ಬ್ರುಸೆಲ್ಸ್ : ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ರಾಕೇಶ್ ಗೆ ಚಿಕಿತ್ಸೆ

Posted By:
Subscribe to Oneindia Kannada

ಬೆಂಗಳೂರು, ಜುಲೈ 27: ಬೆಲ್ಜಿಯಂನಲ್ಲಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅಸ್ವಸ್ಥರಾಗಿರುವ ಸುದ್ದಿ ಬಂದಿದೆ. ಸಿದ್ದರಾಮಯ್ಯ ಅವರು ಈ ವಿಷಯದಲ್ಲಿ ನೆರವು ಕೋರಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕರೆ ಮಾಡಿದ್ದಾರೆ. ಸದ್ಯದ ಮಾಹಿತಿಯಂತೆ ಇಬ್ಬರು ತಜ್ಞ ವೈದ್ಯರು,ರಾಕೇಶ್ ಅವರ ಪತ್ನಿ ಹಾಗೂ ಸಿಎಂ ಪತ್ನಿ ಪಾರ್ವತಮ್ಮ ಅವರು ಬೆಲ್ಜಿಯಂಗೆ ತೆರಳಿದ್ದಾರೆ.

ಇದೀಗ ಬಂದ ಸುದ್ದಿಯಂತೆ ಮಗನನ್ನು ನೋಡಲು ಬೆಲ್ಜಿಯಂಗೆ ಬುಧವಾರ ಸಂಜೆ ವೇಳೆಗೆ ಬೆಂಗಳೂರಿನಿಂದ ಸಿಎಂ ಸಿದ್ದರಾಮಯ್ಯ ಅವರು ಹೊರಡಲಿದ್ದಾರೆ. ಬ್ರೆಲ್ಜಿಯಂನ ಬ್ರುಸೆಲ್ಸ್ ನ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ರಾಕೇಶ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. [ರಾಕೇಶ್ ಅಸ್ವಸ್ಥ, ಕರ್ನಾಟಕ 'ಸಿಎಂ' ಟ್ವೀಟ್ ಬಗ್ಗೆ ಆಕ್ಷೇಪ]

ಸಿದ್ದರಾಮಯ್ಯ ಅವರ ಕರೆಗೆ ಓಗೊಟ್ಟಿರುವ ಸುಷ್ಮಾ ಸ್ವರಾಜ್ ಅವರು ಬೆಲ್ಜಿಯಂನಲ್ಲಿರುವ ಭಾರತೀಯ ರಾಯಭಾರಿಕ ಕಚೇರಿಗೆ ವಿಷಯ ತಿಳಿಸಿದ್ದಾರೆ.ಆದರೆ, ರಾಕೇಶ್ ಅವರು ಬೆಲ್ಜಿಯಂಗೆ ತೆರಳಿರುವ ಬಗ್ಗೆ ಬೆಂಗಳೂರಿನ ಪಾಸ್ ಪೋರ್ಟ್ ಕಚೇರಿಯಲ್ಲಿ ಯಾವುದೇ ಮಾಹಿತಿ ಸಿಕ್ಕಿಲ್ಲ. [ಪ್ರಾಮಾಣಿಕ ರಾಜಕಾರಣಿ ಸಿಎಂ ಸಿದ್ದರಾಮಯ್ಯ ವ್ಯಕ್ತಿಚಿತ್ರ]

CM Siddaramaiah's son Rakesh hospitalized in Belgium

ಸಿದ್ದರಾಮಯ್ಯ ಅವರ ಮಗ ರಾಕೇಶ್ ಅವರು ಈ ಹಿಂದೆ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು, ಹೀರೋ ಅಗಲು ಯತ್ನಿಸಿ ವಿಫಲರಾಗಿದ್ದರು. ನಂತರ ಅಪ್ಪ ಸಿದ್ದರಾಮಯ್ಯ ಪರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು.

ಇದರಿಂದ ರಾಜಕೀಯ ರಂಗದ ಬಗ್ಗೆ ಅವರ ಒಲವು ಹೆಚ್ಚಾಗಿ, ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯುವ ಹುಮ್ಮುಸ್ಸು ಉಕ್ಕಿತ್ತು ಎಂದು ಆಪ್ತ ವಲಯದಿಂದ ಮಾಹಿತಿ ಬಂದಿದೆ.

ರಾಕೇಶ್ ಅವರಿಗೆ ಏನಾಗಿದೆ?: ಸದ್ಯ ಬೆಲ್ಜಿಯಂನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅಮೆರಿಕ ಅಥವಾ ಸಿಂಗಾಪುರದಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲು ಸಿಎಂ ಕುಟುಂಬ ಮುಂದಾಗಿದೆ. ಆದರೆ, ರಾಕೇಶ್ ಅವರ ಅನಾರೋಗ್ಯ ಉಲ್ಬಣವಾಗಲು ಏನು ಕಾರಣ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.


ಆದರೆ, ವಿದೇಶಾಂಗ ಸಚಿವಾಲಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ರಾಕೇಶ್ ಹಾಗೂ ನಾಲ್ವರು ಗೆಳೆಯರು ಫ್ರಾನ್ಸ್ ಹಾಗೂ ಬೆಲ್ಜಿಯಂ ಪ್ರವಾಸಕ್ಕೆ ತೆರಳಿದ್ದರು. ಮಂಗಳವಾರ ರಾತ್ರಿ ಅವರಿಗೆ ಪ್ಯಾಂಕ್ರಿಯಾಟೈಟಿಸ್ ತೊಂದರೆ ಹೆಚ್ಚಾಗಿ ಅಸ್ವಸ್ಥರಾಗಿದ್ದಾರೆ. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka CM Siddaramaiah's elder son Rakesh hospitalized in Belgium. Rakesh Siddaramaiah was on foreign tour with his friends and had suffered from pancreatic issues.Siddaramaiah enquired @SushmaSwaraj to help in this regard.
Please Wait while comments are loading...