ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡ್ವಾಣಿ, ಗೌಡರನ್ನು ಹೇಗೆ ನಡೆಸಿಕೊಂಡಿದ್ದೀರಿ ಗೊತ್ತು: ಮೋದಿಗೆ ಸಿಎಂ ಗುದ್ದು

|
Google Oneindia Kannada News

ಬೆಂಗಳೂರು, ಮೇ 2: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ದರ್ಪದ ಮೂಲಕ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಅವರನ್ನು ಅವಮಾನಿಸಿದ್ದರು ಎಂದು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ಮತ್ತೊಂದು ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

ದೇವೇಗೌಡ ಅವರೊಂದಿಗೆ ಹೇಗೆ ವಿಧೇಯತೆಯಿಂದ ನಡೆದುಕೊಳ್ಳಬೇಕು ಎಂಬ ಬಗ್ಗೆ ನೀವು ಉಚಿತ ಸಲಹೆ ನೀಡುತ್ತಿದ್ದೀರಿ. ನಿಮ್ಮ ಗುರು ಎಲ್‌.ಕೆ. ಅಡ್ವಾಣಿ ಅವರನ್ನು ಮತ್ತು 2014ರಲ್ಲಿ ಇದೇ ದೇವೇಗೌಡ ಅವರನ್ನು ಹೇಗೆ ಗೌರವದಿಂದ ನಡೆಸಿಕೊಂಡಿದ್ದಿರಿ ಎಂಬುದು ನಮಗೆಲ್ಲರಿಗೂ ಗೊತ್ತಿದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ದೇವೇಗೌಡರು ಮನೆಗೆ ಬಂದಾಗ ಅವರ ಕಾರಿನ ಬಾಗಿಲು ತೆಗೆಯುತ್ತೇನೆ: ಮೋದಿದೇವೇಗೌಡರು ಮನೆಗೆ ಬಂದಾಗ ಅವರ ಕಾರಿನ ಬಾಗಿಲು ತೆಗೆಯುತ್ತೇನೆ: ಮೋದಿ

ಅಲ್ಲದೆ, 75 ವರ್ಷದ ಬಿ.ಎಸ್. ಯಡಿಯೂರಪ್ಪ ತಮಗಿಂತ ಕಿರಿಯರಾದ ಮೋದಿ ಅವರ ಕೈಗಳನ್ನು ಹಿಡಿದುಕೊಂಡು ಬಾಗಿ ನಮಿಸುತ್ತಿರುವ ಚಿತ್ರವನ್ನು ಸಹ ಹಂಚಿಕೊಂಡಿರುವ ಸಿದ್ದರಾಮಯ್ಯ, ನಿಮಗೆ ಬಾಗಿ ವಂದಿಸುತ್ತಿರುವ ಈ 75 ವರ್ಷದ ವ್ಯಕ್ತಿಯತ್ತ ಗೌರವ ತೋರಬಹುದಲ್ಲವೇ ಎಂದು ಲೇವಡಿ ಮಾಡಿದ್ದಾರೆ.



ಉಡುಪಿಯಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಭಾಷಣದಲ್ಲಿ ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಮೋದಿ, ದೇವೇಗೌಡ ಅವರು ವಿರೋಧ ಪಕ್ಷದ ಮುಖಂಡರಾಗಿರಬಹುದು. ನಮ್ಮಲ್ಲಿ ಅಭಿಪ್ರಾಯಭೇದವಿರಬಹುದು. ಆದರೆ, ಅವರನ್ನು ಎಂದಿಗೂ ಕೆಟ್ಟದಾಗಿ ನಡೆಸಿಕೊಂಡಿಲ್ಲ. ಅವರು ದೆಹಲಿಗೆ ಬಂದಾಗಲೆಲ್ಲಾ, ಅವರ ಕಾರ್‌ನ ಬಾಗಿಲನ್ನು ನಾನೇ ತೆಗೆಯುತ್ತೇನೆ. ಅವರು ಹಿರಿಯರು, ದೇಶದ ಹಿರಿಯ ನಾಯಕ ಎಂದಿದ್ದರು.

CM Siddaramaiah slams modi on his discourteous comment

ಆದರೆ, ನೀವೆಲ್ಲರೂ ಕೆಲವು ತಿಂಗಳ ಹಿಂದೆ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ, ಗೌಡರನ್ನು ಹೇಗೆ ನಡೆಸಿಕೊಂಡಿದ್ದರು ಎನ್ನುವುದು ನಿಮಗೇ ಗೊತ್ತಿದೆ. ಅದು ನಿಜಕ್ಕೂ ಅವಮಾನಕರ. ಇದು ನಿಮ್ಮ ಸಂಸ್ಕಾರವೇ? ಹಿರಿಯರನ್ನು ಹೀಗೆ ನಡೆಸಿಕೊಳ್ಳುತ್ತಾರೆಯೇ? ಎಂದು ಮೋದಿ ಹರಿಹಾಯ್ದಿದ್ದರು.

English summary
Karnataka chief minister Siddaramaiah slams Narendra Modi again in twitter for his comment on courteous to Devegowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X