ಮಾರ್ಚ್ 4 ಸಮನ್ವಯ ಸಮಿತಿ ಸಭೆ: ಸೀಟು ಹಂಚಿಕೆ ಚರ್ಚೆ
ಬೆಂಗಳೂರು, ಫೆಬ್ರವರಿ 27: ಜೆಡಿಎಸ್-ಕಾಂಗ್ರೆಸ್ ಮುಖಂಡರ ನಡುವಿನ ಸಮನ್ವಯ ಸಮಿತಿ ಸಭೆಯು ಮಾರ್ಚ್ 04ಕ್ಕೆ ನಡೆಯಲಿದ್ದು, ಲೋಕಸಭೆ ಸೀಟು ಹಂಚಿಕೆ ವಿಚಾರವಾಗಿ ಮಹತ್ವದ ಚರ್ಚೆ ನಡೆಯಲಿದೆ.
ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಕುಮಾರಸ್ವಾಮಿ, ಡಾನಿಶ್ ಅಲಿ, ಪರಮೇಶ್ವರ್, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಭಾಗವಹಿಸಲಿದ್ದಾರೆ.
ಸಭೆಯಲ್ಲಿ ಲೋಕಸಭೆ ಸೀಟು ಹಂಚಿಕೆ ಬಗ್ಗೆ ಅತಿ ಮಹತ್ವದ ಸಭೆ ನಡೆಯಲಿದೆ. ಈಗಾಗಲೇ ದೇವೇಗೌಡ ಅವರೊಂದಿಗೆ ಪ್ರಾಥಮಿಕ ಹಂತದ ಮಾತುಕತೆಗಳು ನಡೆದಿವೆ.

ವೇಣುಗೋಪಾಲ್ ಅವರು ಸಹ ಸಭೆಯಲ್ಲಿ ಇರಲಿದ್ದು, ಅಂದು ಲೋಕಸಭೆ ಚುನಾವಣೆ ಪ್ರಚಾರ ಮತ್ತು ಸೀಟು ಹಂಚಿಕೆ ಬಗ್ಗೆ ಬಹುತೇಕ ನಿರ್ಣಯ ಆಗಲಿವೆ.
ಮಂಡ್ಯ ಲೋಕಸಭೆ ಸೀಟಿನ ಬಗ್ಗೆ ಸುಮಲತಾ ಅವರ ಸ್ಪರ್ಧೆಯ ಬಗ್ಗೆಯೂ ಚರ್ಚೆ ಆಗಲಿದ್ದು, ಸುಮಲತಾ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡುವಂತೆ ಜೆಡಿಎಸ್ ಮನವಿ ಮಾಡುವ ಸಾಧ್ಯತೆ ಇದೆ.












Click it and Unblock the Notifications