚ್‌ಆರ್ ಕಂಪನಿ, ಅದರ ಗ್ರಾಹಕರು ಮತ್ತು ಅದರ ಭವಿಷ್ಯದ ಯೋಜನೆಗಳ ಬಗ್ಗೆ ಬಹಳ ಚೆನ್ನಾಗಿ ವಿವರಿಸಿದರು. ಆದರೆ, ಉದ್ಯೋಗಿಗಳಿಗೆ ಸಿಗುವ ಸೌಲಭ್ಯಗಳು ಮತ್ತು ರಜೆ ನೀತಿಯ ವಿಷಯ ಬಂದಾಗ ಕಥೆ ಸಂಪೂರ್ಣ ಬದಲಾಯಿತು ಎಂದು ಅವರು ಹೇಳಿದ್ದಾರೆ.

"ನಮ್ಮದು ಫ್ಲೆಕ್ಸಿಬಲ್ ರಜೆ ನೀತಿ. ಹಬ್ಬಗಳಂದು ನಿಮಗೆ ರಜೆ ಸಿಗುತ್ತದೆ. ಆದರೆ, ಉದ್ಯೋಗಿಗಳು ಅನಾರೋಗ್ಯದ ರಜೆ ಅಥವಾ ವೈಯಕ್ತಿಕ ರಜೆ ತೆಗೆದುಕೊಳ್ಳುವುದನ್ನು ನಮ್ಮ ಕಂಪನಿ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ" ಎಂದು ಎಚ್‌ಆರ್ ಅಧಿಕಾರಿ ಹೇಳಿದ್ದಾಗಿ ಉಪಾಸನಾ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ, ಒಂದು ವೇಳೆ ಯಾವುದೇ ಉದ್ಯೋಗಿ ವೈಯಕ್ತಿಕ ಕಾರಣಗಳಿಗಾಗಿ ರಜೆ ತೆಗೆದುಕೊಂಡರೆ, ಅದನ್ನು ಕಡ್ಡಾಯವಾಗಿ 'ಲಾಸ್ ಆಫ್ ಪೇ' ಎಂದು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದರು.

ಇದನ್ನು ಮತ್ತಷ್ಟು ವಿವರಿಸಿದ ಅವರು, "ಉದಾಹರಣೆಗೆ, ನಿಮಗೆ ತಿಂಗಳಿಗೆ 10,000 ರೂ. ಸಂಬಳ ಬರುತ್ತಿದ್ದರೆ, ನೀವು ಒಂದು ದಿನ ರಜೆ ತೆಗೆದುಕೊಂಡರೆ ಅದಕ್ಕಾಗಿ ನಿಮ್ಮ ಸಂಬಳದಲ್ಲಿ 1,000 ರೂ. ಕಡಿತಗೊಳಿಸಲಾಗುತ್ತದೆ" ಎಂದರಂತೆ. ಈ ಮಾತು ಕೇಳಿ ತೀವ್ರ ಆಘಾತಕ್ಕೊಳಗಾದ ಉಪಾಸನಾ, ಯೋಚಿಸಲು ಸ್ವಲ್ಪ ಸಮಯ ಬೇಕು ಎಂದು ಹೇಳಿ ಕರೆಯನ್ನು ಕಡಿತಗೊಳಿಸಿದರು.

"ಕಾರ್ಮಿಕ ಕಾನೂನುಗಳು ಕಟ್ಟುನಿಟ್ಟಾಗಿ ಇಲ್ಲದ ಕಾರಣ ಕಂಪನಿಗಳು ಉದ್ಯೋಗಿಗಳನ್ನು ಈ ಮಟ್ಟಿಗೆ ಶೋಷಣೆ ಮಾಡುತ್ತಿರುವುದು ನಿಜಕ್ಕೂ ಆಘಾತ ತಂದಿದೆ. ಇದಕ್ಕೆಲ್ಲ ಕಾನೂನಿನಲ್ಲಿ ಹೇಗೆ ಅವಕಾಶ ನೀಡಲಾಗಿದೆ?" ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರ ಆಕ್ರೋಶ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಅನೇಕ ವೃತ್ತಿಪರರು ಆನ್‌ಲೈನ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಈ ರಜೆ ನೀತಿಯೇ ನಿಜಕ್ಕೂ ಸಿಕ್ ಆಗಿದೆ!" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಇದು ಅಚ್ಚರಿಗಿಂತ ಹೆಚ್ಚು ಆಘಾತಕಾರಿಯಾಗಿದೆ. ರಜೆಗಳು ಯಾವುದೇ ಉಪಕಾರ ಅಥವಾ ಬಹುಮಾನವಲ್ಲ, ಮೂಲಭೂತ ಸಿಕ್ ಲೀವ್ ಕಡ್ಡಾಯವಾಗಿರುತ್ತದೆ. ದಿನಕ್ಕೆ 1,000 ರೂ. ಕಡಿತ ಮಾಡಲು ಅವರು ಲೆಕ್ಕಾಚಾರ ಮಾಡುವುದಾದರೂ ಹೇಗೆ?" ಎಂದು ಕಿಡಿಕಾರಿದ್ದಾರೆ.

"ಭಾರತದ ಎಲ್ಲಾ ರಾಜ್ಯಗಳಲ್ಲೂ ಅನಾರೋಗ್ಯದ ರಜೆ ನೀಡುವುದು ಕಡ್ಡಾಯ" ಎಂದು ಮತ್ತೊಬ್ಬರು ನೆನಪಿಸಿದ್ದಾರೆ. "ಇದು ಹೆಚ್ಚಿನ ಭಾರತೀಯ ಸಂಸ್ಥೆಗಳ ವಾಸ್ತವ ಸ್ಥಿತಿ" ಎಂದು ಹಲವರು ಒಪ್ಪಿಕೊಂಡಿದ್ದಾರೆ. ಇನ್ನು ಕೆಲವರು, "ಎಲ್ಲಾ ರಜೆಗಳಿಗೂ ಸಂಬಳ ಕಡಿತ ಮಾಡುವುದಾದರೆ, ಅದನ್ನು 'ಫ್ಲೆಕ್ಸಿಬಲ್ ರಜೆ ನೀತಿ' ಎಂದು ಕರೆಯುವುದು ಹಾಸ್ಯಾಸ್ಪದ. ಸಂಬಳ ಕೊಡದಿರಲು ನಿಮಗೆ ಆಯ್ಕೆ ಇದೆ ಎಂಬ ಕಾರಣಕ್ಕೆ ಅದನ್ನು 'ಕಾರ್ಯಕ್ಷಮತೆ ಆಧಾರಿತ ಸಂಬಳ' ಎಂದು ಕರೆದಂತಿದೆ" ಎಂದು ಕಂಪನಿಯ ನೀತಿಯನ್ನು ಲೇವಡಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+