Coconut Shell: ತೆಂಗಿನ ಚಿಪ್ಪು 1,800 ರೂಪಾಯಿಗೆ ಮಾರಾಟ..

Coconut Shell: ಇಷ್ಟು ದಿನ ಕೊಬ್ಬರಿ ಧಾರಣೆ ಏರಿಕೆ ಆಗುತ್ತಲಿತ್ತು. ಆದರೆ ಇದೀಗ ಒಲೆಗೆ ಇಡಲು ಹಾಗೂ ಬಿಸಾಡುತ್ತಿದ್ದ ಬಳಕೆ ಮಾಡುತ್ತಿದ್ದ ತೆಂಗಿನ ಚಿಪ್ಪಿಗೂ ಬೇಡಿಕೆ ಹೆಚ್ಚಾಗಿದೆ. ಹಾಗಾದ್ರೆ ಸಂಪೂರ್ಣ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಪ್ರಸ್ತುತ ತುಮಕೂರು ಜಿಲ್ಲೆಯ ತಿಪಟೂರು ಎಪಿಎಂಸಿಯಲ್ಲಿ ಮಾರುಕಟ್ಟೆಯಲ್ಲಿ ಕೇವಲ ಒಣ ಕೊಬ್ಬರಿ ಮಾತ್ರವಲ್ಲದೆ, ತೆಂಗಿನ ವಿವಿಧ ಉಪ ಉತ್ಪನ್ನಗಳಿಗೂ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಿರುವುದರಿಂದ ತೆಂಗಿನ ಪ್ರತಿಯೊಂದು ಭಾಗಕ್ಕೂ ಉತ್ತಮ ಬೆಲೆ ಸಿಗುತ್ತಿದ್ದು, ಇದು ತೆಂಗು ಬೆಳೆಗಾರರ ಪಾಲಿಗೆ ಆದಾಯ ಹೆಚ್ಚಿಸಿಕೊಳ್ಳಲು ಪ್ರಮುಖ ಮಾರ್ಗವಾಗಿದೆ ಎಂದು ಹೇಳಬಹುದು.

Coconut Shell Price Soars Sell at rs 50 kg Fetches 1 800 for 1000 in Tiptur Know details

ಯಾವುದಕ್ಕೆಲ್ಲಾ ಚಿಪ್ಪಿನ ಬಳಕೆ?

ಸಾಮಾನ್ಯವಾಗಿ ತೆಂಗಿನಕಾಯಿ ಸುಲಿದ ನಂತರ ಉಳಿಯುವ ಸಿಪ್ಪೆ ಮತ್ತು ಕೊಬ್ಬರಿ ತೆಗೆದ ಮೇಲಿನ ಚಿಪ್ಪನ್ನು ಹೆಚ್ಚಿನ ಭಾಗಗಳಲ್ಲಿ ತ್ಯಾಜ್ಯವೆಂದೇ ಪರಿಗಣಿಸಲಾಗುತ್ತಿತ್ತು. ಆದರೆ ಇದೀಗ ಮಾರುಕಟ್ಟೆಯಲ್ಲಿ ಇವುಗಳಿಗೂ ಉತ್ತಮ ಮೌಲ್ಯ ದೊರೆಯುತ್ತಿದೆ. ಪ್ರಸ್ತುತ ಚಿಲ್ಲರೆ ಹಾಗೂ ಸಗಟು ಮಾರುಕಟ್ಟೆಯಲ್ಲಿ ಕೊಬ್ಬರಿ ಚಿಪ್ಪಿನ ದರವು ಪ್ರತಿ ಕೆ.ಜಿ.ಗೆ ₹40 ರಿಂದ 50 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಸಕ್ರಿಯ ಇಂಧನ, ಇದ್ದಿಲು ಹಾಗೂ ಕೈಗಾರಿಕಾ ಬಳಕೆಗೆ ಕೊಬ್ಬರಿ ಚಿಪ್ಪಿಗೆ ಬೇಡಿಕೆ ಹೆಚ್ಚಿರುವುದೇ ಈ ದರ ಏರಿಕೆಗೆ ಮುಖ್ಯ ಕಾರಣವಾಗಿದೆ.

ತೆಂಗಿನ ಚಿಪ್ಪಿಗೆ 1,800 ರೂಪಾಯಿವರೆಗೆ ದರ..

ಅಲ್ಲದೆ ಹಗ್ಗ ತಯಾರಿಕೆ, ಕೋಕೊ ಪೀಟ್ (ಗೊಬ್ಬರ) ಹಾಗೂ ಹಾಸಿಗೆ ತಯಾರಿಕಾ ಘಟಕಗಳಲ್ಲಿ ಪ್ರಮುಖ ಕಚ್ಚಾವಸ್ತುವಾಗಿ ಬಳಕೆಯಾಗುವ ತೆಂಗಿನ ಸಿಪ್ಪೆಗೂ ಮಾರುಕಟ್ಟೆಯಲ್ಲಿ ಉತ್ತಮ ದರ ನಿಗದಿಯಾಗಿದೆ. ಪ್ರತಿ 1,000 ಕೊಬ್ಬರಿ ಅಥವಾ ತೆಂಗಿನ ಸಿಪ್ಪೆಗೆ 1,500 ರೂಪಾಯಿಯಿಂದ 1,800 ರೂಪಾಯಿವರೆಗೆ ದರ ಸಿಗುತ್ತಿದ್ದು, ರೈತರಿಗೆ ಹೆಚ್ಚುವರಿ ಆದಾಯ ತಂದುಕೊಡುತ್ತಿದೆ.

ತೆಂಗು ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದ ದರ ಏರಿಕೆ

ಮತ್ತೊಂದೆಡೆ ಚಿಲ್ಲರೆ ಮಾರುಕಟ್ಟೆಯಲ್ಲಿ ಹಸಿ ತೆಂಗಿನಕಾಯಿಯ ಕೊರತೆ ಕಂಡುಬರುತ್ತಿದ್ದು, ಬೆಲೆಯಲ್ಲೂ ದಾಖಲೆಯ ಏರಿಕೆಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಗುಣಮಟ್ಟಕ್ಕೆ ಅನುಗುಣವಾಗಿ ತೆಂಗಿನಕಾಯಿ ಒಂದಕ್ಕೆ 35ರಿಂದ 45 ರೂಪಾಯಿವರೆಗೆ ಮಾರಾಟ ಆಗುತ್ತಿದೆ. ಸಾಲು ಹಬ್ಬಗಳು ಹಾಗೂ ಶುಭ ಸಮಾರಂಭಗಳ ಹಿನ್ನೆಲೆಯಲ್ಲಿ ತೆಂಗಿನಕಾಯಿಗೆ ಬೇಡಿಕೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ದರ ಏರಿಕೆಗೆ ಕಾರಣಗಳು, ಎದುರಾಗಿರುವ ಸವಾಲುಗಳು

ಮಳೆಯ ಅಭಾವ, ಅಂತರ್ಜಲ ಮಟ್ಟ ಕುಸಿತ ಹಾಗೂ ತೆಂಗಿನ ಮರಗಳಿಗೆ ತಗುಲಿದ ಕೀಟಬಾಧೆ ಮತ್ತು ರೋಗಗಳಿಂದಾಗಿ ದೇಶಾದ್ಯಂತ ತೆಂಗಿನ ಇಳುವರಿಯಲ್ಲಿ ಗಮನಾರ್ಹ ಇಳಿಕೆಯಾಗಿದೆ. ಮಾರುಕಟ್ಟೆಗೆ ತೆಂಗು ಮತ್ತು ಕೊಬ್ಬರಿಯ ಪೂರೈಕೆ ಕಡಿಮೆ ಆಗಿದ್ದರಿಂದ ಉಪ ಉತ್ಪನ್ನಗಳ ಬೆಲೆಯೂ ಏರಿಕೆಯಾಗಿದೆ.

ತೆಂಗಿನ ಚಿಪ್ಪಿಗೆ ಮತ್ತಷ್ಟು ದರ ಹೆಚ್ಚಾಗುವ ಭರವಸೆ

ಆದರೆ ಈ ರೀತಿ ತೆಂಗಿನ ಉತ್ಪನ್ನಗಳ ಬೆಲೆ ಏರಿಕೆ ಆಗುತ್ತಿರುವುದು ರೈತರಿಗೆ ನೆಮ್ಮದಿ ತಂದಿದೆ. ಆದರೂ ಮತ್ತೊಂದೆಡೆ ಕೃಷಿ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವುದು ಹೊಸ ಸವಾಲಾಗಿ ಪರಿಣಮಿಸಿದೆ. ತೆಂಗು ಕೀಳುವ ಆಳುಗಳ ಕೊರತೆ, ಕೊಬ್ಬರಿ ಸುಲಿಯುವ ಕಾರ್ಮಿಕರ ಕೂಲಿ ದರ ಏರಿಕೆ ಹಾಗೂ ಗೊಬ್ಬರದ ವೆಚ್ಚ ಹೆಚ್ಚಾಗಿರುವುದು ರೈತರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಇಷ್ಟೆಲ್ಲಾ ಸವಾಲುಗಳ ನಡುವೆಯೂ ತೆಂಗಿನ ಮರದ ಪ್ರತಿಯೊಂದು ಭಾಗಕ್ಕೂ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿರುವುದು ಪ್ರಸ್ತುತ ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರಿಗೆ ಆರ್ಥಿಕವಾಗಿ ಕೊಂಚ ಮಟ್ಟಿನ ನೆಮ್ಮದಿ ನೀಡಿದೆ. ಒಟ್ಟಿನಲ್ಲಿ ಹೇಳುವುದಾದರೆ ತೆಂಗಿನ ಚಿಪ್ಪಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+