ಶನಿವಾರ ಕಲಬುರಗಿ ಜಯದೇವ ಆಸ್ಪತ್ರೆ ಉದ್ಘಾಟನೆ

Posted By:
Subscribe to Oneindia Kannada

ಕಲಬುರಗಿ, ಏಪ್ರಿಲ್ 22 : ಕಲಬುರಗಿಯಲ್ಲಿ ಸ್ಥಾಪನೆಯಾಗಿರುವ ಶ್ರೀ ಜಯದೇವ ಆಸ್ಪತ್ರೆಯ ಶಾಖೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಲೋಕಾರ್ಪಣೆ ಮಾಡಲಿದ್ದಾರೆ. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ.

ಕಲಬುರಗಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮತ್ತು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ಈ ಕುರಿತು ಮಾಹಿತಿ ನೀಡಿದರು. [ಕಲಬುರಗಿಯಲ್ಲಿ ನಿರ್ಮಾಣವಾಗಲಿದೆ ಜಯದೇವ ಆಸ್ಪತ್ರೆ]

hospital

'ಹೈದ್ರಾಬಾದ್-ಕರ್ನಾಟಕ ಪ್ರದೇಶದ ಜನರ ಅನುಕೂಲಕ್ಕಾಗಿ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 100 ಹಾಸಿಗೆಗಳ ಶ್ರೀ ಜಯದೇವ ಆಸ್ಪತ್ರೆಯ ಶಾಖೆಯನ್ನು ಸ್ಥಾಪನೆ ಮಾಡಲಾಗಿದ್ದು, ಏಪ್ರಿಲ್ 23ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆ ಲೋಕಾರ್ಪಣೆ ಮಾಡಲಿದ್ದಾರೆ' ಎಂದು ಸಚಿವರು ಹೇಳಿದರು. [ಕಲಬುರಗಿ : ಶೀಘ್ರದಲ್ಲೇ ಆರಂಭವಾಗಲಿದೆ ಜಯದೇವ ಆಸ್ಪತ್ರೆ]

'ಈ ಆಸ್ಪತ್ರೆ ನಿರ್ಮಾಣದಿಂದಾಗಿ ಈ ಭಾಗದ ಜನರ ಬಹುದಿನಗಳ ಕನಸು ಸಾಕಾರಗೊಂಡಂತಾಗಲಿದೆ. ಇದರಿಂದ ಈ ಭಾಗದ ಜನರು ಹೃದ್ರೋಗ ಚಿಕಿತ್ಸೆಗಾಗಿ ಹೈದರಾಬಾದ್, ಸೋಲ್ಲಾಪುರ ಮತ್ತು ಬೆಂಗಳೂರಿಗೆ ಓಡಾಡುವುದು ತಪ್ಪುತ್ತದೆ' ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದರು.

ಯಾವ-ಯಾವ ಸೇವೆ ಲಭ್ಯ? : 'ಕಲಬುರಗಿ ನಗರದ ಸೇಡಂ ರಸ್ತೆಯ ಜಿಲ್ಲಾ ಆಸ್ಪತ್ರೆ ಪಕ್ಕದಲ್ಲಿನ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಟ್ಟಡದ ಮೂರನೇ ಮಹಡಿಯಲ್ಲಿ ಈ ಆಸ್ಪತ್ರೆಯು ಕಾರ್ಯನಿರ್ವಹಿಸಲಿದೆ' ಎಂದು ಡಾ.ಸಿ.ಎನ್. ಮಂಜುನಾಥ್ ಅವರು ಹೇಳಿದರು.

ಆಸ್ಪತ್ರೆಯಲ್ಲಿ 24 ಗಂಟೆಗಳ ತುರ್ತು ಚಿಕಿತ್ಸಾ ಸೇವೆ, ತುರ್ತು ಚಿಕಿತ್ಸಾ, ಹೊರರೋಗಿಗಳ ಮತ್ತು ಒಳರೋಗಿಗಳ ವಿಭಾಗಗಳು, ವಿಶೇಷ ಕೊಠಡಿಗಳು, ಸಾಮಾನ್ಯ ಕೊಠಡಿಗಳು, ನಾನ್ ಇನ್‍ವೇಸಿವ್ ಪ್ರಯೋಗಾಲಯಗಳು, ಬಯೋ ಕೆಮಿಸ್ಟ್ರಿ/ ಪೆಥಾಲಜಿ ಮತ್ತು ಮೈಕ್ರೋ ಬಯಾಲಜಿ ಪ್ರಯೋಗಾಲಯಗಳು, ಕ್ಯಾತ್ ಲ್ಯಾಬ್, ರೇಡಿಯಾಲಜಿ ಮತ್ತು ಓಪನ್ ಹಾರ್ಟ್ ಸರ್ಜರಿ ವಿಭಾಗಗಳ ಚಿಕಿತ್ಸಾ ಸೌಲಭ್ಯಗಳು ಲಭ್ಯವಿದೆ.


ಆಸ್ಪತ್ರೆ ಹೇಗಿದೆ ಚಿತ್ರಗಳಲ್ಲಿ ನೋಡಿ....

-
-
-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister Siddaramaiah will inaugurate Sri Jayadeva hospital at Gulbarga Institute of Medical Sciences hospital building on Saturday, April 22, 2016.
Please Wait while comments are loading...