ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 20 ರಂದು ಕಾಮೆಡ್‌-ಕೆ ಪ್ರವೇಶ ಪರೀಕ್ಷೆ, ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

|
Google Oneindia Kannada News

ಬೆಂಗಳೂರು, ಮಾರ್ಚ್ 19: ಕಾಮೆಡ್‌-ಕೆ ಪ್ರವೇಶ ಪರೀಕ್ಷಾ ವೇಳಾಪಟ್ಟಿ ಶುಕ್ರವಾರ ಪ್ರಕಟಗೊಂಡಿದೆ.

ಖಾಸಗಿ ಕಾಲೇಜುಗಳಲ್ಲಿನ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತವೈದ್ಯಕೀಯ ಸೀಟುಗಳ ಭರ್ತಿಗಾಗಿ ನಡೆಸಲಾಗುವ ಕಾಮೆಡ್-ಕೆ ಪ್ರವೇಶ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ಪರಿಷ್ಕೃತ ವೇಳಾಪಟ್ಟಿ ಪ್ರಕಟದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಜೂನ್ 20ರಿಂದ ಕಾಮೆಡ್ ಕೆ ಪ್ರವೇಶ ಪರೀಕ್ಷೆಗಳು ಆರಂಭವಾಗಲಿದ್ದು, ಮಾರ್ಚ್ 22ರಿಂದ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

 COMED-K Exams On June 20, Here Is The Full Timetable

ಈ ಕುರಿತು ಕಾಮೆಡ್-ಕೆ ಕಾರ್ಯಕಾರಿ ಕಾರ್ಯದರ್ಶಿ ಡಾ.ಕುಮಾರ್ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಕಾಮೆಡ್-ಕೆ ಪರೀಕ್ಷೆಯನ್ನು ಜೂನ್ 20ರಂದು ನಡೆಸಲಾಗುತ್ತದೆ.

150ಕ್ಕೂ ಹೆಚ್ಚು ನಗರಗಳಲ್ಲಿನ, 400ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಕಾಮೆಡ್-ಕೆ ಪರೀಕ್ಷೆ ನಡೆಯಲಿದೆ. ಈ ವರ್ಷ ಸುಮಾರು 80 ಸಾವಿರ ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಸಾಧ್ಯತೆ. ಈ ಪೈಕಿ ಸರಾಸರಿ ಸುಮಾರು 8 ರಿಂದ 9 ಸಾವಿರ ಮಂದಿ ವಿದ್ಯಾರ್ಥಿಗಳು ಹಾಜರಾತಿ ಪಡೆಯುವ ಸಾಧ್ಯತೆ ಇದೆ ಎಂದು ಹೇಳಿದರು.

ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘ KUPECA ದಲ್ಲಿನ 180 ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು, ದೇಶದ 30 ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ನೇಮಕಾತಿ ನಡೆಯಲಿದೆ. ನಾಲ್ಕು ಹಂತಗಳಲ್ಲಿ ಆನ್ ಲೈನ್ ಕೌನ್ಸೆಲಿಂಗ್ ಇರಲಿದೆ ಎಂದು ಹೇಳಲಾಗಿದೆ.

ಅಂತೆಯೇ ಜೂನ್ 20ರಂದು ನಡೆಯಲಿರುವಂತ ಕಾಮೆಡ್-ಕೆ ಪ್ರವೇಶ ಪರೀಕ್ಷೆಗಾಗಿ ಅರ್ಹ ವಿದ್ಯಾರ್ಥಿಗಳು ಮಾರ್ಚ್ 22 ರಿಂದ ಮೇ.20ರವರೆಗೆ www.comedk.org ಮೂಲಕ ಅರ್ಜಿ ಸಲ್ಲಿಸಬುದು.

Recommended Video

ವಿದ್ಯಾರ್ಥಿನಿಗೆ ಕೊರೊನಾ ಹಿನ್ನೆಲೆ, ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದ ಆಕೆಯ ಸ್ನೇಹಿತರು | Oneindia Kannada

ಪರೀಕ್ಷಾ ವೇಳಾಪಟ್ಟಿ ಹೀಗಿದೆ
ಮಾರ್ಚ್ 22 - ಕಾಮೆಡ್ ಕೆ / ಯುನಿ-ಗೇಜ್ ಕ್ಕೆ ಅರ್ಜಿ ಸಲ್ಲಿಸುವಿಕೆ ಪ್ರಾರಂಭ
ಏಪ್ರಿಲ್ 15 - ಆನ್‌ ಲೈನ್‌ನಲ್ಲಿ ತರಬೇತಿ ಪರೀಕ್ಷೆ
ಮೇ 20 - ಆನ್‌ಲೈನ್ ಪಾವತಿ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಜೂನ್ 20 - ಎರಡು ಸೆಷನ್‌ಗಳಲ್ಲಿ ಕಾಮೆಡ್ ಕೆ / ಯುನಿ-ಗೇಜ್ ಪರೀಕ್ಷೆ ಬೆಳಗ್ಗೆ 9 ರಿಂದ ಮಧ್ಯಾಹ್ನ 12, ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ
ಜೂನ್ 24 - ತಾತ್ಕಾಲಿಕ ಕೀ ಆನ್ಸರ್ (ಉತ್ತರಗಳು) ಬಿಡುಗಡೆ
ಜೂನ್ 26 - ಆಕ್ಷೇಪಣೆಗಳ ಸಲ್ಲಿಕೆಗೆ ಕೊನೆಯ ದಿನ
ಜುಲೈ 1 - ಅಂತಿಮ ಉತ್ತರ ಕೀ ಆನ್ಸರ್ ಗಳ ಬಿಡುಗಡೆ
ಜುಲೈ 6 - ಟೆಸ್ಟ್ ಸ್ಕೋರ್ ಕಾರ್ಡ್ / ಸ್ಥಾನ ಪಟ್ಟಿ ಬಿಡುಗಡೆ

English summary
The Consortium of Medical, Engineering and Dental Colleges of Karnataka Under Graduate Entrance Test (COMED-K UGET) and Uni-GAUGE entrance examination will be held on June 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X