'ಕಾವೇರಿ'ಯಿಂದ ವಾಸ್ತವ್ಯ ಬದಲಿಸಲಿರುವ ಯಡಿಯೂರಪ್ಪ?
ಬೆಂಗಳೂರು, ಸೆಪ್ಟೆಂಬರ್ 08: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಖಾಸಗಿ ನಿವಾಸ 'ಧವಳಗಿರಿ'ಗೆ ವಾಸ್ತವ್ಯ ಬದಲಾಯಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಸೆಪ್ಟೆಂಬರ್ 17ರ ಅಮಾವಾಸ್ಯೆ ಬಳಿಕ ಅವರು 'ಕಾವೇರಿ' ತೊರೆಯಲಿದ್ದಾರೆ?.
Recommended Video
ಯಡಿಯೂರಪ್ಪ ಮುಖ್ಯಮಂತ್ರಿ ಆದ ಬಳಿಕ ಸುಮಾರು ಏಳು ತಿಂಗಳ ಕಾಲ ಡಾಲರ್ಸ್ ಕಾಲೋನಿಯ 'ಧವಳಗಿರಿ' ಖಾಸಗಿ ನಿವಾಸದಲ್ಲಿಯೇ ಇದ್ದರು. ಬಳಿಕ ಫೆಬ್ರವರಿಯಲ್ಲಿ ಗೃಹ ಕಚೇರಿ 'ಕೃಷ್ಣಾ' ಪಕ್ಕದ 'ಕಾವೇರಿ'ಗೆ ವಾಸ್ತವ್ಯ ಬದಲಿಸಿದ್ದರು.
ವಾಸ್ತು ತಜ್ಞರು, ಪೊಲೀಸರ ಮನವಿ ಹಿನ್ನಲೆಯಲ್ಲಿ ಯಡಿಯೂರಪ್ಪ ಗೃಹ ಕಚೇರಿ ಪಕ್ಕದ 'ಕಾವೇರಿ'ಗೆ ಆಗಮಿಸಿದ್ದರು. ಆದರೆ, ಈಗ ಪುನಃ ಧವಳಗಿರಿಯಲ್ಲಿ ಇರಲು ಬಯಸುತ್ತಿದ್ದಾರೆ. 'ಕಾವೇರಿ'ಯನ್ನು ಹಾಗೆಯೇ ಉಳಿಸಿಕೊಳ್ಳಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಗೆ 'ಕಾವೇರಿ' ಅದೃಷ್ಟದ ನಿವಾಸವಾಗಿತ್ತು. ಮುಖ್ಯಮಂತ್ರಿಯಾದ ದಿನದಿಂದ ಅಲ್ಲೇ ಅವರು ವಾಸ್ತವ್ಯ ಹೂಡಿದ್ದರು. ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದರೂ ಸಿದ್ದರಾಮಯ್ಯ 'ಕಾವೇರಿ' ಬಿಟ್ಟುಕೊಟ್ಟಿರಲಿಲ್ಲ.

'ಕಾವೇರಿ' ನಿವಾಸ
'ಕಾವೇರಿ' ಮುಖ್ಯಮಂತ್ರಿಗಳ ಗೃಹ ಕಚೇರಿ 'ಕೃಷ್ಣಾ' ಪಕ್ಕದಲ್ಲಿರುವ ನಿವಾಸ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅಲ್ಲೇ ಇದ್ದರು. ಆದರೆ, ಕುಮಾರಸ್ವಾಮಿ ಜೆ. ಪಿ. ನಗರದ ನಿವಾದಲ್ಲಿದ್ದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಏಳು ತಿಂಗಳು ಕಳೆದರೂ 'ಕಾವೇರಿ'ಗೆ ಬಂದಿರಲಿಲ್ಲ. ಕೊನೆಗೆ ಪೊಲೀಸರ ಮನವಿ ಹಿನ್ನಲೆಯಲ್ಲಿ ವಾಸ್ತವ್ಯ ಬದಲಿಸಿದ್ದರು.

ಹಲವಾರು ತೊಂದರೆಗಳು
'ಕಾವೇರಿ' ನಿವಾಸಕ್ಕೆ ಹೋದ ಮೇಲೆ ಹಲವಾರು ತೊಂದರೆ ಕಾಣಿಸಿಕೊಳ್ಳುತ್ತಿದೆ. ಯಡಿಯೂರಪ್ಪಗೆ ಕೋವಿಡ್ ಸೋಂಕು ತಗುಲಿತು. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಯಿತು. ಆಡಳಿತಾತ್ಮಕ ಸವಾಲುಗಳು ಎದುರಾದವು. ಆದ್ದರಿಂದ, ವಾಸ್ತು ತಜ್ಞರ ಸಲಹೆಯಂತೆ ವಾಸ್ತವ್ಯ ಬದಲಿಸಲು ಯಡಿಯೂರಪ್ಪ ಬಯಸಿದ್ದಾರೆ.

ಅಮವಾಸ್ಯೆ ಬಳಿಕ 'ಧವಳಗಿರಿ'ಗೆ
ಸೆಪ್ಟೆಂಬರ್ 17ರಂದು ಅವಾಮಾಸ್ಯೆ ಇದೆ. ಬಳಿಕ ಯಡಿಯೂರಪ್ಪ ಡಾಲರ್ಸ್ ಕಾಲೋನಿಯಲ್ಲಿರುವ ಖಾಸಗಿ ನಿವಾಸ 'ಧವಳಗಿರಿ'ಗೆ ವಾಸ್ತವ್ಯ ಬದಲಾಣೆ ಮಾಡಲಿದ್ದಾರೆ. ಆದರೆ, 'ಕಾವೇರಿ'ಯನ್ನು ಹಾಗೆಯೇ ಉಳಿಸಿಕೊಳ್ಳಲಿದ್ದು, ಗೃಹ ಕಚೇರಿಗೆ ಡಾಲರ್ಸ್ ಕಾಲೋನಿಯಿಂದಲೇ ಬಂದು ಹೋಗಲಿದ್ದಾರೆ.

ಯಡಿಯೂರಪ್ಪ 'ಧವಳಗಿರಿ' ನಿವಾಸ
'ಧವಳಗಿರಿ' ಯಡಿಯೂರಪ್ಪ ಖಾಸಗಿ ನಿವಾಸ. ಮುಖ್ಯಮಂತ್ರಿಯಾದ ದಿನದಿಂದ ಅವರು ಅಲ್ಲಿಯೇ ಇದ್ದರು. ಆದರೆ, ಭದ್ರತಾ ದೃಷ್ಟಿ, ಗೃಹ ಕಚೇರಿಗೆ ಸಂಚಾರ ನಡೆಸುವುದನ್ನು ತಪ್ಪಿಸಲು 'ಕೃಷ್ಣಾ' ಪಕ್ಕದಲ್ಲಿದ್ದ ಕಾವೇರಿಗೆ ವಾಸ್ತವ್ಯವನ್ನು ಬದಲಾವಣೆ ಮಾಡಿದ್ದರು.












Click it and Unblock the Notifications